ಜಂಟಲ್ಮನ್ ಆಟಕ್ಕೆ ಏನೆಲ್ಲಾ ಪೆಟ್ಟು   

ಭಾರತದಲ್ಲಿ ಬಹಳಷ್ಟು ಇಷ್ಟಪಡುವ ಕ್ರಿಕೆಟ್ ಸಭ್ಯತೆಗೆ ಹೆಸರುವಾಸಿಯಾದ ಕ್ರೀಡೆ. ಆ ಸಭ್ಯತೆಯನ್ನು ಪೋಶಿಸುವ, ಕ್ರೀಡಾ ಮನೋಭಾವವನ್ನು ಉದ್ದೀಪನಗೊಳಿಸುವ ಅದರದ್ದೇ ಆದ ಕ್ರೀಡಾರ‍್ಮವಿದೆ. ಆದರೆ, ಆರ‍್ಮಕ್ಕೆ ಕೊಡಲಿಪೆಟ್ಟನ್ನು ಕ್ರಿಕೆಟಿಗರು ನೀಡುತ್ತಲೇ ಬಂದಿದ್ದಾರೆ. ಕ್ರಿಕೆಟ್ ಲೋಕವನ್ನು ಭೀಕರವಾಗಿ ಕಾಡುತ್ತಿರುವುದು ಭ್ರಷ್ಟತೆ. ಸಮಾಜದ ಬೇರೆಲ್ಲ ಕ್ಷೇತ್ರಗಳನ್ನು ಆವರಿಸಿರುವಂತೆ ಅಪ್ರಾಮಾಣಿಕತೆ ಕ್ರಿಕೆಟ್ಟನ್ನೂ ಆವರಿಸಿದೆ.

