ಮೂರು ಮಕ್ಕಳನ್ನು ದಡ ಸೇರಿಸಿ, ಪ್ರವಾಹದಡಿ ಸಿಲುಕಿದ  ತಂದೆ ಸಾವು

ಮೂರು ಮಕ್ಕಳನ್ನು ದಡ ಸೇರಿಸಿ, ಪ್ರವಾಹದಡಿ ಸಿಲುಕಿದ  ತಂದೆ ಸಾವು

ಭೋಪಾಲ್:  ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಮಕ್ಕಳನ್ನು ಸುರಕ್ಷಿತವಾಗಿ ದಡ ಸೇರಿಸಿದ ತಂದೆ ಪ್ರವಾಹದ ಸೆಳವಿಗೆ ಸಿಕ್ಕು ಮೃತಪಟ್ಟ ದಾರುಣ ಘಟನೆ ಇಲ್ಲಿಯ ಕೋಲರ್ ನಲ್ಲಿ ನಡೆದ ವರದಿಯಾಗಿದೆ.

ರಿಜ್ವಾನ್ ಖಾನ್ ಮೃತ ತಂದೆ. ಶಾಲಾ ಬಸ್ ಚಾಲಕನಿದ್ದು,ಕುಟುಂಬದೊಂದಿಗೆ ಅವರು ಮಧ್ಯಪ್ರದೇಶದ ಭೋಪಾಲ್ ಬಳಿಯ ಕೋಲರ್ ನ ಬಾಭಾಜಿಹ್ರಿಗೆ ತೆರಳಿದ್ದರು.   

ಹೊಳೆಯಲ್ಲಿ ಮೂವರು ಮಕ್ಕಳು ಆಟವಾಡುತ್ತಿದ್ದ ವೇಳೆ ಏಕಾಏಕಿಯಾಗಿ ನೀರಿನ ಪ್ರವಾಹ ಹೆಚ್ಚಿದೆ, ಮೊದಲು ಇಬ್ಬರನ್ನು ಪಾರು ಮಾಡಿದ ರಿಜ್ವಾನ್ ಖಾನ್ ಮೂರನೇ ಮಗುವನ್ನು ಸಹ ಹೇಗೋ ಸಂಬಂಧಿಕರಿಗೆ ತಲುಪಿಸಿದ್ದರು. ತಾವು ಹೊರ ಬರಬೇಕೆಂದರೆ ಕಾಲು ಬಂಡೆಗಳ ಮಧ್ಯೆ ಸಿಲುಕಿತ್ತು. ಅವರಿಗೆ ಈಜಿ ದಡ ಸೇರಲು ಆಗಲೇ ಇಲ್ಲ. ಪ್ರವಾಹ ಹೆಚ್ಚುತ್ತಾ ಹೋಯಿತು ಎನ್ನಲಾಗಿದೆ. ನಂತರ ಪ್ರವಾಹ ಇಳಿದಾಗ ಪೊಲೀಸರು ರಿಜ್ವಾನ್ ಖಾನ್ ಅವರ ಶವವನ್ನು ಹೊರತೆಗೆದರು. ಈ ಕುರಿತು ಕೋಲರ್ ಠಾಣೆಯಲ್ಲಿ ದೂರು ದಾಖಲಾಗಿದೆ.