ಇಂದು ವಿಶ್ವ ಅಪ್ಪಂದಿರ ದಿನವಂತೆ..?

ಇಂದು ವಿಶ್ವ ಅಪ್ಪಂದಿರ ದಿನವಂತೆ..?

ಅಪ್ಪ ಆ ಪದವೇ ಎಷ್ಟು ವಿಶಾಲವಾಗಿದೆ. ಅಪ್ಪನ ಕೈಬೆರಳು ಹಿಡಿದು ಅವನ ಕಣ್ಣಿನಲ್ಲಿ ಪ್ರಪಂಚ ನೋಡುವ ನಾವು ಅವನೇ ನಮಗೆ ಮಾರ್ಗದರ್ಶಕ ತೋರುವ ಗುರುವಾಗಿಸಿಕೊಂಡಿರುತ್ತೇವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ತನ್ನ ಅಪ್ಪನೇ ಮೊದಲ ಹಿರೋ. ನಾನು ಹುಟ್ಟಿದಾಗ ಅಯ್ಯೋ ಹೆಣ್ಣಾ ಎಂದು ಆಡಿಕೊಂಡವರಿಗೆ ನನ್ನಪ್ಪ ತಕ್ಕ ಉತ್ತರ ನೀಡಿದ್ದ ಮಗನಿಗಿಂತ ಹೆಚ್ಚು ನನ್ನ ಮಗಳು ಎಂದು ಹೇಳಿ ಬೀಗಿದ್ದ. ಅವನ ಕೈ ಬೆರಳು ಹಿಡಿದರೆ ನನ್ನಲ್ಲೇ ಏನೂ ಒಂದು ಆತ್ಮ ವಿಶ್ವಾಸ ಮೂಡುತ್ತಿತ್ತು. ನಾನು ಮೊದಲ ಬಾರಿ ಅಪ್ಪ ಎಂದು ಕರೆದಾಗ ಅಪ್ಪನಲ್ಲಿ ಆದ ಸಂತೋಷ ಹೇಳಲಾಗದು.

ನನಗೆ ಅಪ್ಪ ಎಂದರೆ ಗೌರವ ಅದರ ಜೊತೆ ಸ್ವಲ್ಪ ಭಯ ಆದರೆ ನನ್ನ ಎಲ್ಲಾ ಆಸೆಗಳಿಗೆ ಬೆಂಗಾವಲಿಗೆ ನಿಂತು ನನ್ನನ್ನು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದ ಯಾರು ಏನೇ ಅಂದರೂ ಛಲ ಬಿಡದೇ ನನ್ನನ್ನು ಲಾಲಿಸಿ ಪಾಲಿಸಿ ಓದಿಸಿದ. ಆದರೆ ಒಂದು ದಿನವೂ ತನಗೆ ಕಷ್ಟವಾಗುತ್ತಿದೆ. ನಮ್ಮ ಮುಂದೆ ಹೇಳಿಕೊಂಡವನಲ್ಲಾ ಆ ರೀತಿ ಎಷ್ಟೇ ಕಷ್ಟಗಳಿದ್ದರೂ ಅದನ್ನು ಬದಿಗಿರಿಸಿ ನಮ್ಮನ್ನು ತನ್ನ ಬೆವರ ಹನಿ ಬಸಿದು ಸಾಕಿದವ ನನ್ನಪ್ಪ.. ಅವನೆಂದರೆ ನನಗೆ ಏನು ಒಂದು ಹೆಮ್ಮೆ. ಅಂತಹ ಅಪ್ಪನಿಗೆ ಇಂದು ವಿಶೇಷ ದಿನ.

