ದೆಹಲಿ ಹಿಂಸಾಚಾರ : ಮೃತ ಪೊಲೀಸ್ ಪೇದೆ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಘೋಷಿಸಿದ ದೆಹಲಿ ಸರ್ಕಾರ

ದೆಹಲಿ ಹಿಂಸಾಚಾರ : ಮೃತ ಪೊಲೀಸ್ ಪೇದೆ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಘೋಷಿಸಿದ ದೆಹಲಿ ಸರ್ಕಾರ

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು ಕೇಂದ್ರ ಮತ್ತು ದೆಹಲಿ ಸರ್ಕಾರಗಳು ವಿಫಲವಾಗಿವೆ. ಈ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪರಿಸ್ಥಿತಿ ಮಾತ್ರ ಸಹಜಸ್ಥಿತಿಗೆ ಮರಳುತ್ತಿಲ್ಲ. ಆದರೆ ದೆಹಲಿ ಸರ್ಕಾರ ಈ ಹಿಂಸಾಚಾರದಲ್ಲಿ ಬಲಿಯಾದ ಮುಖ್ಯ ಪೋಲಿಸ್ ಪೇದೆ ರತನ್ ಲಾಲ್ ಕುಟುಂಬಕ್ಕೆ 1 ಕೋಟಿ. ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ.

ಈ ಬಗ್ಗೆ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿ ಜನರು ಶಾಂತಿ ಪ್ರಿಯರು, ದೆಹಲಿ ಜನತೆ ಶಾಂತಿಯನ್ನು ಕಾಪಾಡಬೇಕು ಎಂದು ದೆಹಲಿ ಜನತೆಗೆ ಮನವಿ ಮಾಡುತ್ತೇನೆ. ಹಿಂಸಾಚಾರದಲ್ಲಿ ಬಲಿಯಾದ ಪೊಲೀಸ್ ಪೇದೆ ರತನ್ ಲಾಲ್ ಕುಟುಂಬದ ಹೊಣೆ ನಮ್ಮದು, ಹೀಗಾಗಿ ಅವರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ಘೋಷಿಸಿದರು. ಮತ್ತು ಅವರ ಕುಟುಂಬದ ಯಾರಾದರೂ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಿದ್ದಾರೆ

ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಸಿಎಎ ಕುರಿತು ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಡೀ ಈಶಾನ್ಯ ದೆಹಲಿಯೇ ಹತ್ತಿ ಉರಿಯುತ್ತಿದೆ. ಈ ಗಲಭೆಯಲ್ಲಿ ಅಮಾಯಕ ಜೀವಗಳ ಬಲಿದಾನವಾಗಿದೆ. ಇದರಲ್ಲಿ ಪೊಲೀಸ್ ಪೇದೆ ರತನ್ ಲಾಲ್ ಕೂಡ ಈ ದಾಳಿಗೆ ಬಲಿಯಾಗಿದ್ದರು.