ಅವಕಾಶ ಸಿಕ್ಕಿದರೆ ಗೃಹಮಂತ್ರಿಗಳ ಸಲಹೆಗಾರನಾಗುವೆ: ಶಂಕರ್ ಬಿದರಿ

ಅವಕಾಶ ಸಿಕ್ಕಿದರೆ ಗೃಹಮಂತ್ರಿಗಳ ಸಲಹೆಗಾರನಾಗುವೆ: ಶಂಕರ್ ಬಿದರಿ

ಯಾದಗಿರಿ: ನಾನು ರಾಜಕೀಯ ಪ್ರವೇಶಿಸಿದ್ದೇ ಬದಲಾವಣೆ ತರುವ ಉದ್ದೇಶದಿಂದ, ಅವಕಾಶ ಸಿಕ್ಕರೆ ಗೃಹಮಂತ್ರಿಗಳ ಸಲಹೆಗಾರನಾಗುವೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ ಬಿದರಿ ಅವರು, ಸರ್ಕಾರದ ಯಾವುದೇ ಹುದ್ದೆಯ ಆಕಾಂಕ್ಷಿ ತಾವಲ್ಲ. ರಾಜಕೀಯ ಪ್ರವೇಶಿಸಿದ್ದೇ ಬದಲಾವಣೆ ತರುವ ಉದ್ದೇಶದಿಂದ, ಅವಕಾಶ ಸಿಕ್ಕರೆ ಗೃಹಮಂತ್ರಿಗಳ ಸಲಹೆಗಾರನಾಗುವೆ.  ಬಿಜೆಪಿ ಹೈಕಮಾಂಡ್ ಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ. ರಾಜ್ಯದ ನೆರೆ ಪರಿಹಾರ ವಿಚಾರಕ್ಕೆ ಸಂಸದರು ಸ್ಪಂದಿಸಬೇಕಿತ್ತು. ಆದರೆ, ಸಂಸದರು ಪ್ರಧಾನಿಯನ್ನು ಭೇಟಿ ಮಾಡಿ ನೆರೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.