ಸಚಿವ ಪುಟ್ಟರಾಜು ತವರೂರು ಚಿನಕುರಳಿ ಮತ್ತು ಹೊನಗಾನಹಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ದಂಡ ಮತ್ತು ರಾಜಧನ ವಸೂಲಿಯಲ್ಲಿ ಸರ್ಕಾರಗಳು ವಿಫಲ

ಸಚಿವ ಪುಟ್ಟರಾಜು ತವರೂರು ಚಿನಕುರಳಿ ಮತ್ತು ಹೊನಗಾನಹಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ದಂಡ ಮತ್ತು ರಾಜಧನ ವಸೂಲಿಯಲ್ಲಿ ಸರ್ಕಾರಗಳು ವಿಫಲ

ಸರ್ಕಾರದ ಬೊಕ್ಕಸಕ್ಕೆ ಕಲ್ಲು ಗಣಿಗಾರಿಕೆಯ ರಾಜಧನವೂ(ರಾಯಲ್ಟಿ) ಪ್ರಮುಖ ಮೂಲ. ಆದರೆ ಕಳೆದ ಹಲವು ವರ್ಷಗಳಿಂದ ಆದಾಯದ ಮೂಲಕ್ಕೂ ಕಲ್ಲು ಬಿದ್ದಿದೆ. ಕಲ್ಲು ಗಣಿಗಾರಿಕೆ ಪ್ರದೇಶಗಳನ್ನು ಗುತ್ತಿಗೆ ಮೂಲಕ ಹರಾಜು ಹಾಕುವ ಗ್ರಾಮ ಪಂಚಾಯ್ತಿಗಳು, ರಾಜಧನ ವಸೂಲಿ ಮಾಡುತ್ತಿಲ್ಲ. ನಿಯಮಗಳ ಪ್ರಕಾರ ರಾಜಧನವನ್ನು ಸರ್ಕಾರಕ್ಕೆ ಪಾವತಿಸದ ಹಿನ್ನೆಲೆಯಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ವಿಧಿಸಿರುವ 5 ಪಟ್ಟು ದಂಡದ ಮೊತ್ತವೂ ಸರ್ಕಾರದ ಬೊಕ್ಕಸಕ್ಕೆ ಜಮೆಯಾಗುತ್ತಿಲ್ಲ. ಕೋಟ್ಯಂತರ ರು.ಮೊತ್ತದ ರಾಜಧನ ಮತ್ತು ದಂಡದ ಮೊತ್ತವನ್ನು ಕೈಬಿಡಬೇಕು ಎಂಬ ಪಂಚಾಯ್ತಿಗಳ ಕೋರಿಕೆಗಳಿಗೆ ಇಲಾಖೆ ಮುಖ್ಯಸ್ಥರಿಂದಲೇ ಅಧಿಕೃತ ಮುದ್ರೆ ಬೀಳುತ್ತಿವೆ. ಈ ಕುರಿತು ಜಿ.ಮಹಂತೇಶ್ ವರದಿ.

 

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್ಹೆಗ್ಡೆ ಅವರು ನೀಡಿದ್ದ ವರದಿ ಸರ್ಕಾರದಲ್ಲಿ ಧೂಳು ತಿನ್ನುತ್ತಿದೆ

ಗಣಿ ನಷ್ಟಕ್ಕೆ ಕಾರಣರಾಗಿರುವ ಕಂಪನಿ, ಉದ್ಯಮಿ ಮತ್ತು ಗುತ್ತಿಗೆದಾರರಿಂದ 5 ಪಟ್ಟು ದಂಡ ವಸೂಲಿ ಮಾಡಬೇಕು ಎಂದು ಲೋಕಾಯುಕ್ತರು ಮಾಡಿದ್ದ ಶಿಫಾರಸ್ಸು ಇರಲಿ, ನಷ್ಟವಾಗಿರುವ ಮೊತ್ತದಲ್ಲಿ ಒಂದೇ ಒಂದು ನಯಾಪೈಸೆಯೂ ಸರ್ಕಾರದ ಬೊಕ್ಕಸಕ್ಕೆ ಬಂದಿಲ್ಲ. ನಿಟ್ಟಿನಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸರ್ಕಾರ ಮತ್ತು ಹಾಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

