ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲ : ಕ್ರಿಕೆಟಿಗ ಪ್ರಥ್ವಿ ಶಾ ಗೆ 8 ತಿಂಗಳ ನಿಷೇಧ

ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲ : ಕ್ರಿಕೆಟಿಗ ಪ್ರಥ್ವಿ ಶಾ ಗೆ 8 ತಿಂಗಳ ನಿಷೇಧ

ದೆಹಲಿ : ಭಾರತದ ಆರಂಭಿಕ ಬ್ಯಾಟ್ಸ್‍ಮನ್‍ ಪ್ರಥ್ವಿ ಶಾ ಅವರಿಗೆ ಉದ್ದೀಪನಾ ದ್ರವ್ಯ ಸೇವಿಸಿರುವ ಆರೋಪ ಸಾಬೀತಾದ ಬಳಿಕ 8 ತಿಂಗಳ ಕಾಲ ನಿಷೇಧ ಹೇರಿದೆ.

19 ರ ಹರೆಯದ ಪ್ರಥ್ವಿ 2018 ರಲ್ಲಿ ವೆಸ್ಟ್ ಇಂಡೀಸ್‍ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದರು. ಸರಣಿಯಲ್ಲಿ ಎರಡು ಪಂದ್ಯ ಆಡಿದ ಬಳಿಕ ಸೊಂಟದ ಗಾಯದಿಂದಾಗಿ ಹೊರಗುಳಿದಿದ್ದರು. ಆ ಬಳಿಕ ಸೈಯದ್‍ ಮುಷ್ತಕ್‍ ಟ್ರೋಫಿ ಸಂದರ್ಭದಲ್ಲಿ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವ ಆರೋಪ ಎದುರಿಸಿದ್ದರು.

ಪ್ರಥ್ವಿ ಶಾ ಅವರ ನಿಷೇಧ ಅವಧಿ ಈ ಹಿಂದೆ ಪಂದ್ಯಾವಳಿಯಿಂದ ಹೊರಗಿಟ್ಟ ದಿನಾಂಕ ಮಾರ್ಚ್ 16 ರಿಂದ ಮುಂದಿನ ನವೆಂಬರ್‍ 15 ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.