ಚುನಾವಣೆಗೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ

ಚುನಾವಣೆಗೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುದವರೆದಿರುವ ಮಧ್ಯೆಯೇ ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಫೆಬ್ರವರಿ 24 ರೊಳಗೆ ಟ್ರಂಪ್ ಅವರು ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಬಹುದೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುವರೆದಿರುವುದು ಮತ್ತು  ಕಾಶ್ಮೀರದ 370ನೇ ವಿಧಿ ರದ್ಧತಿ ಬಳಿಕ ಟ್ರಂಪ್‌ ಭಾರತದ ಭೇಟಿ ಹಲವು ವಿಶೇಷಗಳಿಗೆ ಕಾರಣವಾಗಿದೆ.

ಕಳೆದ ವರ್ಷದ ಜನವರಿ 26 ಗಣ ರಾಜ್ಯೋತ್ಸವಕ್ಕೆ ಟ್ರಂಪ್‌ ಅವರನ್ನು ಭಾರತ ಆಹ್ವಾನಿಸಿತ್ತು. ಆದರೆ ಅವರಿಗೆ ಸಮಯಾವಕಾಶ ಒದಗಿರಲಿಲ್ಲ. ಕಳೆದ ಜನವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರಿಗೆ ಕರೆಮಾಡಿ ಮಾತನಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದಲ್ಲಿ ನವೆಂಬರ್‌ನಲ್ಲಿ  ಚುನಾವಣೆ ನಡೆಯಲಿದ್ದು ಅದಕ್ಕೂ ಮುನ್ನ ಟ್ರಂಪ್ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಆಹ್ವಾನದ ಬಗ್ಗೆ ಟ್ರಂಪ್ ಮಾಹಿತಿ ನೀಡಿದ್ದು, ಅವರು ಭಾರತಕ್ಕೆ ಆಹ್ವಾನಿಸಿದ್ದಾರೆ. ಸಮಯ ಸಿಕ್ಕಾಗ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ.

ಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್‌ ನಂತರ ಭಾರತಕ್ಕೆ ಟ್ರಂಪ್ ಮತ್ತು ಬರಾಕ್ ಒಬಾಮ ಭೇಟಿ ನೀಡಿದ್ದರು.  ವಾಸ್ತವವಾಗಿ, ಒಬಾಮಾ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. 2010 ರಲ್ಲಿ ಮತ್ತು 2015 ರಲ್ಲಿ, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೊದಲ ಯುಎಸ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಟ್ರಂಪ್ ಭಾರತ ಭೇಟಿಯ ಪ್ರಮುಖ ಕೇಂದ್ರ ಬಿಂದು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದವಾಗಿದೆ. ಟ್ರಂಪ್ , ಭಾರತದ ಆದ್ಯತೆಯ ವ್ಯಾಪಾರ ಸ್ಥಿತಿಯನ್ನು ರದ್ದುಗೊಳಿಸಿದಾಗ ಭಾರತ-ಯುಎಸ್ ವ್ಯಾಪಾರ ಸಂಬಂಧಗಳಲ್ಲಿ ಬಿರುಕು ಮೂಡಿಸಿತ್ತು.