ಹರಿಯಾಣ ಜೈಲುಗಳಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ: ವಿಶ್ವ ಮಟ್ಟದಲ್ಲಿ ಭಾರತದ ಮಾನ ಹರಾಜು

ಹರಿಯಾಣ ಜೈಲುಗಳಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ: ವಿಶ್ವ ಮಟ್ಟದಲ್ಲಿ ಭಾರತದ ಮಾನ ಹರಾಜು

ಭಾರತದ ಸೆರೆಮನೆಗಳ ಪರಿಸ್ಥಿತಿ ಹೇಗಿರಬಹುದು, ಕೈದಿಗಳನ್ನು ಎಷ್ಟು ಅಮಾನವೀಯವಾಗಿ ನಡೆಸಿಕೊಳ್ಳಬಹುದು, ಸಾಬೂನು, ಎಣ್ಣೆಯಂಥ ಕನಿಷ್ಠ ಅಗತ್ಯಗಳನ್ನೂ ಪೂರೈಸದೇ ವಂಚಿಸುತ್ತಿರುವುದು, ಮಹಿಳಾ ಕೈದಿಗಳ ಬಗೆಗಿನ ಅನಾಗರಿಕ ನಿಲುವುಗಳನ್ನು ನೋಡಬೇಕೆಂದರೆ ಹರಿಯಾಣದ ಸೆರೆಮನೆಗಳೇ ಉತ್ತಮ ಉದಾಹರಣೆಗಳಾಗಬಹುದು.  

ಹರಿಯಾಣದಲ್ಲಿ ಮಾನವ ಹಕ್ಕಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಇಲ್ಲಿನ ಕಾರಾಗೃಹಗಳಲ್ಲಿನ ಮಹಿಳಾ ಕೈದಿಗಳ ಸ್ಥಿತಿ ಶೋಚನೀಯವಾಗಿದೆ ಸಮರ್ಪಕ ಸೌಲಭ್ಯಗಳಿಲ್ಲದೆ ಕೈದಿಗಳು ದಯನೀಯ ಸ್ಥಿತಿಯಲ್ಲಿದ್ದಾರೆ.

ಕಾಮನ್ ವೆಲ್ತ್ ಹ್ಯೂಮನ್ ರೈಟ್ ಇನಿಷಿಯೇಟಿವ್ (CNRI)  ಹಾಗೂ ಹರಿಯಾಣ ರಾಜ್ಯ ಕಾನೂನೂ ಸೇವೆಗಳ ಪ್ರಾಧಿಕಾರದ ಅಧ್ಯಯನದಿಂದ ಈ ವಿಷಯ ಬಹಿರಂಗಗೊಂಡಿದೆ. ವ್ಯವಸ್ಥಿತ ಆರೋಗ್ಯ ಸೇವೆಗಳ ಕೊರತೆ, ಸಿಬ್ಬಂದಿ ಕೊರತೆ, ಮಿತಿಮೀರಿದ ಕೈದಿಗಳ ಸಂಖ್ಯೆ, ವರ್ಣಭೇದ ನೀತಿ ಜೈಲಿನಲ್ಲಿನ ಅವ್ಯವಸ್ಥೆಗೆ ಕಾರಣವಾಗಿದೆ ಎಂಬುದು ಅಧ್ಯಯನದಿಂದ  ಬೆಳಕಿಗೆ ಬಂದಿದೆ.

ಈ ಅಧ್ಯಯನವು ರಾಜ್ಯದ 19 ಜೈಲುಗಳಲ್ಲಿನ 10,062 ಕೈದಿಗಳ ಸಮೀಕ್ಷೆಯನ್ನು ಒಳಗೊಂಡಿದ್ದು ರಾಜ್ಯ ಸರ್ಕಾರವು ಎಲ್ಲೆಡೆ ಸೂಕ್ತ ಮೂಲ ಸೌಕರ್ಯ ಸೂಕ್ತ ನಿರ್ವಹಣೆ ಮತ್ತು ಮೂಲಭೂತ ಸ್ವಚ್ಚತೆ ಕೈಗೊಂಡಿದೆ 

ಇನ್ ಸೈಡ್ ಹರಿಯಾಣ ಪ್ರಿಸನ್ಸ್ (ಹರಿಯಾಣ ಕಾರಾಗೃಹದ ಒಳಗೆ) ಎಂಬ ಶೀರ್ಷಿಕೆಯಡಿ CHRI ತಂಡವು 475 ಕೈದಿಗಳು, ಜೈಲಿನ ಅಧಿಕಾರಿಗಳು ಹಾಗೂ ಕಾನೂನು ಸೇವೆಗಳಿಗೆ ಸಂಬಂಧಿಸಿದ ಸಂಸ್ತೆಗಳ ಪ್ರತಿನಿಧಿಗಳೂಂದಿಗೆ ಡಿಸೆಂಬರ್ 2017 ರಿಂದ ಮೇ 2018 ರವರೆಗೆ ಸಂವಾದ ನಡೆಸಿ ಈ ವರದಿ ಸಿದ್ಧಪಡಿಸಿದೆ.

