ಸಮಾಜಮುಖಿ ಸನ್ನಿಗೊಂದು ಹುಟ್ಟುಹಬ್ಬದ ಶುಭಾಶಯ

ಸಮಾಜಮುಖಿ ಸನ್ನಿಗೊಂದು ಹುಟ್ಟುಹಬ್ಬದ ಶುಭಾಶಯ

ಸನ್ನಿ ಲಿಯೋನ್, ಮನರಂಜನಾ ಜಗತ್ತಿನ ಮಾದಕ ತಾರೆ. ಸನ್ನಿಯಂದ್ರೆ ಸಣ್ಣ ಮಕ್ಕಳಿಂದ ಹಿಡಿದು ಹಣ್ ಹಣ್ ಮುದುಕರಿಗೂ ಅಚ್ಚುಮೆಚ್ಚು. ಅಷ್ಟರ ಮಟ್ಟಿಗೆ ಸಿನಿದುನಿಯಾದಲ್ಲಿ ಪ್ರೇಕ್ಷಕರನ್ನು ರಂಜಿಸ್ತಿರೋ ಕಲಾವಿದೆ. ಇವತ್ತು ನಟಿ ಸನ್ನಿ ಲಿಯೋನ್‌ ಗೆ 38ನೇ ವರ್ಷದ ಹುಟ್ಟುಹಬ್ಬ. ಪ್ರತಿಬಾರಿ ವ್ಯಾಪಕ ಟೀಕೆಗೆ ಗುರಿಯಾಗೋ ಸೆಲೆಬ್ರಿಟಿಗಳ ಪೈಕಿ ಸನ್ನಿಯದ್ದು ಅಗ್ರಸ್ಥಾನ. ಹೇಳಿ ಕೇಳಿ ಆಕೆ ನೀಲಿತಾರೆ.

ಇದೇ  ವಿಷಯವೇ ಜನರಿಗೆ ಟೀಕಾಸ್ತ್ರಕ್ಕೆ ವಸ್ತು. ಮನರಂಜನಾ ಜಗತ್ತಿನಾಚೆಗೂ ಸನ್ನಿ ಲಿಯೋನ್ ಸಮಾಜಮುಖಿ ವ್ಯಕ್ತಿ. ಆದ್ರೆ ಈ ಬಗ್ಗೆ ಕೆಲವೇ ಕೆಲವರಿಗೆ ಗೊತ್ತಷ್ಟೆ. ಅನಿರೀಕ್ಷಿತವಾಗಿ  ಪಾರ್ನ್ ಸ್ಟಾರ್ ಆಗಿದ್ದ ಸನ್ನಿ, ನಟಿಯಾಗಿ, ಮಾಡೆಲ್‌ ಆಗಿ ಸಾಕಷ್ಟು ಹೆಸರು ಮಾಡಿದ್ರು ಆಕೆಯನ್ನು ಇಂದಿಗೂ ಜನ ನೀಲಿತಾರೆಯಂತಲೇ ಗುರುತಿಸೋದು. ಸನ್ನಿಯ ನಡೆ ತಪ್ಪೋ ಸರಿಯೋ ಅನ್ನೋದು ಇಲ್ಲಿ ಅಪ್ರಸ್ತುತ.  ಆದ್ರೆ ಹುಟ್ಟು ಹಬ್ಬದ ಸಂತೋಷದಲ್ಲಿರೋ ಸನ್ನಿಯ ಸಾಕಷ್ಟು ಉತ್ತಮ ಕೆಲಸಗಳನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ..

ಭಾರತೀಯ ಪ್ರಜೆಯಲ್ಲದೇ ಹೋದ್ರು ಅಪ್ಪಟ ಭಾರತೀಯಳಾಗಿ ಬದುಕ್ತಿರೋ ಸನ್ನಿ, ಯಾರಾದ್ರೂ ಕಷ್ಟದಲ್ಲಿದ್ದಾರೆ ಅಂದ್ರೆ ಮರುಗ್ತಾಳೆ. ಬಾಲಿವುಡ್‌ನಲ್ಲಿ ಕೋಟಿ ಕೋಟಿ ಖಜಾನೆ ತುಂಬಿಸಿಕೊಂಡಿರೋ ನಟರು ಮಾಡದ ಕೆಲಸವನ್ನು ಸನ್ನಿ ಮಾಡ್ತಿದ್ದಾಳೆ. ಅಮೇರಿಕಾದ ಪ್ರಜೆಯಾಗಿರೋ ಸನ್ನಿ ಬದುಕು ಕಟ್ಟಿಕೊಂಡಿದ್ದು ಭಾರತದಲ್ಲಿ.

