ನಿರ್ಭಯಾ ಕುರಿತು ಸಿನಿಮಾ ಮಾಡಿದರೆ ಈ ಪಾತ್ರ ನಾನು ಮಾಡುತ್ತೇನೆ : ನಟಿ ಮಾಳವಿಕಾ

ನಿರ್ಭಯಾ ಕುರಿತು ಸಿನಿಮಾ ಮಾಡಿದರೆ ಈ ಪಾತ್ರ ನಾನು ಮಾಡುತ್ತೇನೆ : ನಟಿ ಮಾಳವಿಕಾ

ಬೆಂಗಳೂರು : ನಿರ್ಭಯಾ ಹಂತಕರಿಗೆ ಇಂದು ತಿಹಾರ್ ಜೈಲಿನಲ್ಲಿ ನೇಣಿಗೆ ಹಾಕಲಾಗಿದೆ ಸತತ ೇಳು ವರ್ಷಗಳ ಹೋರಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕತಾಗಿದೆ.

ಇಡೀ ದೇಶವೇ ಇಂದು ಸಂಭ್ರಮವನ್ನು ಾಚರಿಸಿದೆ ಇದರ ನಡುವೆ  ಹಲವು ಸಿನಿಮಾ ತಾರೆಯರು ಸಹ ೀ ಬೆಳವಣಿಗೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾನಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಕನ್ನಡದ ನಟಿ ಮತ್ತು ರಾಜಕಾರಣಿ ಮಾಳವಿಕಾ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಮಾಳವಿಕಾ ಅವರು ಕೊನೆಗೂ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ಆಗಿದೆ ಇಷ್ಟೇ ಅಲ್ಲದೆ ನಿರ್ಭಯಾ ಬಗ್ಗೆ ಯಾರಾದರೂ ಸಿನಿಮಾ ಮಾಡಿದರೆ ನಾನು ನಿರ್ಭಯಾ ತಾಯಿಯ ಪಾತ್ರದಲ್ಲಿ ನಟಿಸುತ್ತೇನೆ. ನನಗೆ ಆ ಅವಕಾಶ ನೀಡಿ ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಮಗಳಿಗೆ ಆದ ಅನ್ಯಾಯದ ವಿರುದ್ದವಾಗಿ ಸತತವಾಗಿ ಹೋರಾಟ ಮಾಡುತ್ತಲೇ ಬಂದ ಾಶಾದೇವಿ ಕೊನೆಗೂ ಮಗಳಿಗೆ ನ್ಯಾಯ ದೊರಕುವಂತೆ ಮಾಡಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು ವಿರಮಿಸಿದ್ದು ಬಹಳ ಕಡಿಮೆ. ಆಶಾದೇವಿ ಅವರು ಇಂದಿನ ರಾಷ್ಟ್ರೀಯ ಹೀರೋ, ಎಂಥಹಾ ತಾಯಿ ಎಂದು ಮನಃಪೂರ್ವಕವಾಗಿ ಹೊಗಳಿದ್ದಾರೆ.