ಜಂಟಲ್ಮನ್ ಆಟಕ್ಕೆ ಏನೆಲ್ಲಾ ಪೆಟ್ಟು   

ನನ್ನ ಪರಿಚಯದ ವ್ಯಕ್ತಿಯೊಬ್ಬರು ಕ್ಯಾಲಿಫರ‍್ನಿಯಾನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು. ಆ ನಂತರ ವಾಪಸ್ ಮೈಸೂರಿಗೆ ಬಂದು ತಮ್ಮ ಪೆಟ್ರೋಲ್ ಬಂಕ್ ವ್ಯವಹಾರದಲ್ಲಿ ಮತ್ತೆ ತೊಡಗಿಸಿಕೊಂಡರು. ಅವರ ಅನುಪಸ್ಥಿತಿಯಲ್ಲಿ ಪೆಟ್ರೋಲ್ ಬಂಕಿನ ಸುರ‍್ದಿ ಬೇರೆಯವರ ಕೈಯಲ್ಲಿತ್ತು, ಆದರೆ ಅದರ ಹೊಣೆ ಹೊತ್ತವರು ಅದನ್ನು ಸರಿಯಾಗಿ ನಡೆಸದೇ ನನ್ನ ಸ್ನೇಹಿತರೇ ಮೇಲ್ವಿಚಾರಣೆ ನಡೆಸುತ್ತಿದ್ದರು. ಒಂದು ರಾತ್ರಿ ಪೆಟ್ರೋಲ್ ಹಾಕಿಸಲಿಕ್ಕೆ ಹೋದಾಗ ವ್ಯವಹಾರವನ್ನು ಪ್ರಾಮಾಣಿಕವಾಗಿ ನಡೆಸಿದರೆ ಲಾಭ ಈ ಉದ್ಯಮದಲ್ಲಿ ಲಾಭವಿಲ್ಲ, ಆ ಕಾರಣಕ್ಕಾಗಿ ಬಂಕಿನ ಆವರಣದಲ್ಲೇ ಐಸ್ ಕ್ರೀಮ್ ಮಳಿಗೆಯನ್ನು ತೆರೆದಿದ್ದು, ಹತ್ತು ಗಂಟೆಯ ನಂತರ ಪೊಲೀಸರು ಅದನ್ನು ಬಲವಂತವಾಗಿ ಮುಚ್ಚುತ್ತಾರೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವಾಗ ಅವರ ಕಣ್ಣಿನಿಂದ ಒಂದು ಹನಿ ನೀರು ತೊಟ್ಟಿಕ್ಕಿತ್ತು. "ನಾನು ಕ್ರೀಡಾಪಟು. ನನ್ನ ವ್ಯಾಸಂಗದ ಅವಧಿಯಲ್ಲಿ ಟೇಬಲ್ ಟೆನಿಸ್ ಟರ‍್ನಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಗೆ ತೆರಳಿದ್ದೆ. ಲೀಲಾಜಾಲವಾಗಿ ಗೆಲ್ಲುತ್ತಿದ್ದ ಮ್ಯಾಚ್ ನಲ್ಲಿ ನಾನು ಉದ್ದೇಶಪರ‍್ವಕವಾಗಿ ಎದುರಾಳಿಗೆ ನಾಲ್ಕಾರು ಪಾಯಿಂಟ್ಗಳನ್ನು ಬಿಟ್ಟುಕೊಟ್ಟೆ. ಆ ನಂತರ ಹಾಗೇಕೆ ಮಾಡಿದೆ ಎಂದು ನನ್ನ ಮ್ಯಾನೇಜರ್ ಕೇಳಿದಾಗ, ನನ್ನ ಉದ್ದೇಶ ಗೆಲ್ಲುವುದಾಗಿತ್ತು, ಅವನನ್ನು ಹೀನಾಯವಾಗಿ ಸೋಲಿಸುವುದಾಗಿರಲಿಲ್ಲ. ಒಬ್ಬ ನಿಜವಾದ ಸ್ರ‍್ಧಾಳು ಮೋಸಮಾಡುವುದಿಲ್ಲ" ಎಂದು ಅವರು ಹೆಮ್ಮೆಯಿಂದ ನುಡಿದಾಗ ಅವರ ಬಗ್ಗೆ ವಿಶೇಷವಾದ ಆದರಾಭಿಮಾನ ಮೂಡಿತು.

