ಆರ್ಥಿಕ ಹಿಂಜರಿತದ ಬಿಸಿ: ಪಾಕಿಸ್ತಾನದಲ್ಲಿ ಲೀಟರ್ ಹಾಲಿಗೆ 140 ರೂ.

ಆರ್ಥಿಕ ಹಿಂಜರಿತದ ಬಿಸಿ: ಪಾಕಿಸ್ತಾನದಲ್ಲಿ ಲೀಟರ್ ಹಾಲಿಗೆ 140 ರೂ.

ಕರಾಚಿ: ಮೊಹರಂ ವೇಳೆ ಪಾಕಿಸ್ತಾನದಲ್ಲಿ ಹಾಲಿನ ಬೆಲೆ ಲೀಟರ್ ಗೆ 140 ರೂ. ಗೆ ಹೆಚ್ಚಳ ಕಂಡಿತ್ತು.

ಹಬ್ಬದ ಸಂದರ್ಭದಲ್ಲಿ ದಿನಸೀ ಆಹಾರ-ಧಾನ್ಯಗಳ ಬೆಲೆಯೂ ಏರಿಕೆಯಾಗುವುದು ಸಾಮಾನ್ಯ ಎಂದು ಹೇಳುವಂತಿಲ್ಲ. ಹಾಗೆಯೇ ಪಾಕಿಸ್ತಾನದಲ್ಲಿ ಹಾಲಿನ ದರವು ಹೆಚ್ಚಿರಬಹುದು ಎಂದು ತಿಳಿದಿದ್ದರೆ ತಪ್ಪು.

ಕರಾಚಿಯಲ್ಲಿ ಹಾಲಿನ ದರವನ್ನು ನಿಗದಿ ಪಡಿಸುವ ಅಧಿಕಾರ ಸ್ಥಳೀಯ ಜಿಲ್ಲಾಡಳಿತಕ್ಕೆ ಇದ್ದು, ಅದೇ ಲೀಟರ್ ಹಾಲಿಗೆ 94 ರೂ.ಗಳಂತೆ ನಿಗದಿ ಪಡಿಸಿದೆ.

ಪಾಕಿಸ್ತಾನದ ಕರಾಚಿಯಲ್ಲಿ 1 ಲೀಟರ್ ಪೆಟ್ರೋಲ್ ಗೆ 113 ರೂ. ಹಾಗೂ 1 ಲೀಟರ್ ಡಿಸೇಲ್ ಗೆ 91 ರೂ. ಇದೆ. ಸಾಮಾನ್ಯ ಸ್ಥಿತಿಯಲ್ಲೂ ಪ್ರತಿ ಲೀಟರ್ ಹಾಲಿಗೆ ಜನರು 94 ರೂ. ತೆರಬೇಕಿದೆ. ಪಾಕಿಸ್ತಾನದಲ್ಲಿ ಆರ್ಥಿಕ ಹಿಂಜರಿತದ ವೇಗ ಹೆಚ್ಚುತ್ತಿದೆ ಎಂಬುದೇ ಇಲ್ಲಿಯ ವಸ್ತು.