ಆರ್ಥಿಕ ಸಮೀಕ್ಷೆ: 2019-20ರ ವೇಳೆಗೆ ಜಿಡಿಪಿ ಶೇ.7ರಷ್ಟು ತಲುಪುವ ನಿರೀಕ್ಷೆ

ಆರ್ಥಿಕ ಸಮೀಕ್ಷೆ: 2019-20ರ ವೇಳೆಗೆ ಜಿಡಿಪಿ ಶೇ.7ರಷ್ಟು ತಲುಪುವ ನಿರೀಕ್ಷೆ

ದೆಹಲಿ: ಮೋದಿ ಸರ್ಕಾರ ಎರಡನೇ ಅವಧಿಯ ಮೊದಲ ಬಜೆಟ್ ನಾಳೆ ಮಂಡನೆಯಾಗಲಿದ್ದು, ಇಂದು ರಾಷ್ಟ್ರದ ಆರ್ಥಿಕ ಸಮೀಕ್ಷೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದು, 2020ರ ವೇಳೆಗೆ ಶೇ.7ರಷ್ಟು ಆರ್ಥಿಕ ಪ್ರಗತಿ ಗುರಿ ತಲುಪುವ ನಿರೀಕ್ಷೆ ಹೊಂದಲಾಗಿದೆ ಎಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದರು.

2018-19ನೆ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಕೆಲವು ಮಹತ್ವದ ಗುರಿಗಳನ್ನು ಸಾಕಾರಗೊಳಿಸಲು ಉದ್ದೇಶಿಸಲಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ದಾಖಲಾಗಿದ್ದ ಶೇ.6.8ರಷ್ಟು ಆರ್ಥಿಕ ಪ್ರಗತಿ ಐದು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. 2020ನೇ ಸಾಲಿಗೆ ಶೇ.7ರಷ್ಟು ತಲುಪುವ ಗುರಿ ಹೊಂದಲಾಗಿದೆ.

2019-20ನೇ ಸಾಲಿನ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಎಂದು ಅಂದಾಜಿಸಲಾಗಿದೆ. ಆರ್ಥಿಕ ಚೇತರಿಕೆಗೆ ಹೆಚ್ಚು ಒತ್ತು ನೀಡುವ ಮೂಲಕ ಆರ್ಥಿಕ ಪ್ರಗತಿಯನ್ನು ಶೇ.7ರಷ್ಟು ತಲುಪಲು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳನ್ನು ಸಮೀಕ್ಷಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ದೇಶದಲ್ಲಿನ ರಾಜಕೀಯ ಸ್ಥಿರತೆಯು ಆರ್ಥಿಕತೆಯ ಶಕ್ತಿಯನ್ನು ವರ್ಧಿಸಲು ಸಹಕಾರಿಯಾಗಬೇಕು. ಹೆಚ್ಚಿನ ಸಾಮರ್ಥ್ಯದ ಬಳಕೆ ಮತ್ತು ವ್ಯಾಪಾರ ನಿರೀಕ್ಷೆಗಳಲ್ಲಿ ಹೆಚ್ಚಳವು ಹೂಡಿಕೆಯ ಚಟುವಟಿಕೆಯನ್ನು ಹೆಚ್ಚಿಸಬೇಕು ಎಂದು ಸುಬ್ರಮಣಿಯನ್ ತಮ್ಮ ಸಮೀಕ್ಷೆಯಲ್ಲಿ ಹೇಳಿದ್ದಾರೆ.