ಇಲ್ಲಿನ ಯಾವುದೇ ಜೈಲುಗಳಲ್ಲಿ ಸ್ವಚ್ಚತೆಯ ಕೊರತೆಯಿಲ್ಲ, ಗಲೀಜಿನಿಂದ ಕೂಡಿಲ್ಲ. ಅಲ್ಲದೇ ಇಲ್ಲಿನ ಅಸಮರ್ಪಕ ನಿರ್ವಹಣೆ ಮತ್ತು ಆಹಾರ ಸಮಸ್ಯೆಯ ಬಗ್ಗೆಯು ಯಾವುದೇ ದೂರುಗಳು ಬಂದಿಲ್ಲ ಆದರೆ ಲಾಜಿಸ್ಟಿಕ್ಸ್ ಮತ್ತು ಮ್ಯಾನೆಜ್ ಮೆಂಟ್ ವಿಚಾರದಲ್ಲಿ ಇಲ್ಲಿನ ಜೈಲುಗಳ ಕುಂದು ಕೊರತೆ ಎದುರಿಸುತ್ತಿವೆ.

ರಾಜ್ಯದಲ್ಲಿ 19 ಜೈಲುಗಳ ಪೈಕಿ 3 ಕೇಂದ್ರ ಕಾರಾಗೃಹಗಳಿದ್ದು, ಉಳಿದವು ಜಿಲ್ಲಾ ಕಾರಾಗ್ರಹಗಳಾಗಿವೆ 11 ಕಾರಾಗೃಹಗಳು ಮಿತಿಮೀರಿದ ಕೈದಿಗಳಿಂದ ತುಂಬಿವೆ. ಅಂಬಾಲ ಮತ್ತು ಹಿಸ್ಸಾರ್ – 1 ಕೇಂದ್ರ ಕಾರಾಗೃಹಗಳು, ರೆವಾರಿ, ಕುರುಕ್ಷೇತ್ರ, ಕೈಥಾಲ್, ಸಿರ್ಸಾ, ಜಿಂದ್ ಪಾಣಿಪಟ್, ನರ್ನೌಲ್ ಮತ್ತು ಭಿವಾಣಿ ಜಿಲ್ಲಾ ಕಾರಾಗೃಹಗಳಲ್ಲೂ ಇದೇ ದುಸ್ಥಿತಿ ತಾಂಡವಾಡುತ್ತಿದೆ. ಭಾರತದಲ್ಲಿನ ಜೈಲುಗಳು ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸುವ ಅಗತ್ಯ ಯಾಕಿದೆ ಎಂಬ ಪ್ರಶ್ನೆಗೆ ಇದೇ ಸೂಕ್ತ ಕಾರಣ ಎನ್ನಬಹುದು.

ಜೈಲುಗಳಲ್ಲಿ ಮಿತಿಮೀರಿದ ಕೈದಿಗಳ ಸಂಖ್ಯೆ ಒಂದೆಡೆಯಾದರೆ ಇನ್ನೊಂದೆಡೆ ಬಹಳಷ್ಟು ಜೈಲುಗಳಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 18 ಕಾರಾಗೃಹಗಳಲ್ಲಿನ ಅಂಕಿ ಅಂಶಗಳ ಪ್ರಕಾರ ಮಂಜೂರಾದ 3193 ಹುದ್ದೆಗಳ ಪೈಕಿ ಸರಾಸರಿ ಶೇ. 20 ರಷ್ಟು ಸಿಬ್ಬಂದಿ ಕೊರತೆ ಇದೆ. ಗುರುಗ್ರಾಮ ಮತ್ತು ಫರಿದಾಬಾದ್ ಜಿಲ್ಲಾ ಕಾರಗೃಹಗಳಲ್ಲಿ ಅತ್ಯಧಿಕ ಶೇ 44 ರಷ್ಟು ಸಿಬ್ಬಂದಿ ಕೊರತೆ ಇದೆ.

