ಸರ್ವಂ  ಪ್ಯಾಸ್ಟಿಕ್  ಮಯಂ  ಆದರೂ?  

ಪ್ಲಾಸ್ಟಿಕ್ ನಿಷೇಧವಾಗಿದ್ದರೂ ಕೂಡ ಬಳಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ,ದೇಶದೆಲ್ಲಡೆ ಎಗ್ಗಿಲ್ಲದೇ ಕಾನೂನಿನ ವಿರುದ್ದವಾಗಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ.ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ.ಈ ನಿಟ್ಟಿನಲ್ಲಿ ಗಾಂಧಿ ಜಯಂತಿ ದಿನದಿಂದ ಅಂದರೆ ಇಂದಿನಿಂದ ದೇಶದ್ಯಾಂತ ಮರು ಬಳಕೆಯಾದ ಪ್ಲಾಸ್ಟಿಕ್ ನಿಷೇಧಿಸಿ,ಆದೇಶ ಹೊರಡಿಸಲು ಕೇಂದ್ರಸರ್ಕಾರ ಮುಂದಾಗಿದೆ. 

ಸರ್ವಂ  ಪ್ಯಾಸ್ಟಿಕ್  ಮಯಂ  ಆದರೂ?  

ಪ್ಲಾಸ್ಟಿಕ್ ಅನ್ನು ನಮ್ಮ ದಿನನಿತ್ಯದ ಜೀವನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಪೆನ್ನಿನಿಂದ ಹಿಡಿದು ಹಣ್ಣುಗಳನ್ನು ಮತ್ತು  ಪುಸ್ತಕಗಳನ್ನು ಸಾಗಿಸುವ ಪಾಲಿಥೀನ್ ಚೀಲ ಪ್ಲಾಸ್ಟಿಕ್ ರೂಪಗಳಾಗಿವೆ.ನಮ್ಮ ದಿನನಿತ್ಯದ ಬಳಕೆಯಲ್ಲಿ ಅನುಕೂಲಕರವಾಗಿದ್ದರೂ ಇದು ಪರಿಸರಕ್ಕೆ ಅಪಾಯಕಾರಿ ಬೆದರಿಕೆಯನ್ನು ಒಡ್ಡಿದೆ. 

ಇನ್ನೂ ಪ್ಲಾಸ್ಟಿಕ್ ವಿಘಟನೀಯವಲ್ಲ ಮತ್ತು ಸೂಕ್ಷ್ಮ ಜೀವಿಗಳ ಜೈವಿಕ ಕ್ರಿಯೆಗಳಿಂದ ಕೊಳೆಯವುದಿಲ್ಲ.ನಾವು ಅವುಗಳನ್ನ ಎಸೆದಂತೆಯೇ ಅವು ಅದೇ ಸ್ಥಿತಿಯಲ್ಲಿರುತ್ತವೆ. ಹೀಗಿದ್ದರೂ ನಮ್ಮ ನಗರಗಳಲ್ಲಿ ಎಲ್ಲೆಂದರಲ್ಲಿ ಮಣ್ಣನ್ನ ಕಲುಷಿತಗೊಳಿಸುವಂತೆ ಕಸವನ್ನ ಹಾಕಲಾಗುತ್ತಿದೆ. ಇನ್ನೂ  ಈ ಪ್ಲಾಸ್ಟಿಕ್ ನ್ನ ಸುಟ್ಟರೇ ಅವು ಕಾರ್ಬನ್ ಡೈ ಆಕ್ಸೈಡ್ ,ಕಾರ್ಬನ್ ಮೊನಾಕ್ಸೈಡ್,ನೈಟ್ರಸ್ ಆಕ್ಸೈಡ್,ಮೀಥೇನ್,ಸಲ್ಫರ್ ಡೈ ಆಕ್ಸೈಡ್ ಮುಂತಾದ ಹಾನಿಕಾರಕ ರಾಸಾಯನಿಕ ಅನಿಲಗಳನ್ನ ಹೊರಸೂಸುತ್ತವೆ.ಈ ಅನಿಲಗಳು ನಮ್ಮ ಪರಿಸರವನ್ನು ಕಲುಷಿತಗೊಳಿಸುತ್ತದೆ.ಈ ಕಾರಣಗಳಿಂದ ಇಂದಿನಿಂದ ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಆಗಿದೆ.ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡು ಬಂದರೆ ದಂಡ ವಿಧಿಸಲಾಗುತ್ತದೆ. 

