ಕುಡಿತದ ಗುಟ್ಟು ಬಿಚ್ಚಿಟ್ಟ ಧರ್ಮೇಂದ್ರ

ಕುಡಿತದ ಗುಟ್ಟು ಬಿಚ್ಚಿಟ್ಟ ಧರ್ಮೇಂದ್ರ

ಹಿಂದಿ ಚಿತ್ರರಂಗದ ಉತ್ತುಂಗವನ್ನೇರಿದ್ದ ಧರ್ಮೇಂದ್ರ ರಾತ್ರಿ ಆಲ್ಕೊಹಾಲ್ ಕುಡಿದು, ಬೆಳಗ್ಗೆ ಅದರ ವಾಸನೆ ಬರದಿರಲು ಏನು ಮಾಡುತ್ತಿದ್ದರು ಎಂಬುದರ ಸತ್ಯ ಬಿಚ್ಚಿಟ್ಟಿದ್ದಾರೆ.

ಚಿತ್ರೀಕರಣ ಮುಗಿದಾಗ ರಾತ್ರಿ ವೇಳೆ ಡ್ರಿಂಕ್ಸ್ ಪಾರ್ಟಿ ಇರುತ್ತಿತ್ತು. ಮಾರನೇ ದಿನ ಅದರ ವಾಸನೆ ಬರದಿರಲಿ ಎಂದು ಈರುಳ್ಳಿ ತಿಂದು ಹೋಗುತ್ತಿದ್ದರಂತೆ, ಸಹ ನಟಿ ಆಶಾ ಪರೇಖ್ ಈ ಬಗ್ಗೆ ಪ್ರಶ್ನಿಸಿದ್ದಾಗ, ಧರ್ಮೇಂದ್ರ ಕುಡಿತದ ವಾಸನೆ ಬರದಿರಲೆಂದು ಹೀಗೆ ಮಾಡಿದೆ ಎಂದು ಹೇಳಿದ್ದರಂತೆ,

ಅವತ್ತೇ ಆಕೆ ಇನ್ನು ಮುಂದೆ ಕುಡಿಯಬಾರದು ಎಂದು ಭಾಷೆ ತೆಗೆದುಕೊಂಡಿದ್ದರಂತೆ, ಅದರಂತೆಯೇ ನಡೆದುಕೊಳ್ಳುತ್ತಿದ್ದೇನೆ, ಕುಡಿತ ಎಂಬುದು ಅವತ್ತೇ ಬಿಟ್ಟು ಹೋಯಿತು, ಆಶಾ ಪರೇಖ್ ಕುಟುಂಬ ಸ್ನೇಹಿತೆಯಾಗಿ ಉಳಿದಿದ್ದಾರೆ ಎಂಬ ಸತ್ಯವನ್ನ ರಿಯಾಲಿಟಿ ಷೋನಲ್ಲಿ ಹೇಳಿ, ಚಪ್ಪಾಳೆ ಗಿಟ್ಟಿಸಿದ್ದಾರೆ.