ಫೈನಲ್‌ಗೆ ಒಂದೆಜ್ಜೆ ದೂರದಲ್ಲಿ ಡೆಲ್ಲಿ ಮತ್ತು ಚೆನ್ನೈ : ಹೊರಗುಳಿದ ಸನ್ ರೈಸರ್ಸ್

ಫೈನಲ್‌ಗೆ ಒಂದೆಜ್ಜೆ ದೂರದಲ್ಲಿ ಡೆಲ್ಲಿ ಮತ್ತು ಚೆನ್ನೈ : ಹೊರಗುಳಿದ ಸನ್ ರೈಸರ್ಸ್

ವಿಶಾಖಪಟ್ಟಣ: ನಿನ್ನೆ ನಡೆದ ಐಪಿಎಲ್‌ ಪ್ಲೇಆಫ್ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ತಂಡವನ್ನು ಸೋಲಿಸಿ ಕ್ವಾಲಿಫೈಯರ್ 2 ಪಂದ್ಯಕ್ಕೆ ಆಯ್ಕೆಯಾಗಿದೆ. 

2 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಹೈದರಾಬಾದ್ ತಂಡವನ್ನು ಸರಣಿಯಿಂದ ಹೊರದಬ್ಬಿದೆ.  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು. 

ಬಳಿಕ ಬ್ಯಾಟಿಂಗ್‌ಗೆ ಬಂದ ಡೆಲ್ಲಿ ತಂಡದ ಪೃಥ್ವಿ ಶಾ 38 ಎಸೆತಗಳಲ್ಲಿ 56 ರನ್ ಗಳಿಸಿದರೆ 18ನೇ ಓವರ್‌ನಲ್ಲಿ 21 ರನ್ ಕಲೆ ಹಾಕುವ ಮೂಲಕ ಪಂಥ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 

ಕ್ವಾಲಿಫೈಯರ್ 2 ಗೆ ಆಯ್ಕೆಯಾಗಿರುವ ಡೆಲ್ಲಿ ತಂಡ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್‌ಗೆ ಎದುರಾಳಿಯಾಗಿ ಆಡಲಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಹೋಗಲಿದೆ.