ಡಿಯರ್ ಕಾಮ್ರೇಡ್ ಚಿತ್ರದ ಟ್ರೇಲರ್ ರಿಲೀಸ್; ಮತ್ತೆ ತೆರೆ ಮೇಲೆ ರಶ್ಮಿಕಾ-ದೇವರಕೊಂಡ ಲವ್ ಕೆಮಿಸ್ಟ್ರಿ

ಡಿಯರ್ ಕಾಮ್ರೇಡ್ ಚಿತ್ರದ ಟ್ರೇಲರ್ ರಿಲೀಸ್; ಮತ್ತೆ ತೆರೆ ಮೇಲೆ ರಶ್ಮಿಕಾ-ದೇವರಕೊಂಡ ಲವ್ ಕೆಮಿಸ್ಟ್ರಿ

ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಡಿಯರ್ ಕಾಮ್ರೆಡ್ ನ ಟ್ರೇಲರ್ ರಿಲೀಸ್ ಆಗಿದೆ. ಗೀತ ಗೋವಿದಂ ಸಿನಿಮಾದಂತೆಯೇ ರಶ್ಮಿಕಾ ದೇವರಕೊಂಡ ಕೆಮಿಸ್ಟ್ರಿ ತೆರೆ ಮೇಲೆ ಸಖತ್ ಆಗಿ ಕಾಣಿಸಿಕೊಂಡಿದೆ. ಸ್ಟುಡೆಂಟ್ ಲೀಡರ್ ಆಗಿ ವಿಜಯ್ ದೇವರಕೊಂಡ, ಕ್ರಿಕೆಟರ್ ಆಗಿ ರಶ್ಮಿಕಾ ಡಿಯರ್ ಕಾಮ್ರೇಡ್ ನಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾದಂತೆಯೇ ಈ ಸಿನಿಮಾದಲ್ಲೂ ಕೂಡ ಲವ್ ಬ್ರೇಕಪ್ ಆದಾಗ ಹೇಗೆ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ರೋ ಹಾಗೆಯೇ ಗಡ್ಡ ಬಿಟ್ಟುಕೊಂಡು ಕಿರುಚಾಡಿರೋ ದೃಶ್ಯಗಳು ಟ್ರೇಲರ್ ನಲ್ಲಿ ಕಾಣಸಿಗ್ತಿವೆ. ಇನ್ನು ರಶ್ಮಿಕಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ವಿವಾದ, ಟ್ರೋಲ್ ಗಳಿಗೆ ಎಡೆಮಾಡಿಕೊಟ್ಟಿದ್ದ ಲಿಪ್ ಲಾಕ್ ಸೀನ್ ಈ ಸಿನಿಮಾದಲ್ಲೂ ರಶ್ಮಿಕಾ ದೇವರಕೊಂಡ ಕಾಂಬಿನೇಷನ್ ನಲ್ಲಿ ಮೂಡಿಬಂದಿದೆ.  ಟೀಸರ್, ಸಾಂಗ್ಸ್ ಗಳಿಂದ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ ಡಿಯರ್ ಕಾಮ್ರೇಡ್.  ಟ್ರೇಲರ್ ರಿಲೀಸ್ ಆದ ಎರಡೇ ಗಂಟೆಗಳಲ್ಲಿ ಸುಮಾರು ನಾಲ್ಕು ಮುಕ್ಕಾಲು ಲಕ್ಷ ವಿವ್ಸ್ ಕಲೆಹಾಕಿದೆ. ಜುಲೈ 26 ರಂದು ಡಿಯರ್ ಕಾಮ್ರೇಡ್ ಚಿತ್ರ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಮೂಡಿಬರಲಿದೆ.

ಲವ್, ರೊಮ್ಯಾನ್ಸ್, ಆ್ಯಕ್ಷನ್, ಎಮೋಷನ್ ಸೇರಿದಂತೆ ಕಂಪ್ಲೀಟ್ ಪ್ಯಾಕೇಜ್ ಇರೋ ಸಿನಿಮಾ ಡಿಯರ್ ಕಾಮ್ರೇಡ್.  ಭರತ್ ಕಮ್ಮ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್ ಎರ್ನೇನಿ, ಯಲಮಂಚಿಲಿ ರವಿಶಂಕರ್, ಮೋಹನ್ ಚೆರುಕೂರಿ, ಯಶ್ ರಂಗಿನೇನಿ ನಿರ್ಮಿಸಿದ್ದಾರೆ. 
ಜಸ್ಟಿನ್ ಪ್ರಭಾಕರನ್ ಸಂಗೀತ ಡಿಯರ್ ಕಾಮ್ರೇಡ್ ಚಿತ್ರಕ್ಕಿದೆ.,