‘ಮಮತಾ ಬ್ಯಾನರ್ಜಿ ಅವರಿಗೆ ನಾನು ಕ್ಷಮೆ ಕೇಳುವುದಿಲ್ಲ’: ಪ್ರಿಯಾಂಕಾ ಶರ್ಮಾ

‘ಮಮತಾ ಬ್ಯಾನರ್ಜಿ ಅವರಿಗೆ ನಾನು ಕ್ಷಮೆ ಕೇಳುವುದಿಲ್ಲ’: ಪ್ರಿಯಾಂಕಾ ಶರ್ಮಾ

ದೆಹಲಿ: ಕಳೆದ ವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾವಚಿತ್ರವನ್ನ ರೂಪಾಂತರಗೊಳಿಸಿದ ಆರೋಪದಡಿ 5 ದಿನಗಳ ಕಾಲ ಜೈಲಿನಲ್ಲಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ "ನಾನು ಬ್ಯಾನರ್ಜಿ ಅವರನ್ನು ಕ್ಷಮೆ ಯಾಚಿಸುವುದಿಲ್ಲ" ಎಂದಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಪ್ರಿಯಾಂಕಾ ಶರ್ಮಾ ಅವರನ್ನು ಬಿಡುಗಡೆಗೆ ಅದೇಶ ನೀಡಿ, ಮಮತಾ ಬ್ಯಾನರ್ಜಿಯವರನ್ನು ಪತ್ರದ ಮೂಲಕ ಕ್ಷಮೆ ಕೇಳುವಂತೆ ಮಂಗಳವಾರ ಸುಪ್ರೀಂ ಕೋರ್ಟ್‍ ಸೂಚಿಸಿತ್ತು. ಆದರೆ ‘ನನಗೆ ಜಾಮೀನು ಮಂಜೂರು ಆಗಿ 18 ಗಂಟೆಗಳ ನಂತರ ಪೋಲಿಸರನ್ನು ಬಿಡುಗಡೆ ಮಾಡಿದ್ದಾರೆ, ಬಂಧನದ ವೇಳೆ ನನ್ನ ಕುಟುಂಬ ಮತ್ತು ವಕೀಲರನ್ನ ಭೇಟಿ ಮಾಡಲು ನನಗೆ ಅವಕಾಶವನ್ನು ನೀಡಿರಲಿಲ್ಲ, ಹಾಗಾಗೀ ನಾನು ಯಾವುದೇ ಕ್ಷಮಾಪಣೆ ಕೇಳುವುದಿಲ್ಲ, ಕಾನೂನು ಹೋರಾಟ ಮಾಡುತ್ತೇನೆ’ ಎಂದು ಪ್ರಿಯಾಂಕಾ ಶರ್ಮ ಸುದ್ದಿಗಾರರಿಗೆ ಹೇಳಿದ್ದಾರೆ.

 ನನ್ನ ಬಂಧನದ ಸಮಯದಲ್ಲಿ ಪೋಲಿಸರು ನನಗೆ ಹಿಂಸೆ ನೀಡುತ್ತಿದ್ದರು,ಹಾಗೂ ಜೈಲು ಅಧಿಕಾರಿಗಳು ನನ್ನೊಂದಿಗೆ ಒರಟಾಗಿ ನಡೆದುಕೊಳ್ಳುತ್ತಿದ್ದರು, ಯಾರೊಂದಿಗೂ ಮಾತನಾಡಲು ಅವಕಾಶ ಮಾಡಿಕೊಡುತ್ತಿರಲ್ಲಿಲ್ಲ, ಜೈಲಿನಲ್ಲಿ ನೀರಿನ ಕೊರತೆ ಒಂದು ದೊಡ್ಡ ಸಮಸ್ಯೆಯಾಗಿತ್ತು, ಮಹಿಳಾ ಶೌಚಾಲಯ ದಲ್ಲಿ ನೀರು ಇರುತ್ತಿರಲ್ಲಿಲ್ಲ ಎಂದು ಪ್ರಿಯಾಂಕ ಶರ್ಮಾ ಆರೋಪಿಸಿದ್ದಾರೆ.