ಬೆಂಗಳೂರಿನಲ್ಲೂ 'ಫ್ರೀ ಕಾಶ್ಮೀರ' ಎಂಬ ಗೋಡೆ ಬರಹಗಳು

ಬೆಂಗಳೂರಿನಲ್ಲೂ 'ಫ್ರೀ ಕಾಶ್ಮೀರ' ಎಂಬ ಗೋಡೆ ಬರಹಗಳು

ಬೆಂಗಳೂರು : ಮೈಸೂರು ನಂತರ ಈಗ ಬೆಂಗಳೂರಿನಲ್ಲೂ ಫ್ರೀ ಕಾಶ್ಮೀರ ಎಂಬ ಗೋಡೆ ಬರಹಗಳು ಕಾಣಿಸಿಕೊಂಡಿವೆ.

ಬೆಂಗಳೂರು ನಗರದ ಚರ್ಚ್‍ಸ್ಟ್ರೀಟ್‍ನ ಗೋಡೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ವಿರುದ್ಧ ಅವಹೇಳನಕಾರಿ ಬರಹಗಳು ಸೇರಿದಂತೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‍ಆರ್ ಸಿ ), ಪೌರತ್ವ ತಿದ್ದುಪಡಿ  ಕಾಯ್ದೆ (ಸಿ ಎ ಎ )ರದ್ದುಪಡಿಸಬೇಕೆಂಬ ಬರಹಗಳು ಕಂಡುಬಂದಿವೆ.

ರಾತ್ರೋರಾತ್ರಿ ಕಿಡಿಗೇಡಿಗಳು ಬಣ್ಣಚಿತ್ರಗಳು, ಬರಹಗಳನ್ನು ಬರೆದಿದ್ದು, ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಸ್ಥಳಕ್ಕೆ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮೈಸೂರು ವಿವಿ ಆವರಣದಲ್ಲಿ ತಮಿಳುನಾಡು ಮೂಲದ ಯುವತಿ ಪೋಸ್ಟರ್ ಹಿಡಿದು ವಿವಾದ ಸೃಷ್ಟಿಯಾದ ಪ್ರಕರಣ ಮಾಸುವ ಮುನ್ನವೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗೋಡೆಗಳು ಹಾಗೂ ಅಂಗಡಿ-ಮಳಿಗೆಗಳ ಶೆಟರ್ ಗಳ ಮೇಲೆ ವಿರೋಧಿ ಬರಹಗಳು ಕಂಡುಬಂದಿವೆ.