ಪ್ಲಾಸ್ಟಿಕ್ ನಿಷೇಧವಾಗಿದ್ದರೂ ಕೂಡ ಬಳಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ,ದೇಶದೆಲ್ಲಡೆ ಎಗ್ಗಿಲ್ಲದೇ ಕಾನೂನಿನ ವಿರುದ್ದವಾಗಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ.ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ.ಈ ನಿಟ್ಟಿನಲ್ಲಿ ಗಾಂಧಿ ಜಯಂತಿ ದಿನದಿಂದ ಅಂದರೆ ಇಂದಿನಿಂದ ದೇಶದ್ಯಾಂತ ಮರು ಬಳಕೆಯಾದ ಪ್ಲಾಸ್ಟಿಕ್ ನಿಷೇಧಿಸಿ,ಆದೇಶ ಹೊರಡಿಸಲು ಕೇಂದ್ರಸರ್ಕಾರ ಮುಂದಾಗಿದೆ. 

ಉದ್ಯಾನಗಳ ನಗರ ಬೆಂಗಳೂರು ಗಾರ್ಬೆಜ್ ಸಿಟಿಯಾಗಿದೆ.ಅದರಲ್ಲೂ ಕಸದ ಸಮಸ್ಯೆಯೇ ತೀವ್ರವಾಗಿದೆ.ಹೀಗಾಗಿ ಬಿಬಿಎಂಪಿ 2016ರಿಂದಲೇ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು,ಕಳೆದ ಒಂದು ವರ್ಷದಲ್ಲಿ,ಪ್ಲಾಸ್ಟಿಕ್ ಬಳಕೆಗೆ 86 ಲಕ್ಷ ರೂ.ದಂಡ ಹಾಕಲಾಗಿತ್ತು. ಇತ್ತ ಇಂದಿನಿಂದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ.ಒಂದು ವೇಳೆ ಪ್ಲಾಸ್ಟಿಕ್ ಬಳಸಿದರೆ ಒಂದು ಸಾವಿರ ರೂ.ದಂಡ ಹಾಕಲಾಗುವುದು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ ಕುಮಾರ್ ವರ್ಮ ಅವರು ಆದೇಶಿಸಿದ್ದಾರೆ. 

ರೈಲು ನಿಲ್ದಾಣದ ಜೊತೆಗೆ ಇಂದಿನಿಂದ ಬಿಎಂಟಿಸಿಯ ಎಲ್ಲಾ ಡಿಪೋಗಳು,ಕಚೇರಿ,ವರ್ಕ್ ಶಾಪ್ ಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ.ಈ ಬಗ್ಗೆ ಬಿಎಂಟಿಸಿ ಎಂ.ಡಿ ಶಿಖಾ ಆದೇಶ ಹೊರಡಿಸಿದ್ದಾರೆ. ಆದರೆ ಇಂದಿನ ಜಾಗತಿಕ ಯುಗದಲ್ಲಿ ಪ್ರತಿಯೊಂದು ಅಂಶಗಳನ್ನ ಗಮನಿಸುತ್ತ ಹೋದಂತೆಲ್ಲಾ ನಾವು ಎಲ್ಲ ಪರಿಸರ ಹಾನಿವಸ್ತುಗಳನ್ನ ತ್ಯಜಿಸಬೇಕು ಎಂಬ ಪಣತೊಟ್ಟರೂ ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಆ ವಸ್ತುಗಳು ಅತ್ಯವಶ್ಯಕವೆಂಬತೆ ಆಗಿಹೋಗಿವೆ ಎಂದು ಹೇಳಬಹುದು. 