ಭಾರತದಲ್ಲಿ ಬಹಳಷ್ಟು ಇಷ್ಟಪಡುವ ಕ್ರಿಕೆಟ್ ಸಭ್ಯತೆಗೆ ಹೆಸರುವಾಸಿಯಾದ ಕ್ರೀಡೆ. ಆ ಸಭ್ಯತೆಯನ್ನು ಪೋಷಿಸುವ, ಕ್ರೀಡಾ ಮನೋಭಾವವನ್ನು ಉದ್ದೀಪನಗೊಳಿಸುವ ಅದರದ್ದೇ ಆದ ಕ್ರೀಡಾಧರ್ಮವಿದೆ. ಆದರೆ, ಆಧರ್ಮಕ್ಕೆ ಕೊಡಲಿಪೆಟ್ಟನ್ನು ಕ್ರಿಕೆಟಿಗರು ನೀಡುತ್ತಲೇ ಬಂದಿದ್ದಾರೆ. ಕ್ರಿಕೆಟ್ ಲೋಕವನ್ನು ಭೀಕರವಾಗಿ ಕಾಡುತ್ತಿರುವುದು ಭ್ರಷ್ಟತೆ. ಸಮಾಜದ ಬೇರೆಲ್ಲ ಕ್ಷೇತ್ರಗಳನ್ನು ಆವರಿಸಿರುವಂತೆ ಅಪ್ರಾಮಾಣಿಕತೆ ಕ್ರಿಕೆಟ್ಟನ್ನೂ ಆವರಿಸಿದೆ. ಕ್ರಿಕೆಟ್ ಜಗತ್ತಿನ ಒಳಹೊರಗನ್ನು ಲಾಗಾಯ್ತಿನಿಂದಲೂ ಗಮನಿಸಿದ ಪರಿಣಿತರ ಅಭಿಪ್ರಾಯದಂತೆ ಬೆಟ್ಟಿಂಗ್ ಹಗರಣ ಹೊರಬರುವುದಕ್ಕಿಂತಲೂ ಮುಂಚಿನಿಂದಲೂ ಬೆಟ್ಟಿಂಗ್ ನಡೆದೇ ಬಂದಿದೆ. ಕಾಲಕ್ರಮೇಣ ಅಪಘಾತದಲ್ಲಿ ಮರಣ ಹೊಂದಿದ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನ್ಯ, ನಮ್ಮ ದೇಶದವರೇ ಆದ ಮೊಹಮದ್ ಅಜರುದ್ದೀನ್, ಅಜಯ್ ಜಡೇಜಾ, ಕಪಿಲ್ ದೇವ್ ಅವರ ಹೆಸರುಗಳು ಬೆಟ್ಟಿಂಗ್ ಹಗರಣದಲ್ಲಿ ಕೇಳಿಬರುವ ಮುಂಚೆಯೂ ಅಂತಹ ಹಗರಣಗಳು ಅವ್ಯಾಹತವಾಗಿ ನಡೆದುಕೊಂಡೇ ಬಂದಿದೆಯೆಂದು ಬಲ್ಲವರ ಅಂಬೋಣ. ಅಪರಾ-ತಪರಾ ವ್ಯವಹಾರ ಉನ್ನತಮಟ್ಟದಲ್ಲಷ್ಟೇ ಅಲ್ಲದೇ ಕ್ಲಬ್ ಮಟ್ಟದ ಕ್ರಿಕೆಟ್ನಲ್ಲೂ ನಡೆಯುತ್ತಿದೆ. ಹೆಚ್ಚುತ್ತಿರುವ ಹಣದ ಪ್ರಭಾವಕ್ಕೆ ತಕ್ಕಂತೆ ಕ್ರೀಡಾಮೌಲ್ಯಗಳು ಕುಸಿಯುತ್ತಿವೆ. ಬುಕ್ಕಿಯೊಬ್ಬ ತನ್ನಲ್ಲಿಗೆ ಬಂದಿದ್ದನ್ನು ವರದಿ ಮಾಡದ ತಪ್ಪಿಗೆ ಬಾಂಗ್ಲಾದೇಶದ ನುರಿತ ಆಲ್ರೌಂಡರ್ ಶಕೀಬ್ ಆಲ್ ಹಸನ್ ಬಹಿಷ್ಕಾರಗೊಂಡಿರುವುದು ಕ್ರಿಕೆಟ್ ಜಗತ್ತಿನಿಂದ ಹೊರಹೋಗದ ಭ್ರಷ್ಟಾಚಾರಕ್ಕೆ ಇತ್ತೀಚಿನ ಉದಾಹರಣೆಯಷ್ಟೆ.