ವರದಿಗಳ ಪ್ರಕಾರ ಯುವ ಕೈದಿಗಳು ಮತ್ತು ಇತರ ಕೈದಿಗಳು ಕಾರಾಗೃಹದಿಂದ ಕಾಣೆಯಾಗುತ್ತಿದ್ದಾರೆ ದೇಹ ಶೋಧ ವಿಚಾರಕ್ಕೆ ಬಂದಾಗ ಕೈದಿಗಳ ಗೌರವ ಕಾಪಾಡುವ ಅಥವಾ ಅವರ ಹಿತ ಕಾಯುವ ಯಾವುದೇ ಸೂಕ್ತ ಮಾರ್ಗದರ್ಶನಗಳಿಲ್ಲ. 

ವರದಿ ಪ್ರಕಾರ ಕಾರಾಗೃಹ ಇಲಾಖೆಯು ಕೈದಿಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸುತ್ತಿದೆಯಾದರೂ ತೈಲ ಅಥವಾ ಸಾಬೂನನ್ನು ಕ್ಯಾಂಟೀನ್ ಅಥವಾ ಸಂಬಂಧಿಗಳ ಮೂಲಕ ಪಡೆದುಕೊಳ್ಳಬೇಕಾಗಿದೆ. ಆದರೆ ಹಣ ಅಥವಾ ಕುಟುಂಬ ಭೇಟಿ ನೀಡುವ ಕುಟುಂಬ ಸದಸ್ಯರಿಲ್ಲದ ಕೈದಿಗಳು ಇತರ ಕೈದಿಗಳ ಕೆಲಸ ಮಾಡಿ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ. 

ಇಲ್ಲಿ ಇನ್ನೊಂದು ಗಮರ್ನಾಹ ಅಂಶವೆಂದರೆ ಕೈದಿಗಳನ್ನು ಕಾರಾಗೃಹಕ್ಕೆ ಸೇರಿಸುವ ವೇಳೆ ವೈದ್ಯಕೀಯ ಪರೀಕ್ಷೆಗೊಳಪಡಿಸಿದರೂ ಅವರ ದೇಹದಲ್ಲಿನ ಗಾಯಗಳ ಬಗ್ಗೆ ಉಲ್ಲೇಖಿಸುವುದಿಲ್ಲ ಇದು ಕಾರಾಗೃಹ ಅಧಿಕಾರಗಳ ನಿರ್ಲಕ್ಷವೋ ಅಥವಾ ಕೈದಿಗಳ ಕುರಿತ ತಾತ್ಸಾರವೋ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. 

ಅಲ್ಲದೆ ಕೆಲ ಕಾರಾಗೃಹಗಳಲ್ಲಿ ತಜ್ಞ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು ನಿತ್ಯ 80-100 ಕೈದಿಗಳ ತಪಾಸಣೆ ನಡೆಸಬೇಕಿರುವುದರಿಂದ ಕೈದಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಅಲ್ಲದೆ ಸಾಕಷ್ಟು ಕಾರಾಗೃಹಗಳಲ್ಲಿ ದಂತ ವೈದ್ಯರು , ಚರ್ಮವೈದ್ಯರು, ಮಾನಸಿಕ ತಜ್ಞರ ಕೊರತೆ ಇದೆ. ವಿವಿಧೆಡೆ ಸಮರ್ಪಕ ಪ್ರಮಾಣದ ಔಷಧಿಗಳು ಪೂರೈಕೆಯಾಗುತ್ತಿಲ್ಲ 

ಕೈದಿಗಳನ್ನು ಭೇಟಿಯಾಗಲು ಬರುವ ಸಂಬಂಧಿಕರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದು ಬಹುದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ. ಆಧಾರ್ ಕಾರ್ಡ್ ಇಲ್ಲದೆ ಬರುವವರನ್ನು ತಮ್ಮವರ ಭೇಟಿಗೆ ಬಿಡುವುದಿಲ್ಲ. ಇದು ಕೈದಿಗಳ ಮನಸ್ಸಿಗೆ ನೋವುಂಟು ಮಾಡಿದೆ.

ಹರಿಯಾಣ ಕಾರಾಗೃಹದ ನಿಯಮದ ಪ್ರಕಾರ ಎಲ್ಲಾ ಕೈದಿಗಳಿಗೆ ಪ್ರವೇಶಾತಿ ವೇಳೆ ಹಿಸ್ಟರಿ ಟಿಕೆಟ್ ನೀಡಲಾಗುತ್ತದೆ ಇದು ಅವರವರ ಪ್ರಕರಣ ಸ್ಥಿತಿಗತಿಯನ್ನು ತಿಳಿಸುತ್ತದೆ. ಆದರೆ ಈಗ ಸೆರೆಮನೆ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಳಿಸಿರುವುದರಿಂದ ಈ ಮಾಹಿತಿ ಕಂಪ್ಯೂಟರ್ ನಲ್ಲಿ ಮಾತ್ರ ಲಭ್ಯ ಇರುತ್ತದೆ. ಇದರಿಂದಾಗಿ ಕೈದಿಗಳಿಗೆ ತಮ್ಮ ಪ್ರಕರಣದ ಸ್ಥಿತಿಗತಿ ತಿಳಿಯಲು ಹೆಚ್ಚು ತೊಂದರೆಯಾಗುತ್ತದೆ ಅಲ್ಲದೆ ತಮ್ಮ ವಕೀಲರು ಹಾಗೂ ಸಂಬಂಧಿಗಳ ಭೇಟಿಗೆ ತೊಂದೆಯಾಗುತ್ತದೆ ಇದಲ್ಲದೆ ಸಾಕಷ್ಟು ಕೈದಿಗಳಿಗೆ ಈ ತಂತ್ರಜ್ಞಾನದ ಅರಿವೇ ಇಲ್ಲ.

ಶೇ 20 ರಷ್ಟು ಕೈದಿಗಳಿಗೆ ವಕೀಲನೂ ಇಲ್ಲದಿರುವುದು ಹರಿಯಾಣದ ಕಾರಾಗೃಹಗಳ ಅವ್ಯವಸ್ತೆಗೆ ಮತ್ತೊಂದು ನಿದರ್ಶನ .2017 ರ ಒಂದು ವರ್ಷದಲ್ಲೇ 343 ಕಾನೂನು ಅರಿವು ಶಿಬಿರಗಳನ್ನು ನಡೆಸಲಾಗಿದೆ. ಅದಾಗ್ಯೂ ಸಂದರ್ಶನಕ್ಕೊಳಪಡಿಸಿದ 475 ಕೈದಿಗಳಲ್ಲಿ ಶೇ 90 ರಷ್ಟು ಕೈದಿಗಳಿಗೆ ವಕೀಲರೇ ಇರಲಿಲ್ಲ. ಎಲ್ಲ ಕಾರಾಗೃಹಗಳಲ್ಲೂ ಕಾನೂನು ಸೆವಾ ಕೇಂದ್ರಗಳಿದ್ದರೂ ಕೈದಿಗಳಿಗೆ ಅದ್ಯಾವುದು ಉಪಯೋಗಕ್ಕೆ ಬರುತ್ತಿಲ್ಲ. 

ವರದಿ ಪ್ರಕಾರ ಹರಿಯಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಾರಾಗೃಹವಿಲ್ಲ 19 ಜೈಲುಗಳ ಪೈಕಿ 15 ರಲ್ಲಿ ಮಹಿಳಾ ವಿಭಾಗಗಳಿದ್ದು ಇವುಗಳಲ್ಲಿ 650 ಕೈದಿಗಳನ್ನ ಮಾತ್ರ ಇರಿಸಬಹುದು (2017 ರ ಡಿಸೆಂಬರ್ ಪ್ರಕಾರ) ಹರಿಯಾಣದಲ್ಲಿ ಮಹಿಳಾ ಕೈದಿಗಳ ಪ್ರಮಾಣ ಶೇ 6 ರಷ್ಟಿದೆ ಇದು ರಾಷ್ಟ್ರೀಯ ಸರಾಸರಿ  ಶೇ 4.3 ಕ್ಕಿಂತ ಸ್ವಲ್ಪ ಹೆಚ್ಚಿದೆ.

ಇನ್ನೂ ದುರಂತವೆಂದರೆ ರಾಜ್ಯದಲ್ಲಿನ ಯಾವುದೇ ಜೈಲಿನಲ್ಲಿ ಕಾಯಂ ಮಹಿಳಾ ವೈದ್ಯರಿಲ್ಲ ಕರ್ನಲ್ ಜಿಲ್ಲಾ ಕಾರಾಗೃಹದಲ್ಲಿನ ಮಹಿಳಾ ಕೈದಿಗಳಿಗೆ ಸ್ಯಾನಿಟರಿ ನ್ಯಾಪ್ ಕಿನ್ಸ್ (ಪ್ಯಾಡ್ಸ್)ಗಳನ್ನೇ ಕೊಡುತ್ತಿಲ್ಲ ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವಂಥದ್ದು.

