ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದು

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದು

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾ ಆಡಳಿತಗಾರ ಪರ್ವೇಜ್ ಮುಷರಫ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಿದೆ. ಪರ್ವೇಜ್ ಮುಷರಫ್‍ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ ಆದೇಶ ನೀಡಿದೆ.

2016ರಿಂದ ದುಬೈನಿಂದ ಸ್ವಯಂ ಗಡಿಪಾರಿಗೆ ಒಳಗಾಗಿರುವ 76 ವರ್ಷದ ಮುಷರಫ್, ಈಗ ಸ್ವತಂತ್ರ ವ್ಯಕ್ತಿಯಾಗಿದ್ದು, ಅವರು ಮುಕ್ತವಾಗಿ ಪಾಕಿಸ್ತಾನಕ್ಕೆ ಮರಳಬಹುದು ಎಂದು ಲಾಹೋರ್ ಹೈಕೋರ್ಟ್ ಹೇಳಿದೆ. ಈ ಅಪರಾಧವನ್ನು ಒಬ್ಬನೇ ವ್ಯಕ್ತಿ ಎಸಗಿರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

2007ರಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಸಂವಿಧಾನ ಉಲ್ಲಂಘನೆ ಮಾಡಿದ್ದಕ್ಕೆ ಮುಷರಫ್ ಅವರಿಗೆ ಮೂವರು ಸದಸ್ಯರ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.