ಕ್ರಿಕೆಟ್ಟಿಗೂ, ಕ್ರೀಡಾಲೋಕಕ್ಕೂ ಮಸಿಬಳಿಯುತ್ತಿರುವ ಮತ್ತೊಂದು ಅಂಶವೆಂದರೆ ಕ್ರಿಕೆಟ್ ರಾಷ್ಟ್ರಗಳ ವಿರುದ್ಧ ಹೆಚ್ಚುತ್ತಿರುವ ಅನಾರೋಗ್ಯಕರ ಪೈಪೋಟಿ. ಹೇಗಾದರೂ ಮಾಡಿ ಗೆಲ್ಲಬೇಕು ಎನ್ನುವ ಹಪಹಪಿ. ಚೆಂಡನ್ನು ಕೃತ್ರಿಮವಾಗಿ ವಿಕೃತಿಗೊಳಿಸಿದ ಕಾರಣಕ್ಕಾಗಿ ಬಹಿಷ್ಕೃತವಾದ ಸ್ಟೀವ್ ಸ್ಮಿತ್, ಡೇವಿಡ್ ವರ‍್ನರ್, ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪ್ರಕರಣವನ್ನು ಇಲ್ಲಿ ಉದ್ಧರಿಸಬಹುದು.  ಎಲೆಕ್ಟ್ರಾನಿಕ್ ಕಣ್ಣು ರ‍್ವವ್ಯಾಪಿಯಾಗಿದ್ದು, ಕ್ರೀಡಾಂಗಣದ ಒಳಗೂ ಹೊರಗೂ ಮೋಸಮಾಡಿ ತಪ್ಪಿಸಿಕೊಳ್ಳುವುದು ಅಸಾಧ್ಯ ಎನ್ನುವಂಥಾ ಪರಿಸ್ಥಿತಿಯಲ್ಲೂ ಇಂತಹ ಅನಿಷ್ಟಗಳು ಸಂಭವಿಸುತ್ತಿರುವುದೇ ಸೋಜಿಗ. ಆಶಸ್ ಗೆಲ್ಲಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಹಣಾಹಣಿ ರ‍್ವವಿದಿತ, ಆದರೆ, ಅಂತಹದ್ದೇ ವೈಮನಸ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿಯಲ್ಲೂ ಕಂಡುಬಂದದ್ದು ವೈಶಿಷ್ಟ್ಯವಾದರೂ ಅಪವಾದವೇನಲ್ಲ.

ಇಂತಹ ಪೈಪೋಟಿ ನೆನ್ನೆ ಮೊನ್ನೆಯದಲ್ಲ, ಅದಕ್ಕೆ ಸುದರ‍್ಘವಾದ ಇತಿಹಾಸವೇ ಇದೆ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಹಣ ಪ್ರಾಬಲ್ಯ ಪಡೆದುಕೊಳ್ಳುವ ದಶಕಗಳ ಹಿಂದೆಯೇ ಆರಂಭವಾದದ್ದು. 1932-33 ರ ಆಶಸ್ ಪಂದ್ಯಾವಳಿ ಬಾಡಿಲೈನ್ ಸರಣಿಯೆಂದೆ ಜಗತ್ಪ್ರಸಿದ್ಧ. ಸರ‍್ವಕಾಲಿಕ ಬ್ಯಾಟಿಂಗ್ ಶ್ರೇಷ್ಠನಾದ ಡಾನ್ ಬ್ರಾಡ್ಮನ್ರನ್ನು ಹೇಗಾದರೂ ಮಾಡಿ ಕಟ್ಟಿಹಾಕಲು ರೂಪಿಸಿದ ಹೀನಾಯ ತಂತ್ರವೇ ಬಾಡಿಲೈನ್ ಬೌಲಿಂಗ್. ಇಂಗ್ಲೆಂಡ್ ತಂಡದ ನಾಯಕನಾದ ಡಗ್ಲಾಸ್ ಜರ‍್ಡಿನ್ ಗುರಿ ಇಟ್ಟದ್ದು ಬ್ರಾಡ್ಮನ್ ಒಬ್ಬರತ್ತ ಅಲ್ಲ, ಬಿಲ್ ವುಡ್ಫುಲ್, ಬಿಲ್ ಪಾನ್ಸ್ರ‍್ಡ, ಮತ್ತು ಆಲನ್ ಕಿಪ್ಪಾಕ್ಸ್ರ ರಂಥ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸುವುದೂ ಅವರ ತಂತ್ರವಾಗಿತ್ತು. ಚೆಂಡಿನ ದಿಶೆಯನ್ನೇ ಬದಲಿಸಿ, ಬ್ಯಾಟ್ಸಮನ್ ರನ್ ಗಳಿಸಲಿಕ್ಕೆ ಪರದಾಡುವಂತೆ ಮಾಡುವುದು ಒಂದು ಉದ್ದೇಶವಾದರೆ,  ವಿಕೆಟ್ನತ್ತ  ಪಯಣಿಸಬೇಕಾದ ಚೆಂಡು ಅವನ ಅಂಗಾಂಗಳನ್ನರಸುತ್ತಾ ಅವನನ್ನು ಬೆದರಿಸುವುದು ಮತ್ತೊಂದು ಉದ್ದೇಶ. ಅಥವಾ ಎರಡನೆಯದೇ ಮೂಲ ಉದ್ದೇಶ.

