ಹಸ್ಟನ್: ‘ಹೇಗಿದ್ದೀರಿ ಮೋದಿ’ ಸಮಾವೇಶಕ್ಕೆ 50 ಸಾವಿರ ಜನರ ನೋಂದಣಿ ನಿರೀಕ್ಷೆ

ಹಸ್ಟನ್: ‘ಹೇಗಿದ್ದೀರಿ ಮೋದಿ’ ಸಮಾವೇಶಕ್ಕೆ 50 ಸಾವಿರ ಜನರ ನೋಂದಣಿ ನಿರೀಕ್ಷೆ

ಹಸ್ಟನ್ : ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಸಮಾವೇಶವು ಟೆಕ್ಸಸ್ ಇಂಡಿಯನ್ ಫೋರಂ ಸೆ. 22 ರಂದು ಹಸ್ಟನ್ ನ ಎನ್ ಆರ್ ಜಿ ಫುಟ್ಬಾಲ್ ಸ್ಟೇಡಿಯಂ ನಲ್ಲಿ ಆಯೋಜಿಸಿದ್ದ ‘ಹೇಗಿದ್ದೀರಿ ಮೋದಿ’ ಸಮಾವೇಶಕ್ಕೆ ಈಗಾಗಲೇ ಸುಮಾರು 40 ಸಾವಿರಕ್ಕೂ ಅಧಿಕ ನಾಗರಿಕರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

2014ರಲ್ಲಿ ಈ ಮೊದಲು ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿದ್ದು, ನಂತರದ ದಿನಗಳಳ್ಲಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಅವರು ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಟೆಕ್ಸಸ್ ಇಂಡಿಯನ್ ಫೋರಂ ತಿಳಿಸಿದೆ.

ಈಗಾಗಲೇ 39 ಸಾವಿರ ನಾಗರಿಕರು ನೋಂದಣಿ ಮಾಡಿಸಿದ್ದು, ಸುಮಾರು 50 ಸಾವಿರವರೆಗೂ ಹೆಚ್ಚಬಹುದು. 1 ಸಾವಿರ ನಾಗರಿಕರು ಸ್ವಯಂ ಸೇವಕರು ಕೆಲಸ ನಿರ್ವಹಿಸುತ್ತಿದ್ದು, 650 ಹೆಚ್ಚು ಸಂಘಟನೆಗಳು ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಸಿದ್ಧವಾಗಿದೆ. ಈ ಸಮಾವೇಶದಿಂದ ಅಮೆರಿಕ ಹಾಗೂ ಭಾರತ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಯಾವುದೇ ನಿರ್ಬಂಧವಿಲ್ಲ  ಎಂದು ಹೇಳಿದೆ.