ಅನೈತಿಕ ಸಂಬಂಧದ ಶಂಕೆ, ತಡರಾತ್ರಿ ಮನೆಗೆ ಬಂದ ಪತಿಯಿಂದ ಘೋರ ಕೃತ್ಯ

ಅನೈತಿಕ ಸಂಬಂಧದ ಶಂಕೆ, ತಡರಾತ್ರಿ ಮನೆಗೆ ಬಂದ ಪತಿಯಿಂದ ಘೋರ ಕೃತ್ಯ

ಬೆಂಗಳೂರು: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಗೆ 17 ಬಾರಿ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಉಮೇಶ್ ಪತ್ನಿಗೆ ಇರಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 17 ಬಾರಿ ಚಾಕುವಿನಿಂದ ಇರಿದರೂ ಗಟ್ಟಿಗಿತ್ತಿ ಪತ್ನಿ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಘಟನೆ ನಡೆದಿದೆ. 7 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿ ದೂರವಾಗಿದ್ದರು. ಒಂದು ವರ್ಷದ ಹಿಂದಷ್ಟೇ ಮತ್ತೆ ಜೊತೆಯಾಗಿದ್ದರು. ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಉಮೇಶ್ ಜಗಳವಾಡುತ್ತಿದ್ದ. ಫೆಬ್ರವರಿ 20 ರಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ಆರೋಪಿ ಅನೈತಿಕ ಸಂಬಂಧ ಹೊಂದಿರುವುದಾಗಿ ಪತ್ನಿಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಕೂಗಾಡಿದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.