ಮೋದಿ ಸರ್ಕಾರ 2014 ರಲ್ಲಿ ಆರ್.ಬಿ.ಐನಲ್ಲಿದ್ದ 200 ಟನ್ ಚಿನ್ನವನ್ನು ರಹಸ್ಯವಾಗಿ ಸ್ವಿಜರ್ ಲ್ಯಾಂಡ್‌ಗೆ ಸಾಗಿಸಿದೆಯೇ?

ಚಿನ್ನ ವಿನಿಮಯಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಸಿಕ್ಕಿದ್ದೇನು? ಈ ವಹಿವಾಟಿನ ಬಗೆಗಿನ ಚರ್ಚೆ ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬರಲಿಲ್ಲವೇಕೆ?

ಮೋದಿ ಸರ್ಕಾರ 2014 ರಲ್ಲಿ ಆರ್.ಬಿ.ಐನಲ್ಲಿದ್ದ 200 ಟನ್ ಚಿನ್ನವನ್ನು  ರಹಸ್ಯವಾಗಿ ಸ್ವಿಜರ್ ಲ್ಯಾಂಡ್‌ಗೆ ಸಾಗಿಸಿದೆಯೇ?

2014 ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಮೋದಿ ಸರ್ಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 200 ಟನ್ ಚಿನ್ನವನ್ನು ರಹಸ್ಯವಾಗಿ  ಸ್ವಿಜರ್ ಲ್ಯಾಂಡ್ಗೆ ಸಾಗಿಸಿದೆ ಎಂದು ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ.

ತನಿಖಾ ಪತ್ರಕರ್ತ, ಲೇಖಕ ನವನೀತ್ ಚತುರ್ವೇದಿ ಅವರು ಕಳೆದ ವಾರ ಆರ್ ಬಿ ಐನಲ್ಲಿ ಅಸ್ತಿತ್ವದಲ್ಲಿರುವ ಚಿನ್ನದ ಬಗ್ಗೆ ಮಾಹಿತಿ ಕೋರಿ ಆರ್ ಟಿ ಐ ರ‍್ಜಿ ಸಲ್ಲಿಸಿದ ನಂತರ ಸಿಕ್ಕ ಕೇಂದ್ರೀಯ ಬ್ಯಾಂಕಿನ ವಾರ್ಷಿಕ ವರದಿಗಳ ಅಧ್ಯಯನದ ಮೂಲಕ ಈ ಲೇಖಕ ‍ರಿಸರ್ವ್ ಬ್ಯಾಂಕ್ 2009 ರಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಖರೀದಿಸಿದ್ದ 200 ಟನ್ ಚಿನ್ನ ಕಾಣೆಯಾಗಿದೆ ಎಂದು ಹೇಳಿದ್ದಾರೆ.

2009 ರ ಐಎಂಎಫ್ ಸೀಮಿತ ಚಿನ್ನದ ಮಾರಾಟ ‍ಕಾರ್ಯಕ್ರಮದಡಿಯಲ್ಲಿ ಭಾರತವು ಬ್ರೆಟನ್ ವುಡ್ ಸಂಸ್ಥೆಯಿಂದ 31,490 ಕೋಟಿ ರುಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿತ್ತು.

ಆರ್‌ಬಿಐನ ನಾಗ್ಪುರ ಖಜಾನೆಯಲ್ಲಿ ಸಂಗ್ರಹವಾಗಿರುವ ಚಿನ್ನದ ಪ್ರಮಾಣದ ಬಗ್ಗೆ ಮಾಹಿತಿ ಕೋರಿ 2018ರ ಅಗಸ್ಟ್ ನಲ್ಲಿ ಸಲ್ಲಿಸಲಾಗಿದ್ದ ಆರ್ ಟಿ ಐ ಅರ್ಜಿಗೆ ಉತ್ತರಿಸಿದ ಕೇಂದ್ರ ಬ್ಯಾಂಕ್ ‍ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತುತ ಮಾಹಿತಿ ಬಹಿರಂಗ ನೀತಿಯ ಪ್ರಕಾರ ಈ ಪ್ರಶ್ನೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇನ್ನು ವಿದೇಶದಲ್ಲಿರುವ ಇರುವ ಆರ್ ಬಿ ಐನ ಚಿನ್ನದ ಪ್ರಮಾಣ ಎಷ್ಟು ಎಂಬ ಪ್ರಶ್ನೆಗೆ ಉತ್ತರಿಸಿದ ಆರ್ ಬಿ ಐ 268.01 ಟನ್ ಚಿನ್ನವನ್ನು ವಿದೇಶದಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟೆಲ್ಮೆಂಟ್ನೊಂದಿಗೆ ಸುರಕ್ಷಿತ ವಶದಲ್ಲಿ ಇದೆ ಎಂದು ಉತ್ತರಿಸಿದೆ.

“ಚಿನ್ನ ವಿನಿಮಯ ಮಾಡಿಕೊಂಡದಕ್ಕೆ ಪ್ರತಿಯಾಗಿ ‍ಸರ್ಕಾರಕ್ಕೆ ಸಿಕ್ಕಿದ್ದೇನು. ಈ ವಹಿವಾಟಿನ ಬಗೆಗಿನ ಮಾಹಿತಿ ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲ ಏಕೆ ”ಎಂದು ಚತುರ್ವೇದಿ ಕೇಳುತ್ತಿದ್ದಾರೆ. 2011 ರಿಂದ 2015 ರವರೆಗೆ ಆರ್.ಬಿ.ಐನ ಲೆಕ್ಕಪರಿಶೋಧನಾ ವರದಿಗಳನ್ನು ಅವಲೋಕಿಸಿದಾಗ 2014 ಮತ್ತು 2015 ರ ನಡುವೆ ಏನೋ ಮಹತ್ತರವಾದದ್ದು ಸಂಭವಿಸಿದೆ ಎಂಬುದು ತಿಳಿಯುತ್ತದೆ ಎಂದು ಚತರ್ವೇದಿ   ಹೇಳುತ್ತಾರೆ.

ಭಾರತ ಚಿನ್ನದ ಸ್ವತ್ತುಗಳನ್ನು ವಿದೇಶಕ್ಕೆ ರವಾನಿಸಿರುವುದು  ಸಾರ್ವಜನಿಕ ವಲಯದಲ್ಲಿಯೇ ಇರಬೆಕು. ಆದರೆ ಸಾರ್ವಜನಿಕ ಪರಿಶೀಲನೆಯನ್ನು ತಪ್ಪಿಸಲು ಮೋದಿ ಸರ್ಕಾರವು ಸ್ಪಷ್ಟವಾಗಿ ಸಾರ್ವಜನಿಕರಿಂದ ಏನನ್ನೋ ಮರೆಮಾಡುತ್ತಿದೆ ಎಂದು ಚತುರ್ವೇದಿ ಹೇಳುತ್ತಾರೆ.