ನಟನೆಗೆ ಗುಡ್‍ಬೈ ಹೇಳಲಿದ್ದಾರೆ ಸಮಂತಾ ಅಕಿನೇನಿ!

ನಟನೆಗೆ ಗುಡ್‍ಬೈ ಹೇಳಲಿದ್ದಾರೆ ಸಮಂತಾ ಅಕಿನೇನಿ!

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಮದುವೆಯ ಬಳಿಕವು ಬಹು ಬೇಡಿಕೆ ಹೊಂದಿರುವ ನಟಿ. ಸದ್ಯ ಅವರ ಕೈಯಲ್ಲಿ ಎರಡು ಹೊಸ ಚಿತ್ರಗಳಿದ್ದು, ಅವುಗಳ ಚಿತ್ರೀಕರಣದ ನಂತರ ಅವರು ನಟನೆಯನ್ನು ಕೈ ಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಮಂತಾ ನಟನೆಯಿಂದ ದೂರ ಉಳಿಯುತ್ತಾರೆ ವಿನಃ ಸಿನಿಮಾರಂಗದಿಂದ ಅಲ್ಲ ಎನ್ನಲಾಗಿದೆ.

ನಟನೆ ಬಿಟ್ಟು ನಿರ್ಮಾಣದ ಕಡೆ ಗಮನ ಹರಿಸಲು ನಿರ್ಧರಿಸಿದ್ದಾರಂತೆ. ಈಗಾಗಲೇ ಸಮಂತಾ ಅಕ್ಕಿನೇನಿ ಕುಟುಂಬ ಅನ್ನಪೂರ್ಣ ಬ್ಯಾನರ್ ಹೊಂದಿದ್ದು, ಮುಂದೆ ಇದನ್ನು ಸಮಂತಾ ನೋಡಿಕೊಳ್ಳುತ್ತಾರಾ ಅಥವಾ ಹೊಸ ಬ್ಯಾನರ್ ಲಾಂಚ್ ಮಾಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಆದರೆ ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.