ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್: ಆಸ್ಟ್ರೇಲಿಯಾಗೆ 8 ವಿಕೆಟ್ ಸೋಲು

ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್: ಆಸ್ಟ್ರೇಲಿಯಾಗೆ 8 ವಿಕೆಟ್ ಸೋಲು

ಬರ್ಮಿಂಗ್‍ಹ್ಯಾಂ: ವಿಶ್ವಕಪ್‍ ಸೆಮಿಫೈನಲ್‍ ತಂಡದಲ್ಲಿ ಅತಿಥೇಯ ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್‍ ಗೆಲುವು ಕಂಡಿದ್ದು 1992 ರ ನಂತರ ಮೊದಲ ಬಾರಿಗೆ ವಿಶ್ವಕಪ್‍ ಫೈನಲ್‍ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್‍ ಆರಂಭಿಸಿದ ಆಸ್ಟ್ರೇಲಿಯಾ 224 ರನ್‍ ಸುಲಭ ಗುರಿಯನ್ನು ಇಂಗ್ಲೆಡ್‍ಗೆ ನೀಡಿತ್ತು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ ಕೇವಲ ಎರಡು ವಿಕೆಟ್‍ ಕಳೆದುಕೊಂಡು 32.1 ನೇ ಓವರ್‍ನಲ್ಲಿ 226 ರನ್‍ ಗಳಿಸುವ ಮೂಲಕ ಇಂಗ್ಲೆಂಡ್‍ ಗೆಲುವಿನ ದಡ ಮುಟ್ಟಿದೆ. ಇಂಗ್ಲೆಂಡ್‍ ಆರಂಭಿಕ ಬ್ಯಾಟ್ಸ್‍ಮನ್‍ 85 ರನ್‍ ಗಳಿಸಿ ಉತ್ತಮ ಆಟ ನೀಡಿದ್ದಾರೆ. ಉಳಿದಂತೆ ಜಾನಿ ಬೇಸ್ಟೋ 34 ರನ್‍, ಜೋ ರೂಟ್‍ ಔಟಾಗದೇ 49 ರನ್‍, ಮೋರ್ಗಾನ್‍ ಔಟಾಗದೇ 45 ರನ್‍ ಗಳಿಸಿದ್ದಾರೆ.

ಜುಲೈ14 ರಂದು ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ಫೈನಲ್‌ ಹಣಾಹಣಿ ನಡೆಯಲಿದೆ.