ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಯುಎಸ್‌ ಕಾಂಗ್ರೆಸ್‌ ಪ್ರತಿಕ್ರಿಯೆ

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಸುಧಾರಣೆ ಮತ್ತು ಈ ಹಿಂದೆ ಕಾಶ್ಮೀರಿ ಹಿಂದೂಗಳ ವಿರುದ್ಧದ ದೌರ್ಜನ್ಯಗಳ ಬಗ್ಗೆ ಮೌಲ್ಯಮಾಪನ ಮಾಡಲು ಭಾರತೀಯ ಅಮೆರಿಕನ್ನರು ತಮ್ಮ ಪ್ರತಿನಿಧಿಗಳು-ಕಾಂಗ್ರೆಸ್ಸಿಗರನ್ನು ಒತ್ತಾಯಿಸಿದ್ದಾರೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಯುಎಸ್‌ ಕಾಂಗ್ರೆಸ್‌ ಪ್ರತಿಕ್ರಿಯೆ

ಕಾಶ್ಮೀರದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂದು ಇದೇ ಮೊದಲ ಬಾರಿಗೆ ಯುಎಸ್‌ ಕಾಂಗ್ರೆಸ್‌ನ ಪ್ರಮೀಳಾ ಜಯಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸದಾಗಿ ರಚಿಸಲಾದ ಕೇಂದ್ರಾಡಳಿತ ಪ್ರದೇಶದಲ್ಲಿ ಸಂವಹನ ಮತ್ತು ಸಾಮೂಹಿಕ ಬಂಧನಗಳ ಮೇಲಿನ ನಿರ್ಬಂಧಗಳನ್ನು ಕೊನೆಗೊಳಿಸುವಂತೆ ಭಾರತವನ್ನು ಒತ್ತಾಯಿಸುವ ನಿರ್ಣಯಕ್ಕೂ ನನ್ನ ಸಹಮತಿ ಇದೆ ಎಂದು ಹೇಳಿದ್ದಾರೆ.

ಭಾರತ-ಅಮೆರಿಕನ್ ಕಾಂಗ್ರೆಸ್‌ ಜಯಪಾಲ್‌ ಅವರು ಕಳೆದ ವರ್ಷ ಜನಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಿದ್ದ ನಂ. 745 ರ ನಿರ್ಣಯವು ಈಗ 36 ಮಂದಿ ಪ್ರಾಯೋಜಕರನ್ನು ಹೊಂದಿದೆ. ಅವರಲ್ಲಿ ಇಬ್ಬರು ರಿಪಬ್ಲಿಕನ್ ಮತ್ತು 34 ವಿರೋಧ ಪಕ್ಷದ ಡೆಮಾಕ್ರಟಿಕ್ ಪಕ್ಷವನ್ನು ಪ್ರತಿನಿಧಿಸಿದ್ದಾರೆ.

ಕಾಶ್ಮೀರದಲ್ಲಿರುವ ಪರಿಸ್ಥಿತಿ ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗುವಂತೆ ಮಾಡಿದೆ. ಸಾವಿರಾರು ಜನರನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಮತ್ತು ಲಕ್ಷಾಂತರ ಜನರು ಅಂತರ್ಜಾಲ ಮತ್ತು ದೂರವಾಣಿ ಸೇವೆಗಳಿಲ್ಲದೇ ಕಂಗಾಲಾಗಿದ್ದಾರೆ. ಅದಕ್ಕಾಗಿಯೇ ನಾನು ಸಭಾ ನಿರ್ಣಯ 745ಕ್ಕೆ ಸಹಿ ಹಾಕಿದ್ದೇನೆ. ಇಂತಹ ಉಲ್ಲಂಘನೆಗಳು ಸಂಭವಿಸಿದಾಗ ನಾವು ಸುಮ್ಮನಿರುವುದಿಲ್ಲ ಎಂದು ಅಮೇರಿಕಾ ಜಗತ್ತಿಗೆ ತಿಳಿಸಬಹುದು ಎಂದು ಯುಎಸ್‌ ಕಾಂಗ್ರೆಸ್ ನ ಮತ್ತೊಬ್ಬ ಸದಸ್ಯೆ ಡೆಬ್ಬಿ ಡಿಂಗಲ್ ಸೋಮವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ.

