ಬಿಸಿಲ ಬೇಗೆಗೆ ಕೆಂಪಾಗಿ ತಂಪಾದ ಗುಲ್‍ಮೊಹರ್

ಬಿಸಿಲ ಬೇಗೆಗೆ ಕೆಂಪಾಗಿ ತಂಪಾದ ಗುಲ್‍ಮೊಹರ್

ಬಿಸಿಲ ಬೇಗೆಗೆ ಎಲ್ಲ ಗಿಡಗಳು ಒಣಗಿ ಹೋಗುತ್ತಿರುವ ಈ ಕಡು ಬಿಸಿಲಲ್ಲಿ ಸೂರ್ಯ ತಾಪಕ್ಕೆ ಕೆಂಪಾಗಿ, ನೋಡುಗರ ಕಣ್ಣಿಗೆ ತಂಪಾಗಿ, ಮರದಡಿ ಕುಳಿತವರ ಮನಸ್ಸು ಇಂಪಾಗಿಸುವ ಗುಲ್‍ಮೊಹರ್ ಅರಳುವದೇ ಈ ಬೇಸಿಗೆಯಲ್ಲಿ. ಏಪ್ರಿಲ್ ತಿಂಗಳಲ್ಲಿ ಸಂಪೂರ್ಣ ಒಣಗಿ, ಮೇ ಮತ್ತು ಜೂನ್ ತಿಂಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಿ ಬಣ್ಣ ಬಣ್ಣದ ಹೂ ಬಿಡುವ ಮರಗಳಲ್ಲಿ ಗುಲ್‍ಮೊಹರ್  ಕೂಡಾ ಒಂದು.

 ರಸ್ತೆಯ ಇಕ್ಕೆಲಗಳಲ್ಲಿ ಗಿಡ, ದೊಡ್ಡ ಮರಗಳು ಬೆಳೆದು ನಿಂತು ಕಡು ಕೆಂಪು, ಕೇಸರಿ, ಮತ್ತು ಹಳದಿ ಬಣ್ಣದ ಹೂಗಳನ್ನು ಬಿಡುತ್ತದೆ. ರಸ್ತೆ ಹೋಕರಿಗೆ ದಟ್ಟ ನೆರಳು ನೀಡುವುದರ ಜೋತೆಗೆ ತಂಪು ತಂಗಾಳಿ ನೀಡುವುದಕ್ಕೆ ಈ ಗುಲ್‍ಮೊಹರ್ ಕೊಡುಗೆ ಅಪಾರ.ಈ ಹೂ ಮರಗಳಿಂದ ನಗರಕ್ಕೆ ಒಂದು ಮೆರಗು ಬರುವುದು, ರಸ್ತೆಗಳ ಸೌಂದರ್ಯ ಹೆಚ್ಚಿದ್ದು, ಬೆಳಗಿನ ಜಾವ ಮತ್ತು ಸಂಜೆ ಹೊತ್ತಲ್ಲಿ ವಾಯುವಿಹಾರ ನಡೆಸುವವರನ್ನು ತನ್ನತ್ತ ಸೆಳೆಯುತ್ತದೆ.

 ಈ ಹೂ ಗಳಿಂದ ರಸ್ತೆಗಳು ನೋಡಲು ರಾಜ ಮಾರ್ಗದಂತಿದ್ದು, ಕಾಲನಡಿಗೆ ಜನರಿಗೆ ನೆರಳಿನ ತಂಪು ಜೊತೆಗೆ ದಣಿದ ದೇಹಕ್ಕೆ ತಂಗಾಳಿ ಬೀಸುತ್ತಾ, ಮನಸ್ಸಿಗೆ ಇಂಪು ನೀಡಿ ಬೇಸರದ ಬೇಸಿಗೆಯನ್ನು ಕೂಲಾಗಿ ಕಳೆಯಲು ಗುಲ್‍ಮೊಹರ್ ಮನುಷ್ಯನಿಗೆ ಸಹಕಾರಿಯಾಗಿದೆ.

-ಲಕ್ಷ್ಮಿ ಮ ಕುಂಬಾರ