ಜಮ್ಮು-ಕಾಶ್ಮೀರ ಪರಿಶೀಲನೆಗೆ ವಿಮಾನ ಕಳುಹಿಸುವುದು ಬೇಡ, ಜನರು ನಿರ್ಭೀಡೆಯಿಂದ ಸಂಚರಿಸುತ್ತಾರೆಯೆ : ರಾಜ್ಯಪಾಲರಿಗೆ ರಾಹುಲ್ ತಿರುಗೇಟು

ಜಮ್ಮು-ಕಾಶ್ಮೀರ ಪರಿಶೀಲನೆಗೆ ವಿಮಾನ ಕಳುಹಿಸುವುದು ಬೇಡ, ಜನರು ನಿರ್ಭೀಡೆಯಿಂದ ಸಂಚರಿಸುತ್ತಾರೆಯೆ : ರಾಜ್ಯಪಾಲರಿಗೆ ರಾಹುಲ್ ತಿರುಗೇಟು

ದೆಹಲಿ: ‘ನಮ್ಮ ವಿಮಾನವನ್ನು ಕಳುಹಿಸುತ್ತೇವೆ.  ಕಣಿವೆ ರಾಜ್ಯದಲ್ಲಿಯ ವಾಸ್ತವತೆಯನ್ನು ಪರಿಶೀಲಿಸಬಹುದು’ ಎಂಬ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲ್ಲಿಕ್ ಅವರು (ಆ..12) ಆಹ್ವಾನಿಸಿದ್ದ ಮರುದಿನವೇ (ಆ.13) ಈ ಸವಾಲನ್ನು ಸ್ವೀಕರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ನಿಮ್ಮ ವಿಮಾನವೇನು ಕಳುಹಿಸುವ ಅಗತ್ಯವಿಲ್ಲ.ಸಾಮಾನ್ಯ ಜನರು ಹಾಗೂ ನಾಯಕರನ್ನು ಭೇಟಿಯಾಗುವ ಹಾಗೂ ಸ್ವತಂತ್ರವಾಗಿ ಸಂಚರಿಸುವ ಬಗ್ಗೆ ನಮಗೆ ಭರವಸೆ ಕೊಡಿ’ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ‘ನಿಮ್ಮ ಆಹ್ವಾನದ ಮೇರೆಗೆ ನಾವು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಕ್ಕೆ ನಮ್ಮ ನಿಯೋಗವು ಭೇಟಿ ನೀಡುತ್ತದೆ. ನಿಮ್ಮ ವಿಮಾನದ ಅಗತ್ಯ ನಮಗಿಲ್ಲ. ಆದರೆ, ಅಲ್ಲಿ ಮುಕ್ತವಾಗಿ ಸಂಚರಿಸುವ ಹಾಗೂ ಸಾಮಾನ್ಯರೊಂದಿಗೆ-ನಾಯಕರೊಂದಿಗೆ ಮತ್ತು ನಮ್ಮ ಸೈನಿಕರೊಂದಿಗೆ ಮಾತನಾಡುವ ಮುಕ್ತ ಅವಕಾಶವಿದೆಯೇ ಎಂಬುದರ ಬಗ್ಗೆ ಭರವಸೆ ಕೊಡಿ’ ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಹಿಂಸೆ ಪ್ರಕರಣಗಳು ತಾಂಡವವಾಡುತ್ತಿವೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ರಾಜ್ಯಪಾಲ ಸತ್ಯಪಾಲ ಮಲ್ಲಿಕ್ ಅವರು ‘ನಿಮಗೆ ವಿಮಾನ ಕಳುಹಿಸುತ್ತೇವೆ. ಇಲ್ಲಿಗೆ ಬಂದು ವಾಸ್ತವತೆ ಪರಿಶೀಲಿಸಿ’ ಎಂದು ಟ್ವೀಟ್ ಮಾಡಿದ್ದರು. ಮಾತ್ರವಲ್ಲ; ಪಾರ್ಲಿಮೆಂಟ್ ನಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯರು, ಕಾಶ್ಮೀರದಲ್ಲಿಹಿಂಸೆ  ಹೆಚ್ಚುತ್ತಿದೆ  ಎಂದು ಮೂರ್ಖರ ಹಾಗೆ ಮಾತನಾಡಿದ್ದರು. ಇದು ನಾಚಿಕೆಗೇಡು. ಆದ್ದರಿಂದ, ವಿಮಾನ ಕಳುಹಿಸುತ್ತೇವೆ ಬಂದು ಪರಿಶೀಲಿಸಿ’ ಎಂದು ರಾಜ್ಯಪಾಲ ಮಲ್ಲಿಕ್ ಆಹ್ವಾನಿಸಿದ್ದರು.

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಹಾಗೂ 35(ಎ) ರದ್ದತಿಯನ್ನು ಕೋಮುವಾದ ದೃಷ್ಟಿಯಿಂದ ನೋಡಬಾರದು. ಆಸ್ಪತ್ರೆಗಳು ಸೇವೆಯಲ್ಲಿವೆ. ಕೆಲ ದಿನಗಳ ಹಿಂದೆ ಕೆಲ ಯುವಕರು ಗಲಾಟೆ ಮಾಡಿದ್ದರಿಂದ ಅವರ ಕಾಲಿಗೆ ಗುಂಡು ಹಾರಿಸಿದ ಪ್ರಕರಣ ಬಿಟ್ಟರೆ ಯಾವ ಪ್ರಜೆಯ ಮೇಲೂ ಗೋಲಿಬಾರ್ ನಡೆದಿಲ್ಲ. ವಿದೇಶಿ ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿದ್ದು,  ಅವರನ್ನು ನಿಯಂತ್ರಿಸಲಾಗಿದೆ ಎಂದರು.

ತುರ್ತು ಪರಿಸ್ಥಿತಿ  ವೇಳೆ ನಾಯಕರನ್ನು ಒಂದೂವರೆ ವರ್ಷ ಜೈಲಿನಲ್ಲಿಡಲಾಯಿತು. ಆಗ ಯಾರೂ ಬಂಧನದ ಬಗ್ಗೆ ಪ್ರಶ್ನಿಸಲಿಲ್ಲ. ನಾನೂ ಸಹ 30 ಬಾರಿ ಜೈಲಿಗೆ ಹೋಗಿದ್ದೇನೆ. ಮುಂಜಾಗ್ರತೆ ಕ್ರಮವಾಗಿ ಜನರನ್ನು ಗುಂಫುಗೂಡಿಸಿದ್ದರೆ ಅವರನ್ನು ವಶದಲ್ಲಿರಿಸಲಾಗಿದೆ ಎಂದರ್ಥವೆ ಎಂದು ರಾಜ್ಯಪಾಲ ಮಲ್ಲಿಕ್ ಪ್ರತಿಕ್ರಿಯಿಸಿದ್ದಾರೆ.