ಇಂದು ವಿಶ್ವ ಅಪ್ಪಂದಿರ ದಿನ ಹೌದು ಆದರೆ ಈ ವಿಶೇಷ ದಿನ ಎಷ್ಟು ತಂದೆಯರಿಗೆ ತಿಳಿದೇ ಇರುವುದಿಲ್ಲ. ವರ್ಷದಲ್ಲಿ ಅಪ್ಪನಿಗಾಗಿಯೇ ಒಂದು ದಿನವಿದೆ ಅಂದು ಮಕ್ಕಳು ತಂದೆಯ ಸ್ಮರಣೆ ಮಾಡುತ್ತಾರೆ ಎಂಬುದು ಮಧ್ಯಮ ಮತ್ತು ಕೆಳವರ್ಗದ ತಂದೆ ಮಕ್ಕಳಿಗೆ ತಿಳಿದಿರಲು ಹೇಗೆ ಸಾಧ್ಯ. ಈ ಸಂಸ್ಕೃತಿ ಭಾರತದಲ್ಲದಿದ್ದರೂ ಈ ಒಂದು ದಿನವಾದರೂ ಪ್ರತಿದಿನ ದೂಷಿಸುವ ತಂದೆಯನ್ನು ಈ ಒಂದು ದಿನವಾದರೂ ನೆನೆದು ಶುಭಕೋರುವ ಎಷ್ಟು ಮಕ್ಕಳನ್ನು ಈ ಭೂಮಿಯಲ್ಲಿ ಕಾಣಬಹುದು ಕೆಲವರು ನಿಷ್ಕಲ್ಮಶ ಪ್ರೀತಿಯಿಂದ ಅಪ್ಪನನ್ನು ಆರಾಧಿಸಿದರೆ. ಇನ್ನು ಕೆಲವರು ಇದು ಒಂದು ದಿನವೇ ಎನ್ನುವ ಮಕ್ಕಳು ನಮ್ಮ ಮಧ್ಯೆ ಇದ್ದಾರೆ ಎಂಬುದನ್ನು ಮರೆಯಬಾರದು.

ಅಪ್ಪಂದಿರ ದಿನ , ಅಮ್ಮಂದಿರ ದಿನ ಎಂದು ಆಚರಿಸುವ ನಾವು. ಏಕೆ ಅವರು ವಯಸ್ಸಾದ ಮೇಲೆ ವೃದ್ದಶ್ರಾಮಗಳಿಗೆ ಸೇರಿಸುತ್ತೇವೆ ದೇಶದಲ್ಲಿ ಹಿಂದೆಲ್ಲಾ ತಂದೆ ತಾಯಿ ದೇವರು ಕೊನೆಗೆ ಇರುವವರೆಗೂ ಎಂದು ಪೂಜಿಸುತ್ತಿದ್ದ ಕಾಲ ಇಂದು ಇಲ್ಲ ವಯಸ್ಸಾದ ತಂದೆ ವೃದ್ದಾಶ್ರಮದಲ್ಲಿದ್ದರೆ. ಮಕ್ಕಳು ವಿದೇಶದಲ್ಲಿ ಆರಾಮಾಗಿ ಇದ್ದಾರೆ. ನಾವು ಬೆಳೆಯುವಾಗ ತಂದೆಯ ಆಸರೆ ಬೇಕಿತ್ತು ಅದೇ ನಮ್ಮ ರೆಕ್ಕೆ ಬಲಿತ ಮೇಲೆ ಅದೇ ತಂದೆಯ ಅವಶ್ಯಕತೆ ಇರುವುದಿಲ್ಲ. ಅವರ ಮುಪ್ಪಿನ ಕಾಲದಲ್ಲಿ ಅವರು ಒಂದು ಪುಟ್ಟ ಮಗು ಎಂದು ಏಕೆ ಭಾವಿಸುವುದಿಲ್ಲ ಅಪ್ಪಂದಿರ ದಿನ ಎಂದು ಬೀಗುವ ಮೂಲಕ ಇಂದು ಒಂದು ದಿನ ಶುಭಕೋರುವ ನಾವು ಅವರನ್ನು ವೃದ್ದಾಶ್ರಮಕ್ಕೆ ಸೇರಿಸುವುದನ್ನೇ ಏಕೆ ಬಿಡುವುದಿಲ್ಲ.. ಎಂದಿಗೆ ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಗುತ್ತದೋ ಅಂದಿಗೆ ಅಪ್ಪಂದಿರ ದಿನದ ಸಾರ್ಥಕತೆ ಸಾಧ್ಯ.. ಅದನ್ನು ಬಿಟ್ಟು ಆಡಂಬರದ ಆಚರಣೆಯಿಂದ ಯಾವ ಬದಲಾವಣೆಯು ಆಗದೂ ಇದು ಅಷ್ಟೇ ಪ್ರತಿ ವರ್ಷ ಬರುವ ಹಬ್ಬದಂತಾಗಿ ಬಿಡುತ್ತದೆ.