ನಾವೆಲ್ಲಾ ಕೇರಳದ ಜಲಪ್ರಳಯವನ್ನು ಮರೆಯುವಂತೆಯೇ ಇಲ್ಲ. ದೇವರನಾಡು ಅಂಥ ಕರೆಯಿಸಿಕೊಳ್ತಿದ್ದ ಕೇರಳ ಕಳೆದ ವರ್ಷ ವರುಣನ ಅಬ್ಬರಕ್ಕೆ ಅಕ್ಷರಶಃ ನಲುಗಿಹೋಗಿತ್ತು. ಅದೆಷ್ಟೋ ಜನ ಬೀದಿಗೆ ಬಿದ್ರು. ಆಶ್ರಯಕ್ಕೆ ಮನೆ, ತಿನ್ನಲು ಒಂದ್ಹೊತ್ತು ಊಟವಿಲ್ಲದೇ ಬೀದಿ ಪಾಲಾಗಿದ್ರು. ಸಾಕಷ್ಟು ಜನ ಕೇರಳದ ಜನತೆಗೆ ನೆರವಾದ್ರು. ಆ ಸಂದರ್ಭದಲ್ಲಿ ಸನ್ನಿ ಕೂಡ ನೆರೆ ಸಂತ್ರಸ್ತರಿಗೆ ಐದು ಕೋಟಿ ಹಣ ನೀಡಿದ್ರು.

ಅಷ್ಟೆ ಅಲ್ಲ, ಕ್ಯಾನ್ಸರ್ ಪೀಡಿತ ಮಕ್ಕಳು, ಕಿಡ್ನಿ ವೈಫಲ್ಯದಿಂದ ಬಳಲ್ತಿರೋ ಸಾಕಷ್ಟು ಮಂದಿಗೆ ಸನ್ನಿ ಆರ್ಥಿಕ ನೆರವು ನೀಡಿದ್ದಾಳೆ. ಜತೆಗೆ ವಯಸ್ಕ ದಂಪತಿಗಳ ಆರೈಕೆ, ಶಾಲಾ ಅಭಿವೃದ್ಧಿಗೆ ಸಹಾಯ ಧನ ನೀಡುವಲ್ಲೂ ಸನ್ನಿ ಮಾನವೀಯತೆ ಮೆರೆದಿದ್ದಾಳೆ. ತನಗೆ ಬಂದ ಪರಿಸ್ಥಿತಿ ಬಡ ಮಕ್ಕಳಿಗೆ ಬಾರದಿರಲಿ ಅಂಥ 300ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಂಡಿದ್ದಾಳೆ. ಅಲ್ಲದೇ ಅಮೆರಿಕಾದ ಕ್ಯಾನ್ಸರ್ ಪೀಡಿತ ಜನರಿಗೂ ನೆರವಿನ ಹಸ್ತಚಾಚಿದ್ದಾಳೆ. ಯಶಸ್ಸಿನ ಉತ್ತುಂಗಕ್ಕೇರಿ ಹಣ ಗಳಿಸಿದ್ರೆ ಸಾಕು, ನಾವಾಯ್ತು, ನಮ್ಮ ಬದುಕಾಯ್ತು ಅಂಥ ಬದುಕೋ ಸೆಲೆಬ್ರಿಟಿಗಳ ನಡುವೆ ಸನ್ನಿ ಲಿಯೋನ್ ವಿಭಿನ್ನವಾಗಿ ನಿಲ್ತಾಳೆ. ಸನ್ನಿಯ ಈ ಹಾದಿಯಲ್ಲಿ ಪತಿ ಡೇನಿಯಲ್ ವೆಬ್ಬರ್  ಕೂಡ ನೆರವಾಗಿದ್ದಾರೆ. ಸದ್ಯ ಮೂರು ಮಕ್ಕಳೊಂದಿಗೆ ಸನ್ನಿ ಲಿಯೋನ್ ಜೀವನ ನಡೆಸ್ತಿದ್ದಾರೆ.

  ಸನ್ನಿ ಬಗ್ಗೆ ಗೊತ್ತಿರೋ ಫ್ಯಾನ್ಸ್ ಎಲ್ಲಾ ಆಕೆಯನ್ನು ಇಂದು ಕೊಂಡಾಡ್ತಿದ್ದಾರೆ. ಮುಂದೂ ಸಹ ಸನ್ನಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುವಂತಾಗ್ಲಿ.