ಆರ್ ಬಿ ಐ ನಿಂದ ಗುಡ್ ನ್ಯೂಸ್ : ಅಂಧರು ನೋಟು ಗುರ್ತಿಸಲು 'ಮೊಬೈಲ್ ಆಪ್

ಆರ್ ಬಿ ಐ ನಿಂದ ಗುಡ್ ನ್ಯೂಸ್ : ಅಂಧರು ನೋಟು ಗುರ್ತಿಸಲು 'ಮೊಬೈಲ್ ಆಪ್

ದೆಹಲಿ : ಭಾರತೀಯ ನೋಟುಗಳನ್ನುವಿವಿದ  ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಆರ್ ಬಿ ಐ,  ಚಲಾವಣೆಗೆ ತಂದಿತ್ತು, ಹೀಗಾ ಅಂಧರಿಗೂ ಕರೆನ್ಸಿ ಗುರ್ತಿಸುವಂತಹ ಆಪ್ ಒಂದನ್ನು ಅಭಿವೃದ್ಧಿ ಪಡಿಸಲು ಹೊರಟಿದೆ. ಈ ಮೂಲಕ ನೋಟು ಮುಟ್ಟಿ ಅಂಧರು ಗುರ್ತಿಸುವುದಷ್ಟೇ ಅಲ್ಲ, ಆಪ್ ಬಳಸಿ ಕೂಡ ನೋಟು ಯಾವುದು ಎಂದು ಸುಲಭವಾಗಿ ತಿಳಿಯಬಹುದು  ಹಾಗೂ ದೇಶದಲ್ಲಿರುವ 80 ಲಕ್ಷ ಅಂಧರಿಗೆ ಈ ಆಪ್ ನಿಂದ ಪ್ರಯೋಜನವಾಗುತ್ತದೆ.

ಸಾಫ್ಟ್ ವೇರ್ ಕಂಪನಿಗಳು ಒಪ್ಪಿಕೊಂಡು ಆಪ್ ಅಭಿವೃದ್ಧಿ ಪಡಿಸಲು ಬೆಲೆ  ನಿಗದಿಸಿದೆ , ಆರ್ ಬಿ ಐ ನಿಯಮಾನುಸಾರ, ಅಂಧರು ತಮ್ಮ ಮೊಬೈಲ್ ಕ್ಯಾಮೆರಾ ಎದುರು ನೋಟಿನ ಚಿತ್ರಣವನ್ನು ಸೆರೆ ಹಿಡಿದರೇ ಸಾಕು, ಆ ನೋಟು ಯಾವುದು, ಎಷ್ಟು ಮೌಲ್ಯದ್ದು ಎಂದು ಇತ್ಯಾದಿ ಮಾಹಿತಿಯನ್ನು ಅಂದರಿಗೆ ಧ್ವನಿ ಮೂಲಕ ತಿಳಿಸಲಿದೆ. ಒಂದು ವೇಳೆ ನೋಟ ಚಿತ್ರಣ ಸರಿಯಾಗಿ ಸೆರೆಯಾಗದೇ  ಹೋದರೇ, ಮತ್ತೆ ನೋಟನ್ನು ಸೆರೆ ಹಿಡಿಯಲು ಸೂಚನೆ ನೀಡಲಿದೆ.

ಯಾವುದೇ ರೀತಿಯ ಭಾರತೀಯ ಕರೆನ್ಸಿಯಾದರೂ ಅದನ್ನು ಮೊಬೈಲ್ ಕ್ಯಾಮರಾದಲ್ಲಿ, ಆರ್ ಬಿ ಐ ಅಭಿವೃದ್ಧಿ ಪಡಿಸಲು ತಿಳಿಸಿರುವ ಆಪ್ ನಂತೆ ಅಭಿವೃದ್ಧಿ ಪಡೆಸಿದರೇ, ಅಂಧರು ಸುಲಭವಾಗಿ ಇನ್ಮುಂದೆ ಗುರ್ತಿಸಬಹುದಾಗಿದೆ. ಈ ಮೂಲಕ ಆರ್ ಬಿ ಐ ಅಂಧರಿಗೆ ನೆರವಾಗಲು ವಿನೂತನ ಹೆಜ್ಜೆ ಇರಿಸಿದೆ.