ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಅಂತಿಮ ಸುತ್ತಿಗೆ ಸಿಂಧು ಪ್ರವೇಶ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಅಂತಿಮ ಸುತ್ತಿಗೆ ಸಿಂಧು ಪ್ರವೇಶ

ಬಾಸೆಲ್ (ಸ್ವಿಟ್ಜರ್ಲ್ಯಾಂಡ್) ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು  ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಅಂತಿಮ ಸುತ್ತಿನ ಸ್ಪರ್ಧೆಗೆ  ಪ್ರವೇಶ ಪಡೆದಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಸಿಂಧು 21-7 ಹಾಗೂ  21-14 ಅಂಕಗಳಿಂದ ಚೈನಾದ ಚೆನ್ ಯುಫೆ ಅವರು ವಿರುದ್ಧ ಜಯಗಳಿಸಿ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಲೀಲಾ ಜಾಲವಾಗಿ ಗೆದ್ದ ಸಿಂಧು , ಎರಡನೇ ಪಂದ್ಯದಲ್ಲಿ  ಸಾಕಷ್ಟು ಶ್ರಮ ವಹಿಸಿ ಅಂತಿಮ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆದರು. 40 ನಿಮಿಷಗಳ ಪಂದ್ಯದಲ್ಲಿ ಸಿಂಧು, ಏಕಪಕ್ಷೀಯ ಗೆಲುವು ಸಾಧಿಸಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸಿಂಧು ಅವರು 2013 ವಿಶ್ವ ಚಾಂಪಿಯನ್ ಥೈಲ್ಯಾಂಡ್ ನ ರಾಟ್ಚನೋಕ್ ಇಂಟನಾನ್ ಅಥವಾ 2017 ಜಪಾನ್ ವಿಜೇತ ನೊಜೋಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ.