ಸಿಪಿಎಂ ನಾಯಕ ಮೊಹಮ್ಮದ್ ಯುಸೂಫ್ ಬಂಧನ ವಿರುದ್ಧ ಹೇಬಿಯಸ್ ಕಾರ್ಪಸ್ ಅರ್ಜಿ

ಸಿಪಿಎಂ ನಾಯಕ ಮೊಹಮ್ಮದ್ ಯುಸೂಫ್ ಬಂಧನ ವಿರುದ್ಧ ಹೇಬಿಯಸ್ ಕಾರ್ಪಸ್ ಅರ್ಜಿ

ದೆಹಲಿ: ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಮುಖ ನಾಯಕ ಮೊಹಮ್ಮದ್ ಯುಸೂಫ್ ತರಿಗಾಮಿ ಅವರು ಕಾಣೆಯಾಗಿದ್ದರ ಬಗ್ಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಅವರು ಸುಪ್ರೀಂಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಪ್ರಕರಣ ದಾಖಲಿಸಿದ್ದಾರೆ.

ವಿಭಜಿತ ಜಮ್ಮು-ಕಾಶ್ಮೀರದ ಕುಲ್ಗಂ ಕ್ಷೇತ್ರದ ಶಾಸಕರಿದ್ದು, ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಜಮ್ಮು-ಕಾಶ್ಮೀರದ ಸ್ವಾಯತ್ತೆ ಹಿಂಪಡೆದ ನಂತರ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ಹೇರಲಾದ ನಿಷೇಧಾಜ್ಞೆಯಡಿ ಆ. 5 ರಂದು ಮೊಹಮ್ಮದ್ ಯುಸೂಫ್ ಅವರನ್ನು ಬಂಧಿಸಲಾಗಿತ್ತು.

ಮೊಹಮ್ಮದ್ ಯುಸೂಫ್ ಅವರನ್ನು ಭೇಟಿಯಾಗಲು ಆ. 9 ರಂದು ಶ್ರೀನಗರಕ್ಕೆ ತೆರಳಿದ್ದ ಸೀತಾರಾಮ ಯಚೂರಿ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು.

ಮೊಹಮ್ಮದ್ ಯುಸೂಫ್ ಅವರ ಬಂಧನವು ಸಂವಿಧಾನದ  21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದು, ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಮಣ್ಣ ಅವರು ಆ. 26ಕ್ಕೆ ಮುಂದೂಡಿದ್ದಾರೆ.