ಮಾರಾಟಕ್ಕಿದೆ ಸರ್ಕಾರದ ಬಂಡವಾಳ ! ಖರೀದಿದಾರರ ಆಕರ್ಷಣೆಗೆ ವಿದೇಶದಲ್ಲಿ ರೋಡ್ ಶೋ

ಅಂತೂ ಇಂತೂ ಸಾರ್ವಜನಿಕ ವಲಯದ ಉದ್ದಿಮೆಗಳು ಅನ್ಯರ ಪಾಲಾಗುತ್ತಿವೆ.

ಮಾರಾಟಕ್ಕಿದೆ ಸರ್ಕಾರದ ಬಂಡವಾಳ ! ಖರೀದಿದಾರರ ಆಕರ್ಷಣೆಗೆ ವಿದೇಶದಲ್ಲಿ ರೋಡ್ ಶೋ

ನೆರೆ ಪರಿಹಾರಕ್ಕಿಂತ ಅಮೆರಿಕದಲ್ಲಿ ಟ್ರಂಪ್ ಪರ ಪ್ರಚಾರವೇ ಮುಖ್ಯ, ಗ್ರಾಮೀಣ ಪ್ರದೇಶಕ್ಕೆ ನೀರು ಸರಬರಾಜು ಕಲ್ಪಿಸದೆಯೇ ಬಯಲು ಶೌಚಾಲಯ ಮುಕ್ತ ಎಂಬುದು ಕನಸು ಎಂಬುದೂ, ಅಂದಪದ್ದತಿ ಇನ್ನೂ ಇದೆ. ಎಂದು ಗೊತ್ತಿದ್ದರೂ ಬಯಲು ಶೌಚ ಮುಕ್ತ ಭಾರತ, ಭಾರತದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿ ಕೊಳ್ಳುವ ಪ್ರಧಾನಿ ಮೋದಿ ಬಗ್ಗೆ ಟೀಕೆಗಳೆಂಬುದು ಅಮರಿಕೊಂಡು ಕೂತಿವೆ.

ವಿಶ್ವಸಂಬಂಧಗಳ ಹಿನ್ನೆಲೆಯಲ್ಲಿ ಯಾವುದೇ ರಾಷ್ಟ್ರದ ಚುನಾವಣೆಯಲ್ಲಿ ಒಬ್ಬರ ಪರವಾಗಿ ಭಾರತದ ಪ್ರಧಾನಿ ಪ್ರಚಾರ ಮಾಡುವುದು ಸಲ್ಲದು. ಆದರೂ ಟ್ರಂಪ್ ಗೆಲ್ಲಿಸಿ ಎಂದು ಮೋದಿ ಪ್ರಚಾರ ಮಾಡಿ ಬಂದಾಗಿದೆ. ಅದಕ್ಕೊಂದಿಷ್ಟು ಸ್ಪಷ್ಟನೆಗಳನ್ನ ಕೊಡಲಾಗುತ್ತಿದೆ.

ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿನ ಸರ್ಕಾರೀ ಹೂಡಿಕೆಯನ್ನ ವಾಪಸ್ಸು ಪಡೆದುಕೊಳ್ಳುವ ಮೂಲಕ, ಹಣಕಾಸು ಬಿಕ್ಕಟ್ಟನ್ನ ಸರ್ಕಾರ ಸರಿಪಡಿಸಿಕೊಳ್ಳಲು ಹೊರಟಿರುವ ಕ್ರಮಕ್ಕೆ ಮತ್ತಷ್ಟು ಕ್ಷಿಪ್ರತೆ ಕೊಟ್ಟಿದೆ. ಇದಕ್ಕಾಗಿಯೇ ಕೊಳ್ಳಿಕೆಗಾಗಿ ಬಂಡವಾಳಿಗರನ್ನ ಆಕರ್ಷಿಸಲು ವಿದೇಶದಲ್ಲಿ ಬೀದಿ ಪ್ರಚಾರ ಮಾಡಲು, ಹಿತಾಸಕ್ತಿ ಬಿಡದೆ ಪಡೆಯಲು ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಿಕೊಂಡಿದೆ.

ಭಾರತ್ ಪೆಟ್ರೋಲಿಯಂನಲ್ಲಿ ಶೇ.53.29, ಶಿಪ್ಪಿಂಗ್ ಕಾರ್ಪೊರೇಷನ್ ನಲ್ಲಿ ಶೇ. 63.75, ಕಾನ್ಕಾರ್ ನಲ್ಲಿಶೇ. 30, ಟಿಎಚ್ಒಸಿಯಲ್ಲಿ ಶೇ.75, ರಷ್ಟು ಬಂಡವಾಳ ಸರ್ಕಾರದ್ದಾಗಿದ್ದು ಇದನ್ನೆಲ್ಲ ವಾಪಸ್ಸು ಪಡೆದರೆ, ಅಂದರೆ ಬೇರೆಯವರಿಗೆ ಮಾರಿದರೆ 1.05 ಲಕ್ಷ ಕೋಟಿರುಗಳು ಸರ್ಕಾರದ ಬೊಕ್ಕಸಕ್ಕೆ ಬರಲಿದೆ.

ಇದನ್ನ ನಾಲ್ಕೈದು ತಿಂಗಳಲ್ಲೇ ಮಾರಿಬಿಡಬೇಕು ಎಂಬುದಕ್ಕಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಭೆಯಲ್ಲೇ ವಾಣಿಜ್ಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವನ್ನ ಆರಂಭಿಸಲು ಹಸಿರು ನಿಶಾನೆ ದೊರೆತಿದೆ. 

ವಿದೇಶಗಳಲ್ಲೆಲ್ಲ ಸುತ್ತಿ, ಕೊಳ್ಳುವವರನ್ನ ಆಕರ್ಷಿಸಿ ಅವರಿಂದ ಆಸಕ್ತಿಯನ್ನ ಪಡೆದು, ನಂತರ ಆರ್ಥಿಕ ಹೆಚ್ಚಿಸುವ ಉದ್ಧೇಶ ಇದಕ್ಕಿದ್ದು, ವಿತ್ತೀಯ ಸಮಸ್ಯೆಗಳು ಉಲ್ಬಣವಾಗದಂತೆ ನೋಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಂತೂ ಇಂತೂ ಸಾರ್ವಜನಿಕ ವಲಯದ ಉದ್ದಿಮೆಗಳು ಅನ್ಯರ ಪಾಲಾಗುತ್ತಿವೆ.