ಬೆಂಗಳೂರು-ಮೈಸೂರಿನ ನಡುವೆ ಸಂಚರಿಸುವ ಶತಾಬ್ದಿ ರೈಲಿನ ಪ್ರಯಾಣದ ಅವಧಿ ಎರಡು ಗಂಟೆ. ಬಾಡಿಲೈನ್ ಸರಣಿಯ ಹೀರೊ/ಖಳ ಹೆರಾಲ್ಡ್ ಲರ‍್ವುಡ್ ಬೌಲ್ ಮಾಡಿದ ಚೆಂಡು ಅದರ ದುಪ್ಪಟ್ಟು ವೇಗದಲ್ಲಿ ಚಲಿಸುತ್ತಿತ್ತು. ಆತನ ಕೈಯಿಂದ ಹೊರಬಂದ ಚೆಂಡು ಅನೇಕ ಬಾರಿ ಬರಿಗಣ್ಣಿಗೆ ಕಾಣುತ್ತಲೇ ಇರಲಿಲ್ಲ. ಪಂದ್ಯದ ಲಂಚ್ ವಿರಾಮದಲ್ಲಿ ಲರ‍್ವುಡ್ ಕುಡಿಯುತ್ತಿದ್ದ ಬಿಯರ್ ಆತನ ಬೌಲಿಂಗ್ ವೇಗವನ್ನು ಹೆಚ್ಚಿಸುತ್ತಿದೆಂದು ಹೇಳಲಾಗುತ್ತದೆ. ವೇಗ ಹೆಚ್ಚಾದಂತೆ ಗುರಿಯೂ ತೀಕ್ಷ್ಣವಾಗುತ್ತಿದ್ದುದು ಲರ‍್ವುಡ್ ಸ್ಪೆಷಲ್ ಎನ್ನಬೇಕು.

1920ರ ದಶಕದ ಕೊನೆಯಲ್ಲಿ ಲರ‍್ವುಡ್ ಬೌಲಿಂಗಿಗೆ ಕೀಪ್ ಮಾಡಿದ ವಿಕೆಟ್ ಕೀಪರ್ ಜರ‍್ಜಡಕ್ರ‍್ತತಮ್ಮ ಅಂಗೈಯನ್ನು ಅವರ ನಿಷ್ಕರುಣೆಯ ಬೌಲಿಂಗ್ನಿಂದ ರಕ್ಷಿಸಿಕೊಳ್ಳಲು   ಗ್ಲೋವ್ಸ್ ಒಳಗೆ ದನದ ಮಾಂಸದ ಉದ್ದನೆಯ ತುಂಡುಗಳನ್ನಿರಿಸಿಕೊಳ್ಳುತ್ತಿದ್ದರು. ಕಾಲಗಳೆದಂತೆ ಮಾಂಸ ಕೆಟ್ಟು ವಾಸನೆ ಬಂದು ಪಕ್ಕದಲ್ಲಿದ್ದ ಸ್ಲಿಪ್ ಫೀಲ್ರ‍್ಗಳು ಮೂಗುಮುಚ್ಚುವಂತಾಗುತ್ತಿತ್ತು. ಲರ‍್ವುಡ್ರ ಬೌಲಿಂಗ್ ವೇಗ 150 ರಿಂದ 160 ಕಿಮೀ ಆಗಿದ್ದು 160 ನ್ನು ಮೀರಿದ್ದೂ ಇದೆ. ಇಂದಿನ ಬೌರ‍್ಗಳಾರೂ ಆ ವೇಗವನ್ನು ಮುಟ್ಟಿಲ್ಲ. ಬಾಡಿಲೈನ್ ಸರಣಿಯಲ್ಲಿ ಬ್ರಾಡ್ಮನ್ ಆಡಿದ ಎಂಟು ಇನ್ನಿಂಗ್ಸ್ನಲ್ಲಿ ನಾಲ್ಕು ಬಾರಿ ಲಾರವುಡ್ಗೆ ವಿಕೆಟ್ ಒಪ್ಪಿಸಿದರು. ಅವರ ಬ್ಯಾಟಿಂಗ್ ಸರಾಸರಿ 56.57 ಕ್ಕೆ ರ‍್ರನೆ ಇಳಿದಿತ್ತು.

