ಯಾವಾಗಲೊಮ್ಮೆ ಕಣ್ಣು ಬಡಿದುಕೊಳ್ಳುವುದರ ಹಿಂದಿದೆ ವೈಜ್ಞಾನಿಕ ಕಾರಣ

ಯಾವಾಗಲೊಮ್ಮೆ ಕಣ್ಣು ಬಡಿದುಕೊಳ್ಳುವುದರ ಹಿಂದಿದೆ ವೈಜ್ಞಾನಿಕ ಕಾರಣ

ಯಾವಗಲೊಮ್ಮೆ ಕಣ್ಣು ಬಡಿದುಕೊಳ್ಳುತ್ತದೆ. ಬಲಗಡೆ ಕಣ್ಣು ಬಡಿದುಕೊಂಡರೆ ಶುಭ ಸಂಕೇತ. ಎಡಗಡೆಯ ಕಣ್ಣು ಬಡಿದುಕೊಂಡರೆ ಏನು ಅಪಶಕುನ ಕಾದಿದೆ ಎಂದು ನಂಬಿಕೊಳ್ಳವುದು ಸಹಜ. ಆದರೆ ಕಣ್ಣು ಬಡಿದುಕೊಳ್ಳುವುದಕ್ಕೆ ವೈಜ್ಞಾನಿಕ ಕಾರಣಗಳು ಇವೆ. ಆವು ಯಾವವು ಅಂದರೆ.?

ಕಣ್ಣಿನ ಮಾಂಸ ಖಂಡಗಳಿಗೆ ಸಂಬಂಧಿಸಿದ ಸಮಸ್ಯೆ ಉಂಟಾದರೆ ಕಣ್ಣು ಬಡಿಯಲು ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ನೀವು ಕನ್ನಡಕ ಬದಲಾಯಿಸಬೇಕು.

ಚಿಂತೆ ಹೆಚ್ಚಾದರೆ ಕಣ್ಣು ಬಡಿಯಲು ಆರಂಭಿಸುತ್ತದೆ. ಸರಿಯಾಗಿ ನಿದ್ರೆ ಸರಿಯಾಗಿ ಮಾಡದೆ ಇದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹೆಚ್ಚು ಹೊತ್ತು ಕಂಪ್ಯೂಟರ್,ಲ್ಯಾಪ್ ಟಾಪ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಈ ಸಮಸ್ಯೆ ಕಾಡುತ್ತದೆ.

ಹೌದು ಕಣ್ಣು ಹೆಚ್ಚು ಡ್ರೈ ಆಗುವುದರಿಂದ, ಅಲರ್ಜಿ ಉಂಟಾಗುವುದರಿಂದ, ತುರಿಕೆ ಮೊದಲಾದ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಾಗ ಹೀಗೆ ಆಗುತ್ತದೆಯಂತೆ.!