ಆರ್.ಬಿ.ಐ.ನಿಂದ ಚಿನ್ನ ಖರೀದಿ ಇಳಿಕೆ

ಆರ್.ಬಿ.ಐ.ನಿಂದ ಚಿನ್ನ ಖರೀದಿ ಇಳಿಕೆ

ರಿಸರ್ವ್ ಬ್ಯಾಂಕಿನಲ್ಲಿ ಹೆಚ್ಚುವರಿಯಾಗಿದ್ದ ಲಕ್ಷಾಂತರ ಕೋಟಿ ಹಣವನ್ನು ಕೇಂದ್ರ ಸರ್ಕಾರ ವರ್ಗಾಯಿಸಿಕೊಂಡಿದೆ. ಇದನ್ನ ಯಾವುದಕ್ಕೆ ಬಳಸುತ್ತೆ ಎಂಬುದಿನ್ನೂ ಬಹಿರಂಗವಾಗಿಲ್ಲ ಹೇಗೋ, ಹದಗೆಡುತ್ತಿರುವ ಆರ್ಥಿಕ ಸ್ಥಿತಿಯೂ ಸುಧಾರಣೆಯೂ ಆಗುತ್ತಿಲ್ಲ ಎಂಬುದೂ ಮುಚ್ಚುತ್ತಿರುವ ಕಾರ್ಖಾನೆಗಳು, ಬೀದಿಗೆ ಬೀಳುತ್ತಿರುವ ನಿರುದ್ಯೋಗಿಗಳು, ನೆಲ ಕಚ್ಚಿರುವ ವ್ಯಾಪಾರ ವಹಿವಾಟಿನಿಂದಲೇ ಗೊತ್ತಾಗುತ್ತೆ.

ಇದರ ನಡುವೆಯೇ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿ ಪ್ರಮಾಣ ಕಡಿಮೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಬ್ಯಾಂಕಿನಲ್ಲಿ 618 ಟನ್‍ಗಳಷ್ಟು ಇದೆ. ಏಪ್ರಿಲ್‍ನಲ್ಲಿ 5.6 ಟನ್‍ನಷ್ಟು ಚಿನ್ನ ಖರೀದಿ ಮಾಡಿದ್ದನ್ನ ಬಿಟ್ಟರೆ,ನಂತರ ಎಷ್ಟು ಖರೀದಿಸಿದೆ ಎಂಬುದೇ ಬಹಿರಂಗಗೊಳಿಸಿಲ್ಲ.

ಚಿನ್ನದ ಬೆಲೆ ಹಿಂದೆಂದೂ ಕಂಡಿರದಷ್ಟು ದುಬಾರಿಯಾಗಿದೆ. ಆಗಸ್ಟ್ ಮತ್ತು ಜೂನ್ ನಲ್ಲಿ ಗ್ರಾಹಕರು ಹೆಚ್ಚು ಚಿನ್ನ ಖರೀದಿಸಿದರೂ, ಕಳೆದ ವರ್ಷ 72 ಟನ್ ಚಿನ್ನ ಆಮದು ಮಾಡಿಕೊಂಡಿದ್ದರ ಪ್ರಮಾಣ ಈ ವರ್ಷ 38 ಟನ್‍ಗೆ ಇಳಿದಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 111.5 ಟನ್ ಚಿನ್ನ ತರಿಸಿಕೊಂಡಿದ್ದರ ಪ್ರಮಾಣ ಈ ವರ್ಷ ಕೇವಲ 30 ಟನ್‍ಗಿಳಿದಿದ್ದು, ಮೂರು ವರ್ಷಗಳಲ್ಲಿಯೇ ಇದು ಅತಿ ಕಡಿಮೆ ಆಮದು ಪ್ರಮಾಣವಾಗಿದೆ.

ಭಾರತೀಯ ರುಪಾಯಿಯಲ್ಲಿ ಚಿನ್ನದ ಬೆಲೆ ಶೇ. 25 ರಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ಖರೀದಿ ಭರಾಟೆ ಕುಸಿದಿದ್ದು ರಿಸರ್ವ್ ಬ್ಯಾಂಕ್ ಹಾಗು ಇತರ ಬ್ಯಾಂಕುಗಳು ಚಿನ್ನ ಖರೀದಿಗೆ ಮುಂದೆ ಬರುತ್ತಿಲ್ಲ. ಬದಲಿಗೆ ಗ್ರಾಹಕರೇ 37 ಟನ್‍ನಷ್ಟು ಚಿನ್ನ ಮಾರಿದ್ದಾರೆ. ಒಟ್ಟಾರೆಯಾಗಿ 2017 ರ ಆಗಸ್ಟ್ನಲ್ಲಿ ಬ್ಯಾಂಕುಗಳು ಖರೀದಿಸಿದ್ದ ಚಿನ್ನದ ಪ್ರಮಾಣದಲ್ಲಿ ಪ್ರಸ್ತುತ ಶೇ.90 ರಷ್ಟು ಇಳಿಕೆಯಾಗಿಬಿಟ್ಟಿದ್ದು, ಇದೂ ಕೂಡ ಆರ್ಥಿಕ ದುಸ್ಥಿತಿಯನ್ನೇ ಪ್ರತಿಬಿಂಬಿಸುತ್ತಿವೆ ಎಂಬ ವ್ಯಾಖ್ಯಾನಗಳಿವೆ.