ವೈಫಲ್ಯದ ನಡುವೆಯೇ ಕಲ್ಲು ಗಣಿಗಾರಿಕೆ ರಾಜಧನ(ರಾಯಲ್ಟಿ) ಪಾವತಿಸುವ ಸಂಬಂಧ ಹೊಸತೊಂದು ಬೆಳವಣಿಗೆ ಸರ್ಕಾರದ ಮಟ್ಟದಲ್ಲಿ ನಡೆದಿದೆ. ಸರ್ಕಾರ ನಿಗದಿಪಡಿಸಿದ್ದ ರಾಜಧನ ಪಾವತಿಸದ ಕಂಪನಿ, ಉದ್ಯಮಿ, ಗುತ್ತಿಗೆದಾರಿಂದ 5 ಪಟ್ಟು ದಂಡ ವಸೂಲಿ ಮಾಡದಿರಲು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯ್ತಿಗಳು ನಿರ್ಧರಿಸಿವೆ

ವಿಪರ್ಯಾಸವೆಂದರೆ ಎರಡೂ ಗ್ರಾಮ ಪಂಚಾಯ್ತಿಗಳ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆ ವಕಾಲತ್ತು ವಹಿಸಿದೆ. ಸಂಬಂಧ 2019 ಮೇ 10 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಎರಡೂ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹಿಂದೆ ನಡೆಸಿರುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿರುವ ರಾಜಧನ ಮತ್ತು ದಂಡದ ಮೊತ್ತವನ್ನು ಕೈ ಬಿಡಲು ಪತ್ರದಲ್ಲಿ  ಕೋರಿದ್ದಾರೆ. ಪತ್ರದ ಪ್ರತಿ 'ಡೆಕ್ಕನ್ನ್ಯೂಸ್‌'ಗೆ ಲಭ್ಯವಾಗಿದೆ.

ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಸಚಿವ ಸಿ.ಎಸ್.ಪುಟ್ಟರಾಜು

ಮತ್ತೊಂದು  ವಿಶೇಷವೆಂದರೆ ಚಿನಕುರುಳಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಸಚಿವ ಸಿ ಎಸ್ಪುಟ್ಟರಾಜು ಅವರ ವಿರುದ್ಧವೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಆರೋಪವೂ ಇದೆ. ಅಷ್ಟೇ ಅಲ್ಲ, ಚಿನಕುರುಳಿ ಗ್ರಾಮ, ಸಚಿವ ಪುಟ್ಟರಾಜು ಅವರ ತವರೂರು ಕೂಡ ಹೌದು

28 ಕೋಟಿ ರೂ ದಂಡ ವಸೂಲು ಮಾಡಲಿಲ್ಲ

ಚಿನಕುರುಳಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಿಂದೆ ನಡೆದಿದ್ದ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿವಿಧ ಕಂಪನಿಗಳು, ಉದ್ಯಮಿ ಮತ್ತು ಗುತ್ತಿಗೆದಾರರಿಗೆ 5 ಪಟ್ಟು ಪ್ರಕಾರ 28 ಕೋಟಿ ರು.ದಂಡ ವಿಧಿಸಿತ್ತು. ಸಂಬಂಧ ಆದೇಶ ಹೊರಡಿಸಿ 7 ವರ್ಷಗಳಾದರೂ ನಯಾಪೈಸೆಯನ್ನೂ ಎರಡೂ ಗ್ರಾಮ ಪಂಚಾಯ್ತಿಗಳು ದಂಡ ವಸೂಲಿ ಮಾಡಲಿಲ್ಲ.  

ಪ್ರಧಾನ ಕಾರ್ಯದರ್ಶಿ ಪತ್ರದಲ್ಲೇನಿದೆ?

