'ಬೆಂಗಾಲ್‌ ಮಹಾರಾಜ'ನ‌ ಹುಟ್ಟು ಹಬ್ಬದ‌ ನಿಮಿತ್ತ ಅಭಿಮಾನಿಗಳಿಂದ  ಉಚಿತ ಮಾಸ್ಕ್‌ ವಿತರಣೆ

'ಬೆಂಗಾಲ್‌ ಮಹಾರಾಜ'ನ‌ ಹುಟ್ಟು ಹಬ್ಬದ‌ ನಿಮಿತ್ತ ಅಭಿಮಾನಿಗಳಿಂದ  ಉಚಿತ ಮಾಸ್ಕ್‌ ವಿತರಣೆ

ಇಂದು ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ,ಬೆಂಗಾಲ್‌‌ ಮಹಾರಾಜ 'ದಾದ' ಎಂದೇ ಖ್ಯಾತಿಯಾದ ಸೌರವ್​ ಗಂಗೂಲಿ ಅವರಿಗೆ 48 ನೇ ಹುಟ್ಟು ಹಬ್ಬದ ಸಂಭ್ರಮ. ದಾದ ಜನ್ಮದಿನದ ಪ್ರಯುಕ್ತ ಕೋಲ್ಕತ್ತಾದ ಅಭಿಮಾನಿ ಬಳಗವೊಂದು ಗಂಗೂಲಿ ಫೋಟೋ ಇರುವ ಮಾಸ್ಕ್​ ವಿತರಣೆ ಮಾಡುವ ಮೂಲಕ ಗಂಗೂಲಿ  ಹುಟ್ಟು  ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಹಲವರ ಮೆಚ್ಷುಗೆಗೆ ಪಾತ್ರರಾಗಿದ್ದಾರೆ.

ಮಹಾರಾಜೆರ್​ ದರ್ಬಾರೆ ಎಂಬ ಗಂಗೂಲಿ ಅಭಿಮಾನಿ ಬಳಗ, ಗಂಗೂಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಫೋಟೋ ಹಾಗೂ ಮತ್ತೊಂದು ಕಡೆ ಬಿಸಿಸಿಐ ಅಧ್ಯಕ್ಷರಾದ ಸಂದರ್ಭದಲ್ಲಿ ತೆಗೆದಿರುವ ಗಂಗೂಲಿ ಫೋಟೋ ಇರುವ ಮಾಸ್ಕ್​ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.

'ಮಹಾರಾಜೆರ್​ ದರ್ಬಾರೆ' ಎಂಬ   ಅಭಿಮಾನಿ ಬಳಗವು  ಸರಿ ಸುಮಾರು 10 ಸಾವಿರ ಸದಸ್ಯರನ್ನು ಒಳಗೊಂಡಿದೆ.  

ದಾದಾ 48ನೇ ಜನ್ಮದಿನದ ಪ್ರಯುಕ್ತ 48 ಬಡ ಕುಟುಂಬಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡುವ ಉದ್ದೇಶ ತಮ್ಮ ಸಂಘಕ್ಕಿದೆ ಎಂದು ಅಭಿಮಾನಿ ಬಳಗದ ವ್ಯವಸ್ಥಾಪಕರಾದ ಸಯನ್​ ಸಮಂತಾ ಎಂಬುವವರು ತಿಳಿಸಿದ್ದಾರೆ.