ಸ್ಟೋಟ್ ಎಂಬ ಮುಂಗುಸಿಯಂಥ ಆಕ್ರಮಣಕಾರಿ ಪ್ರಾಣಿ ಬೆನ್ನತ್ತಿ ಬಂದಾಗ ಪ್ರಾಣಭೀತಿಯಿಂದ ಓಡುವ ಮೊಲದ ಮನಸ್ಥಿತಿಯಂತೆ ಲರ‍್ವುಡ್ ಬೌಲ್ ಮಾಡಲು ಧಾವಿಸುವಾಗ ನನ್ನ ಮನಸ್ಥಿತಿ ಇರುತ್ತಿತ್ತೆಂದು ಅವರನ್ನು ಎದುರಿಸಿ, ನಂತರ ಅಂಪೈರ್ ವೃತ್ತಿಗಿಳಿದ ಫ್ರಾಂಕ್ ಲೀ ದಾಖಲಿಸಿದ್ದಾರೆ.

ಬಾಲಕರ‍್ಮಿಕನಾಗಿ ಕಲ್ಲಿದ್ದಲು ಗಣಿಯಲ್ಲಿ ಕೆಲಸಮಾಡಿ ದೇಹ ಮನಸ್ಸುಗಳನ್ನು ಕಠಿಣಮಾಡಿಕೊಂಡಿದ್ದ ಲಾರವುಡ್ ನಾಟಿಂಗ್ಹಾಂಶರ‍್ಗೆ ಆಯ್ಕೆಯಾದಾಗ ಸಹಜವಾಗೇ ಸಂತಸಗೊಂಡಿದ್ದರು. ಅವರ ನಾಯಕ ಜರ‍್ಡಿನ್ ಆಸ್ಟ್ರೇಲಿಯಾವನ್ನು ಮಣಿಸಲು ರಣತಂತ್ರ ರೂಪಿಸಿದ್ದಕ್ಕೆ ಅದರದೇ ಆದ ಕುತೂಹಲಕಾರಿ ಹಿನ್ನೆಲೆ ಇದೆ.