ಕಲ್ಲು ಗಣಿಗಾರಿಕೆ ನಡೆಸಿ ಆದಾಯ ಗಳಿಸಿರುವ ಕಂಪನಿ, ಉದ್ಯಮಿ, ಗುತ್ತಿಗೆದಾರರಿಂದ 5 ಪಟ್ಟು ದಂಡ ವಸೂಲು ಮಾಡಲು ನಿರಾಕರಿಸಿರುವ ಎರಡೂ ಗ್ರಾಮ ಪಂಚಾಯ್ತಿಗಳು ಹೊಸತೊಂದು ವಾದವನ್ನು ಮುಂದಿಟ್ಟಿವೆ. ವಾದವನ್ನೇ ಪುರಸ್ಕರಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ

"ರಾಜಧನ ಹಾಗೂ ದಂಡ ಪಾವತಿಸುವ ಕುರಿತು ಚಿನಕುರುಳಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯ್ತಿಗಳು 2018 ಡಿಸೆಂಬರ್‌ 28ರಂದು ನಿರ್ಣಯ ಕೈಗೊಂಡಿದೆ. ರಾಜಧನ ಮತ್ತು ದಂಡವನ್ನು ಹಿಂದೆ ಚಾಲ್ತಿಯಲ್ಲಿದ್ದ ನಿಯಮಗಳು ಮತ್ತು ಆದೇಶಗಳನ್ವಯ ಸಂಗ್ರಹಿಸಲಾಗಿದೆ. ನಿಯಮಾನುಸಾರ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ವೆಚ್ಚ ಮಾಡಲಾಗಿದೆ. ಹೀಗಾಗಿ ದಂಡದ ಬಾಬ್ತನ್ನು ಇಲಾಖೆಗೆ ಪಾವತಿಸುವುದು ಸಾಧ್ಯವಿಲ್ಲ. ಹಿನ್ನೆಲೆಯಲ್ಲಿ ದಂಡ ಪಾವತಿಸುವ ವಿಷಯವನ್ನು ಸರ್ಕಾರವು ಪರಿಗಣಿಸಿ ಪಾವತಿಸಲು ತಿಳಿಸಲಾಗಿರುವ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸುವ ವಿಷಯವನ್ನು ಕೈಬಿಡಬೇಕು ಎಂದು ಕೋರಿದ್ದಾರೆ.

ಚಿನಕುರಳಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 50-60 ವರ್ಷಗಳಿಂದ ಹರಾಜಿನ ಮೂಲಕ ಕಲ್ಲು ಗಣಿಗಾರಿಕೆ ಗುತ್ತಿಗೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಹರಾಜು ಮೊತ್ತದಿಂದ ಸಂಗ್ರಹಿಸಲಾದ ಹಣದಿಂದ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮಗಳ ಮೂಲಭೂತ ಸೌಲಭ್ಯಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ಇಲಾಖೆ ಸಮರ್ಥಿಸಿಕೊಂಡಿದೆ.

ಚಿನಕುರುಳಿ ಗ್ರಾಮ ಪಂಚಾಯ್ತಿಯಲ್ಲಿ 1,30,58,100 ರು.ಗಳ ರಾಜಧನಕ್ಕೆ 5 ಪಟ್ಟು ದಂಡದ ರೂಪದಲ್ಲಿ 6,52,30,500 ರು., ಹೊನಗಾನಹಳ್ಳಿ ಗ್ರಾಮ ಪಂಚಾಯ್ತಿ ಪಾವತಿಸಬೇಕಿದ್ದ ರಾಜಧನ ಮೊತ್ತ 4,51,47,000 ರು.ಗಳಿಗೆ 5 ಪಟ್ಟು ದಂಡದ ರೂಪದಲ್ಲಿ 22,57,39,508 ರು.ಗಳನ್ನು ವಿಧಿಸಿದ್ದ ಗಣಿ, ಭೂ ವಿಜ್ಞಾನ ಇಲಾಖೆ 2012 ಜೂನ್‌ 15ರಂದು ಪತ್ರ ಬರೆದಿತ್ತು

ಅಧಿಕಾರಿಗಳ ವೈಫಲ್ಯದಿಂದಾಗಿಯೇ ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಹೊನಗಾನಹಳ್ಳಿ, ಚಿನಕುರಳಿ,ಬೇಬಿಬೆಟ್ಟಗ್ರಾಮದ ವ್ಯಾಪ್ತಿಯಲ್ಲಿ ಈಗಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.