ಈ ದಿಶೆಯಲ್ಲಿ ಅಂಗಡಿಯಲ್ಲಿ ಮಾರುವ ಬಿಸ್ಕತ್ ಗೆ ಸುಂದರವಾಗಿ ಪ್ಯಾಸ್ಟಿಕ್ ನಲ್ಲಿ ಪ್ಯಾಕ್ ಮಾಡಲಾಗಿದೆ. ಟೀ ಪುಡಿಗೂ ಪ್ಲಾಸ್ಟಿಕ್ ಕವರಿನಲ್ಲಿ ಪ್ಯಾಕ್ ಮಾಡಲಾಗಿದೆ.ಇದೇ ರೀತಿ ಅಡುಗೆ ಎಣ್ಣೆ,ಯಾವುದೇ ವಿಧವಾದ ಪ್ಯಾಕೆಟ್ ಹಾಲನ್ನ ಖರೀದಿಸಿದರೂ ಅದರ ಪ್ಯಾಕೇಜ್ ಪ್ಲಾಸ್ಟಿಕ್ ನಿಂದಕೂಡಿದೆ.ಚಿಕ್ಕ ಮಕ್ಕಳು ತಿನ್ನುವ ಲೇಸ್ ನಿಂದ ಹಿಡಿದು ಮೆಣಸಿನಪುಡಿ,ಅರಸಿನಪುಡಿ,ಸಾಂಬಾರಪುಡಿ ಹೀಗೆ ಇನ್ನೂ ಕೆಲವು 

ಸಾಮಾನುಗಳೂ ಬಣ್ಣ ಬಣ್ಣದ ಪ್ಲಾಸ್ಟಿಕ್ ಪ್ಯಾಕ್ ಗಳದ್ದೇ ಆಗಿ ಹೋಗಿವೆ,ಆದರೂ ಕೊನೆಗೆ ಬಿಲ್ ಕೊಟ್ಟು ಸಾಮಾನು ಹಾಕಲು ಕವರ್ ಕೇಳಿದರೆ ಹೇಳುವುದು ಮಾತ್ರ ನಮ್ಮ ನಗರದಲ್ಲಿ ಪ್ಲಾಸ್ಟಿಕ್ ನಿಷೇದಿಸಲಾಗಿದೆ  

ಅಬ್ಬಾ!,ಏನ್ ವಿಚಿತ್ರ ಅಲ್ವಾ ? ದಿನನಿತ್ಯದ ವಸ್ತುಗಳ ಪ್ಯಾಕೇಜ್ ಮಾಡಿರುವುದೇ ಪ್ಯಾಸ್ಟಿಕ್ ನಿಂದ ಆದರೆ ಹೇಳುವುದು ಮಾತ್ರ ಪ್ಯಾಸ್ಟಿಕ್ ಮುಕ್ತವೆಂದು ಆದ್ದರಿಂದ ಕೇಂದ್ರ ಸರ್ಕಾರ ಮೊದಲು ಇದರತ್ತ ಗಮನಹರಿಸಿ ಉತ್ಪನ್ನಗಳ ಪ್ಯಾಕೇಜ್ ಗೆ ಪ್ಯಾಸ್ಟಿಕ್ ಬದಲಿಗೆ ಯಾವುದನ್ನ ಬಳಸಬಹುದು ಎಂಬುದನ್ನ ಚಿಂತನೆ ನಡೆಸುವುದು ಇಲ್ಲಿ ಬಹುಮುಖ್ಯವಾಗಿದೆ. 

