ಉಜ್ಜಿವನ್ ಬ್ಯಾಂಕ್ ನ ಸ್ವತಂತ್ರ ನಿರ್ದೇಶಕರಾಗಿ ಪ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಲ್ ಸೇರ್ಪಡೆ

ಉಜ್ಜಿವನ್ ಬ್ಯಾಂಕ್ ನ ಸ್ವತಂತ್ರ ನಿರ್ದೇಶಕರಾಗಿ ಪ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಲ್ ಸೇರ್ಪಡೆ

ಬೆಂಗಳೂರು: ಇ-ಕಾಮರ್ಸ್ ನಲ್ಲಿ ಹೆಸರಾಂತ ಸಂಸ್ಥೆಯಾಗಿರುವ ಪ್ಲಿಪ್ ಕಾರ್ಟ್ ನ ಸಹಸಂಸ್ಥಾಪಕ ಮತ್ತು ಮಾಜಿ ಮುಖ್ಯ ಕಾರ್ಯ ನಿರ್ವಾಹಕ (ಸಿಇಓ) ಸಚಿನ್ ಬನ್ಸಲ್ ಉಜ್ಜಿವನ್ ಸಣ್ಣ ಹಣಕಾಸು ಬ್ಯಾಂಕ್ ನ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಕಳೆದ 2018 ರ ಮೇ ನಲ್ಲಿ ತಾವು ಸಹಸಂಸ್ಥಾಪಕರಾಗಿದ್ದ ಪ್ಲಿಪ್ ಕಾರ್ಟ್ ಇ- ಕಾಮರ್ಸ್ ಸಂಸ್ಥೆಯ ಶೇ 77 % ರಷ್ಟು ಶೇರನ್ನು ಅಮೇರಿಕಾದ ದೈತ್ಯ ಸಂಸ್ಥೆಯಾದ ವಾಲ್ ಮಾರ್ಟ್ಗೆ  16 ಶತಕೋಟಿ ಡಾಲರ್ ಗೆ ಮಾರಿದ ನಂತರ,  ತಮ್ಮ ವೈಯಕ್ತಿಕ ಕಾರಣಗಳಿಗೆ ಸಂಸ್ಥೆಯನ್ನು ತೊರೆದಿದ್ದರು.

ಮೂಲಗಳ ಪ್ರಕಾರ ಬನ್ಸಲ್ ಫ್ಲಿಪ್ ಕಾರ್ಟ್ ತೊರೆದ ನಂತರ ಹೊಸ ಬ್ಯಾಂಕ್ ಒಂದನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದು, ಬ್ಯಾಂಕಿಂಗ್ ವಲಯದ ಅನುಭವಕ್ಕೊಸ್ಕರ ಉಜ್ಜಿವನ್ ಗೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಉಜ್ಜಿವನ್ ಬ್ಯಾಂಕ್ ಇತ್ತೀಚಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ನ ಮಾಜಿ ಡಿಜಿಟಲ್ ಬ್ಯಾಂಕಿಕ್ ನ ಮುಖ್ಯಸ್ಥರಾಗಿದ್ದ ನಿತಿನ್ ಚೌಗ್ ಅವರನ್ನು ತಮ್ಮ ಮುಂದಿನ ಸಿಇಓ ಆಗಿ ನೇಮಕ ಮಾಡಿಕೊಂಡಿತ್ತು.

ಈ ನೇಮಕಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಮಿತ್ ಘೋಷ್ “ಬ್ಯಾಂಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ” ಎಂದು ತಿಳಿಸಿದ್ದಾರೆ.