ಪ್ರವಾಸೀ ಆಸ್ಟ್ರೇಲಿಯಾ ತಂಡದ ವಿರುದ್ಧ 1921 ರಲ್ಲಿ  ಆಕ್ಸ್ರ‍್ಡ ವಿಶ್ವವಿದ್ಯಾಲಯ ತಂಡದ ಪರವಾಗಿ ಆಡಿದ ಜರ‍್ಡಿನ್ ಶತಕ ಪೂರೈಸಲು ಆಸ್ಟ್ರೇಲಿಯಾ ತಡೆ ಒಡ್ಡಿ ಪ್ರೇಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣರಾಗುತ್ತಾರೆ. ಬ್ರಿಟಿಷ್ ಮಾಧ್ಯಮ ಸಹಿತ ಆಸ್ಟ್ರೇಲಿಯಾ ತಂಡವನ್ನು ಟೀಕಿಸುತ್ತದೆ. ಈ ಘಟನೆ ಜರ‍್ಡಿನ್ ಆಸ್ಟ್ರೇಲಿಯಾ ವಿರುದ್ಧ ಕೋಪಗೊಳ್ಳಲು ಕಾರಣವೆಂದು ಹೇಳಲಾಗುತ್ತದೆ. ಏಳು ರ‍್ಷಗಳ ತರುವಾಯ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಸರಣಿಯ ಆರಂಭದಲ್ಲೇ ಮೂರು ಶತಕ ಗಳಿಸುವ ಜರ‍್ಡಿನ್ ತಮ್ಮ ಮಂದಗತಿಯ ಬ್ಯಾಟಿಂಗ್ನಿಂದ ಪ್ರೇಕ್ಷಕರ ಹೀಯಾಳಿಕೆ ಎದುರಿಸುತ್ತಾರೆ. ಪ್ರೇಕ್ಷಕರ ಅಸಮಾಧಾನಕ್ಕೆ ಅವರ ಅಹಂಕಾರ, ಅವರ ವಿಚಿತ್ರ ಫೀಲ್ಡಿಂಗ್ ವೈಖರಿ ಕೂಡ ಕಾರಣವಾಗುತ್ತದೆ. ಕುಪಿತಗೊಂಡ ಜರ‍್ಡಿನ್ ಆಸ್ಟ್ರೇಲಿಯಾ ಜನರೆಲ್ಲ ಅವಿದ್ಯಾವಂತರೆಂದು ಹೀಗಳೆಂದರೆಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ಮ್ಯಾಚ್ ಕೊನೆಗೊಳ್ಳುವ ವೇಳೆಯಲ್ಲಿ ಪ್ರೇಕ್ಷಕರ ಕಾಟ ತಡೆಯಲಾರದೇ  ಅವರತ್ತ ಉಗುಳಿದ್ದು ಕೂಡ ಉಂಟು. ಮ್ಯಾಚ್ ನಂತರ ತಂಡದ ಸದಸ್ಯರೊಬ್ಬರು ಆಸ್ಟ್ರೇಲಿಯಾ ಪ್ರೇಕ್ಷಕರು ಅವರನ್ನು ಇಷ್ಟಪಡುವುದಿಲ್ಲ ಎಂದು ಹೇಳಿದಾಗ "ಆ ದ್ವೇಷ ಪರಸ್ಪರ" ಎನ್ನುತ್ತಾರೆ.

ಆ ನಂತರದ ಆಶಸ್ ಸರಣಿಗೆ ಸಮರೋಪಾದಿಯಲ್ಲಿ ಜರ‍್ಡಿನ್ ತಯಾರಿ ನಡೆಸುವ ಮಟ್ಟಿಗೆ ಆಸ್ಟ್ರೇಲಿಯಾ ವಿರುದ್ಧ ವೈಮನಸ್ಯ ಮೂಡಿದ್ದರ ಹಿನ್ನೆಲೆ ಇದು. ಬಾಡಿಲೈನ್ ಸರಣಿ ಇವೆರಡೂ ದೇಶಗಳ ರಾಜತಾಂತ್ರಿಕ ಸಂಬಂಧವನ್ನು ಮುರಿಯುವ ಹಂತಕ್ಕೆ ತಂದಿರಿಸುತ್ತದೆ. ಆ ಸಂಬಂಧ ಹದಗೆಡದಿರಲು ಲಾರವುಡ್ ಕ್ಷಮೆ ಕೇಳಲು ಸೂಚಿಸಲಾಗುತ್ತದೆ. ಲರ‍್ವುಡ್ ನಿರಾಕರಿಸುತ್ತಾರೆ. ಅವರ ಅಮ್ಮ ಕೂಡ ಮಗನ ಮೊಂಡತನವನ್ನು ಸರ‍್ಥಿಸುತ್ತಾರೆ.

ಬಾಡಿಲೈನ್ ಸರಣಿಯಲ್ಲಿ ಹೊಡೆತ ತಿಂದದ್ದು ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಗಳಲ್ಲ, ಉನ್ನತ  ಕ್ರೀಡಾಮೌಲ್ಯ.