ಇನ್ನೂ ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ವ್ಯಾಪಕ  ಬೆಂಬಲ ವ್ಯಕ್ತವಾಗಿದ್ದರೂ ಪ್ಲಾಸ್ಟಿಕ್ ಉದ್ಯಮದಲ್ಲಿ ಕೆಲಸಮಾಡುವ 45 ಲಕ್ಷ ಕಾರ್ಮಿಕರ ಬದುಕಿನಲ್ಲಿ ಮುಂದೇನು ಎಂಬ ಭಯ ಕಾಡುತಿದೆ. ಕೆಲವು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ನಿರ್ಧಾರ ಮಾಡುವ ಮೊದಲು ಈಗಾಗಲೇ ಉತ್ಪಾದಿಸಿದ ವಸ್ತುಗಳನ್ನ ಮಾರಾಟ ಮಾಡಲು ಅನುಮತಿ ಬೇಕು. ಇಲ್ಲದೇ ಹೋದರೆ ಭಾರೀ ನಷ್ಟ ಉಂಟಾಗುತ್ತದೆ ಎಂದು ಪ್ಲಾಸ್ಟಿಕ್ ಸಂಘಟನೆಗಳು ಹೇಳುತ್ತವೆ, ಈಗಾಗಲೇ ಸಣ್ಣ ಪ್ಲಾಸ್ಟಿಕ್ ಉತ್ಪಾದಕರು ಉತ್ಪಾದನೆಯನ್ನ ಕಡಿಮೆಗೊಳಿಸಿದ್ದು ಸ್ಟ್ರಾ,ಪ್ಲೇಟ್, ಕಪ್ಪುಗಳ ಉತ್ಪಾದನೆಯನ್ನ ಕಡಿಮೆಗೊಳಿಸಿವೆ. ಪ್ರಧಾನಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಏಕಬಳಕೆಯ 
ಪ್ಲಾಸ್ಟಿಕ್  ನಿರ್ಮೂಲನೆ ಕುರಿತು ಹೇಳಿದಂದಿನಿಂದ ಉತ್ಪಾದನೆ ಕುಂಠಿತವಾಗಿ ಭಾರಿ ನಷ್ಟ ಅನುಭವಿಸುತ್ತಿವೆ. 

ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಹಿತೇನ್ ಬಡಾ ಅವರ ಪ್ರಕಾರ ಈಗಾಗಲೇ 80,000 ಮಂದಿಯ ಉದ್ಯೋಗಗಳು ಬಾಧಿತವಾಗಿವೆ, ಈ ಕ್ಷೇತ್ರ ಸುಮಾರು 700 ಕೋಟಿ ರೂ ನಷ್ಟ ದಾಖಲಿಸಿದೆ. 

ಪಶ್ಚಿಮ ಬಂಗಾಳದ ಪ್ಲಾಸ್ಟಿಕ್ ಉದ್ಯಮದ ಮೌಲ್ಯ 15,000 ಕೋಟಿ.ರೂ ಎನ್ನಲಾಗಿದೆ. ರಾಜ್ಯದಲ್ಲಿ 3,500 ಪ್ಲಾಸ್ಟಿಕ್ ಘಟಕಗಳಿದ್ದು, ಇವುಗಳು ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಿದ್ದು ಉತ್ಪಾದಿಸಲಾದ 8,000 ಟನ್ ಪ್ಲಾಸ್ಟಿಕ್ ಪೈಕಿ 6,500 ಟನ್ ಬಳಕೆಯಾಗಿಲ್ಲದೇ ಇರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಈಗ ಪ್ಲಾಸ್ಟಿಕ್ ಉದ್ಯಮಿಗಳು ತಾವು ಮುಂದೆ ಯಾವ ರೀತಿಯ ಪರ್ಯಾಯ ಉದ್ಯಮ ಕೈಕೊಳ್ಳಬೇಕೆಂಬುದರ ಕುರಿತಂತೆ ಅನಿಶ್ಚಿತತೆಯಲ್ಲಿದ್ದಾರೆ.