ಪೂರ್ವಾನುಮತಿ ಪಡೆಯದ ಪತ್ರಕರ್ತರಿಗೆ ಹಣಕಾಸು ಸಚಿವಾಲಯ ಪ್ರವೇಶ ನಿಷೇಧ

ಪೂರ್ವಾನುಮತಿ ಪಡೆಯದ ಪತ್ರಕರ್ತರಿಗೆ ಹಣಕಾಸು ಸಚಿವಾಲಯ ಪ್ರವೇಶ ನಿಷೇಧ

ದೆಹಲಿ: ಇದೇ ಮೊದಲ ಬಾರಿಗೆ ಸೂಕ್ತ ಅನುಮತಿ ಪಡೆಯದ ಪತ್ರಕರ್ತರು ಹಣಕಾಸು ಸಚಿವಾಲಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ಹಣಕಾಸು ಸಚಿವಾಲಯ ಅನುಮತಿ ಇಲ್ಲದ ಪ್ರವೇಶ ನಿಷೇಧಿಸಿದ ಬಳಿಕ ಪತ್ರಕರ್ತರು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‍ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕೆಗಳ ಮಾಹಿತಿ ಕಚೇರಿ(ಪಿಐಬಿ)ಯ ಮಾನ್ಯತೆ ಪಡೆದ ಪತ್ರಕರ್ತರಿಗೂ ನಿಷೇಧ ವಿಧಿಸಲಾಗಿದೆ.

ಸಚಿವಾಲಯದ ನಿರ್ಧಾರವನ್ನು ವಿರೋಧಿಸಿ ನಾಳೆ ಹಣಕಾಸು ಸಚಿವಾಲಯ ಏರ್ಪಡಿಸಿರುವ ‘ಬಜೆಟ್‍ ಔತಣಕೂಟ’ದಲ್ಲಿ ಪಾಲ್ಗೊಳ್ಳದಿರಲು ನೂರು ಮಂದಿ ಪತ್ರಕರ್ತರು ವಿರೋಧಿಸಿದ್ದಾರೆ.

ಸಚಿವಾಲಯದ ಹೊಸ ನಿಯಮಕ್ಕೆ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್‍ ‘ ಇಲ್ಲಿ ಪತ್ರಕರ್ತರ ಪ್ರವೇಶವನ್ನು ನಿಷೇಧಿಸಲಾಗಿಲ್ಲ. ಬದಲಾಗಿ ಪತ್ರಕರ್ತರು ಸೂಕ್ತ ಅನುಮತಿ ಪಡೆದು ಸಚಿವಾಲಯದ ಕಟ್ಟಡವನ್ನು ಪ್ರವೇಶಿಸಲು ತಿಳಿಸಲಾಗಿದೆ. ಸಚಿವಾಲಯದಲ್ಲಿ ಪ್ರಸಾರ ಮಾಡುವ ಮತ್ತು ಮಾಹಿತಿ ನೀಡುವ ಕಾರ್ಯವನ್ನು ಅನುಮತಿ ಇಲ್ಲದೆ ನಡೆಸುವಂತೆ ಹೇಳಲಾಗಿದೆಯೇ ಹೊರತು ‘ನಿಷೇಧ’ ಎನ್ನುವ ಪದವನ್ನು ಎಲ್ಲಿಯೂ ಬಳಸಿಲ್ಲ ಎಂದು ಹೇಳಿದ್ದಾರೆ.

ಹಣಕಾಸು ಸಚಿವಾಲಯ ಮತ್ತು ಸಚಿವರ ತೀರ್ಮಾನಕ್ಕೆ ದೇಶದ ಮಾಧ್ಯಮಗಳ ಸಂಪಾದಕರ ಸಂಘ ವಿರೋಧ ವ್ಯಕ್ತಪಡಿಸಿದೆ.