ಹರಿಯಾಣ ಕಾರಾಗೃಹಗಳಲ್ಲಿನ ಅವ್ಯವಸ್ಥೆಗಳಿಗೆ ಇನ್ನೊಂದು ನಿದರ್ಶನವೆಂದರೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ 42 ಕೈದಿಗಳಿಗೆ ಮಾನಸಿಕ ತಜ್ಞರೇ ಇಲ್ಲ ಇನ್ನೂ ಅಘಾತಕಾರಿ ಅಂಶವೆಂದರೆ ಇಲ್ಲಿನ ಜೈಲುಗಳಲ್ಲಿ ಸರ್ಕಾರದಿಂದ ನಿಯೋಜನೆಗೊಂಡ ಕಾಯಂ ಮಾನಸಿಕ ತಜ್ಞರೇ ಇಲ್ಲ ಸಾಮಾನ್ಯ ವೈದ್ಯರೇ ಅಲ್ಲಿನ ಮಾನಸಿಕ ರೋಗಿಗಳನ್ನು ನೋಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಈ ಕಾರಾಗೃಹಗಳಲ್ಲಿನ ಆರೋಗ್ಯ ಅಧಿಕಾರಿಗಳೇ ಈ ಸ್ಪೋಟಕ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

ಅಲ್ಲದೆ ಈ ಕಾರಾಗೃಹಗಳಲ್ಲಿರುವ ವಿದೇಶಿ ಕೈದಿಗಳ ಮೇಲೆ ವರ್ಣಭೇದ ಮಾಡಲಾಗುತ್ತಿದೆ ಎಂಬ ಸ್ಪೋಟಕ ಮಾಹಿತಿಯು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಹತ್ತು ಕಾರಾಗೃಹಗಳಲ್ಲಿರುವ 48 ವಿದೇಶಿ ಕೈದಿಗಳೇ ಇದನ್ನ ಹೇಳಿಕೊಂಡಿದ್ದು ತಮ್ಮನ್ನು ಕೀಳಾಗಿ ಕಾಣಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪೈಕಿ ಬಹಳಷ್ಟು ಕೈದಿಗಳು ಬಾಂಗ್ಲಾದೇಶ, ನೇಪಾಳ ಮತ್ತು ಆಫ್ರಿಕಾ ದೇಶಗಳಿಗೆ ಸೇರಿದ್ದು ಕೇವಲ 6 ಕೈದಿಗಳಿಗೆ ಮಾತ್ರ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಇವರಿಗೆ ವಕೀಲರೇ ಇಲ್ಲ 28 ಮಂದಿ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲೇ ಇಲ್ಲ ದೂರವಾಣಿ ಸೌಲಭ್ಯ ಅಧಿಕೃತವಾಗಿದ್ದರೂ ಕಾರಾಗೃಹ ಅಧಿಕಾರಿಗಳು ಮಾತ್ರ ಕರೆ ಮಾಡಲು ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ವಿದೇಶಿ ಕೈದಿಗಳು ಸ್ಥಳೀಯ ಸಹ ಕೈದಿಗಳಿಂದ ವರ್ಣಭೇದ ನೀತಿಯ ಅಮಾನವೀಯತೆಗೆ ಒಳಗಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಹರಿಯಾಣ ಕಾರಾಗೃಹಗಳು ಅವ್ಯವಸ್ತೆಯ ಅಗರವಾಗಿದೆ. ವಿಶ್ವ ಮಟ್ಟದಲ್ಲಿ ಭಾರತದ  ಮಾನವನ್ನು ಮೂರು ಕಾಸಿಗೆ ಹರಾಜು ಹಾಕುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಹರಿಯಾಣ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಮೋದಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಕನಿಷ್ಠ ಮಾನವೀಯತೆ ಅಥವಾ ಮಾನವ ಹಕ್ಕುಗಳ ಸಂರಕ್ಷಣೆಯ ನಿಟ್ಟಿನಲ್ಲಾದರೂ ಈ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲದಿದ್ದರೆ ಮೋದಿ ಸರ್ಕಾರದ ಮಾನ ಮೂರು ಕಾಸಿಗೆ ಹರಾಜು ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
                                                                                                                                                                                          (ಸೌಜನ್ಯ: ದಿ ವೈರ್)