ಪಶ್ವಿಮ ಬಂಗಾಳದಲ್ಲಿ ನಾಳೆ ರಾತ್ರಿಯಿಂದ ಚುನಾವಣಾ ಪ್ರಚಾರ ನಿಷೇಧ : ಚುನಾವಣಾ ಆಯೋಗದ ಮಹತ್ವದ ತೀರ್ಮಾನ

ಪಶ್ವಿಮ ಬಂಗಾಳದಲ್ಲಿ ನಾಳೆ ರಾತ್ರಿಯಿಂದ ಚುನಾವಣಾ ಪ್ರಚಾರ ನಿಷೇಧ : ಚುನಾವಣಾ ಆಯೋಗದ ಮಹತ್ವದ ತೀರ್ಮಾನ

ದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿ.ಜೆ.ಪಿ ಹಾಗೂ ಟಿ.ಎಂ.ಸಿ ಕಾರ್ಯಕರ್ತರ ನಡುವಿನ ಹಿಂಸಾಚಾರ ತೀವ್ರಗೊಳ್ಳುತ್ತಿರುವುದರಿಂದ ನಿಗದಿಪಡಿಸಿದ್ದಕ್ಕಿಂತ ಒಂದು ದಿನ ಮೊದಲೇ ಚುನಾವಣಾ ಪ್ರಚಾರ ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಮೇ 19 ರಂದು ನಡೆಯಲಿರುವ ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ಮೇ 17 ರ ವರೆಗೆ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ಅಮಿತ್‌ ಶಾ ರೋಡ್‌ ಬಳಿಕ ಬಿ.ಜೆ.ಪಿ ಮತ್ತು ಟಿ.ಎಂ.ಸಿ ಕಾರ್ಯಕರ್ತರ ನಡೆಯುತ್ತಿರುವ ಜಗಳ ತೀವ್ರ ಹಿಂಸಾಚಾರಕ್ಕೆ ತಿರುಗುತ್ತಿರುವುದರಿಂದ ಗುರುವಾರ ರಾತ್ರಿ 10 ಗಂಟೆಯ ನಂತರ ಯಾವುದೇ ಪ್ರಚಾರಕ್ಕೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿದೆ.

‘ ಪಶ್ವಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆಯಿಂದ ಯಾವುದೇ ರೀತಿಯ ಚುನಾವಣೆ ನಡೆಯುವುದಿಲ್ಲ’ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.