ಅಗತ್ಯ ಕ್ರಮಕ್ಕಾಗಿ ಕಾಂಗ್ರೆಸ್ಸಿನ ನಿರ್ಣಯವು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಂದೆ ಇರಿಸಲಾಗಿದೆ. ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್ ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಬಗ್ಗೆ ಭಾರತದ ಅಮೇರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಅವರ ಸಿದ್ಧಪಡಿಸಿದ ವರದಿಯನ್ನು ಪಡೆಯಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ರಾಯಭಾರಿ ಬಂಧಿತರನ್ನು ಭೇಟಿ ಮಾಡಲು ಸಾಧ್ಯವಿದೆಯೋ ಇಲ್ಲವೋ ಎಂಬುವುದರ ಬಗ್ಗೆ ರಾಯಭಾರಿಯು ಯಾವ ನಿರ್ಬಂಧನೆಗಳನ್ನು ಎದುರಿಸಿದ್ದರು ಎಂಬುದನ್ನು ವರದಿಯು ಸೂಚಿಸುತ್ತದೆ. ಇದನ್ನು ತಿಳಿಯಲು ನಾನು ಕಾಯುತ್ತಿದ್ದೇನೆ ಎಂದು ಶೆರ್ಮನ್ ಟ್ವೀಟ್‌ ಮಾಡಿದ್ದಾರೆ.

ಜಸ್ಟರ್ ಸೇರಿದಂತೆ 15 ರಾಯಭಾರಿಗಳ ಗುಂಪು ಕಳೆದ ವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ಅವರು ಆಯ್ದ ರಾಜಕೀಯ ಪ್ರತಿನಿಧಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಕೇಂದ್ರ ಪ್ರಕಟಣೆಗೆ ಒಂದು ದಿನ ಮೊದಲು ಅಂದರೆ, ಆಗಸ್ಟ್ 4 ರಂದು ಜಮ್ಮು ಮತ್ತು ಕಾಶ್ಮೀರದಾದ್ಯಂತ ಇಂಟರ್‍ನೆಟ್ ಸೇವೆಗಳು, ಲ್ಯಾಂಡ್‍ಲೈನ್ ಮತ್ತು ಮೊಬೈಲ್ ಫೋನ್‌ ಕರೆಗಳನ್ನು ಕಡಿತಗೊಳಿಸಿತ್ತು.

ಮೊಬೈಲ್ ಅಂತರ್ಜಾಲ ಹೊರತುಪಡಿಸಿ ಹೆಚ್ಚಿನ ಸೇವೆಗಳನ್ನು ಒಂದು ವಾರದಲ್ಲಿ ಜಮ್ಮುವಿನಲ್ಲಿ ಪುನಃ ಸ್ಥಾಪಿಸಲಾಗಿದ್ದರೂ, ಕಾಶ್ಮೀರವು ಸ್ಥಿರ ದೂರವಾಣಿ, ಪೋಸ್ಟ್‌ ಪೇಯ್ಡ್‌ ಮತ್ತು ಪ್ರೀ ಪೇಯ್ಡ್‌  ಸೇವೆಗಳನ್ನು ಹಂತಹಂತವಾಗಿ ಆರಂಭಿಸಿದೆ.

ಆದಾಗ್ಯೂ, ಕೆಲವು ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಹೊರತುಪಡಿಸಿದರೆ, ಇಡೀ ಕಣಿವೆಯಲ್ಲಿ ಅಂತರ್ಜಾಲವನ್ನು ನಿರ್ಬಂಧಿಸಲಾಗಿದೆ. ಲಡಾಖ್‍ನ ಕಾರ್ಗಿಲ್ ಜಿಲ್ಲೆಯಲ್ಲಿ 145 ದಿನಗಳವರೆಗೆ ಕಡಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನಃ ಆರಂಭಿಸಲಾಗಿದೆ.

ಕಳೆದ ವರ್ಷ ಆಗಸ್ಟ್ 5 ರಂದು 370 ಕಲಂ ನಿಬಂಧನೆಗಳನ್ನು ರದ್ದುಪಡಿಸಿದ ನಂತರ 15 ರಾಷ್ಟ್ರಗಳ ರಾಯಭಾರಿಗಳ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಇದಕ್ಕೂ ಮೊದಲು ದೆಹಲಿ ಮೂಲದ ಥಿಂಕ್ ಟ್ಯಾಂಕ್ ಇಂಟರ್‌ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಫಾರ್‌ ಅಲೈಯನ್ಸ್‌ ಸ್ಟಡೀಸ್‌ ನ 23 ಇಯು ಸಂಸದರನ್ನು ಎರಡು ದಿನಗಳ ಭೇಟಿಗೆ ಕರೆದೊಯ್ದಿತ್ತು.

ಇದರ ಮಧ್ಯ ಹಿಂದೂ ಅಮೇರಿಕನ್ ಫೌಂಡೇಶನ್ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಸುಧಾರಣೆ ಮತ್ತು ಈ ಹಿಂದೆ ಕಾಶ್ಮೀರಿ ಹಿಂದೂಗಳ ವಿರುದ್ಧದ ದೌರ್ಜನ್ಯಗಳ ಬಗ್ಗೆ ಮೌಲ್ಯಮಾಪನ ಮಾಡಲು ಭಾರತೀಯ ಅಮೆರಿಕನ್ನರು ತಮ್ಮ ಪ್ರತಿನಿಧಿಗಳು-ಕಾಂಗ್ರೆಸ್ಸಿಗರನ್ನು ಒತ್ತಾಯಿಸಿದ್ದಾರೆ.

ಹಾಗೆಯೇ ಕಳೆದ ಹಲವಾರು ವಾರಗಳಲ್ಲಿ ಅಮೆರಿಕದ ಆರಕ್ಕೂ ಹೆಚ್ಚು ಶಾಸಕರು ಕಾಶ್ಮೀರದ ಬಗ್ಗೆ ಭಾರತದ ನಿಲುವನ್ನು ಬೆಂಬಲಿಸಿದ್ದಾರೆ. ಬಹುತೇಕ ಈ ಎಲ್ಲ ಜನಪ್ರತಿನಿಧಿಗಳು ತಮ್ಮ ನಿರ್ಣಯವನ್ನು ಜನಪ್ರತಿನಿಧಿಗಳ ಸಭೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ನಾಗರಿಕರಿಗೆ ಸಮಾನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅವಕಾಶಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯಲ್ಲಿ ಭಾರತದೊಂದಿಗೆ ಕೈ ಜೋಡಿಸಲಗಿದೆ ಎಂದು ಕಳೆದ ವಾರ ಪೆನ್ಸಿಲ್ವೇನಿಯಾದ ಕಾಂಗ್ರೆಸ್ಸಿಗ ಸ್ಕಾಟ್ ಪೆರ್ರಿ ಹೇಳಿದ್ದರು.

ಭಾರತೀಯ ಸಂಸತ್ತಿನ ಮೂರನೇ ಎರಡರಷ್ಟು ಜನರು ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯನ್ನು ಬದಲಾಯಿಸಲು ಮತ ಚಲಾಯಿಸಿದ್ದರು. ಈ ಮತವು ಆರ್ಥಿಕ ಅವಕಾಶವನ್ನು ಒದಗಿಸುವ ಮೂಲಕ ಮತ್ತು ಈ ಪ್ರದೇಶವನ್ನು ಹದಗೆಡುತ್ತಿರುವ ಆರ್ಥಿಕತೆ ಮತ್ತು ಹೆಚ್ಚಿನ ಯುವ ನಿರುದ್ಯೋಗವನ್ನು ಪರಿಹರಿಸಲು ಭಾರತ ಸರ್ಕಾರಕ್ಕೆ ಅವಕಾಶ ನೀಡಿತು ಎಂದು ಅವರು ಹೇಳಿದ್ದರು.