ದವೀಂದರ್ ಪ್ರಕರಣ; ಎನ್‌ಐಎ ಹೇಗೆ ನಿಭಾಯಿಸಲಿದೆ?

ಸಿಂಗ್ ಒಬ್ಬರು ವಿವಾದಾತ್ಮಕ ಅಧಿಕಾರಿ. ಇವರು ಕಳೆದ ಗುರುವಾರ ವಿದೇಶಾಂಗ ಸಚಿವಾಲಯವು ಕಾಶ್ಮೀರದ ಮಾರ್ಗದರ್ಶಿ ಪ್ರವಾಸಕ್ಕಾಗಿ ರಾಯಭಾರಿಗಳ ಗುಂಪನ್ನು ಕಳಿಸಿದಾಗ ಯುನೈಟೆಡ್ ಸ್ಟೇಟ್ಸ್ ರಾಯಭಾರಿ ಸೇರಿದಂತೆ ವಿದೇಶಿ ಗಣ್ಯರನ್ನು ಭೇಟಿಯಾಗಿರುವ ಸತ್ಯಗಳನ್ನು ಈ ತನಿಖೆಯಲ್ಲಿ ಪರಿಗಣಿಸಲಾಗುತ್ತದೆ.

ದವೀಂದರ್ ಪ್ರಕರಣ; ಎನ್‌ಐಎ ಹೇಗೆ ನಿಭಾಯಿಸಲಿದೆ?

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಕೈಯಲ್ಲಿ ಶನಿವಾರ ಇಬ್ಬರು ಶಂಕಿತ ಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದ ಪೊಲೀಸ್ ಉಪ ವರಿಷ್ಠಾಧಿಕಾರಿ ದವೀಂದರ್ ಸಿಂಗ್ ಅವರ ಪ್ರಕರಣವನ್ನು ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಆತುರವಾಗಿ ಹಸ್ತಾಂತರಿಸುತ್ತಿರುವುದು ಭದ್ರತೆಯ ಬಗ್ಗೆ ಅತಂಕ ಹುಟ್ಟಿಸುತ್ತಿರುವುದಷ್ಟೇ ಅಲ್ಲದೇ ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಹಿಜ್-ಉಲ್-ಮುಜಾಹಿದ್ದೀನ್‌ನ ಮಿಲಿಟರಿ ಕಮಾಂಡರ್ ಆಗಿರುವ ಭಯೋತ್ಪಾದಕ ಸೈಯದ್ ನವೀದ್ ಮುಷ್ತಾಕ್ ಹಾಗೂ ಇನ್ನೊಬ್ಬ ಉಗ್ರನನ್ನು ಭಾನುವಾರ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸುತ್ತಿದ್ದಂತೆಯೇ, ಇನ್ಸ್‌ಪೆಕ್ಟರ್‌ ಜನರಲ್ ವಿಜಯಕುಮಾರ್ ಅವರು ಸಿಂಗ್ ಅವರ ನಿವಾಸದಿಂದ ಮೂರು ಎಕೆ-47 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಸಿಂಗ್ ಅವರನ್ನು ಭಯೋತ್ಪಾದಕರೆಂದು ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ.

ಜನವರಿ 26ರಂದು ನಡೆದ ಗಣರಾಜ್ಯೋತ್ಸವದ ಮೆರವಣಿಗೆ ಮತ್ತು ಫೆ.8ರಂದು ನಡೆಯಲಿರುವ ದೆಹಲಿಯ ಚುನಾವಣೆಯಲ್ಲಿನ ಹೆಚ್ಚಿನ ಭದ್ರತೆಯ ಕುರಿತು ಕುಮಾರ್ ಗಮನ ಸೆಳೆದಿದ್ದರೂ, ಕೇಂದ್ರ ಗೃಹ ಸಚಿವಾಲಯ 24 ಗಂಟೆಯೊಳಗೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ತಿಳಿಸಿದೆ.

ಸಿಂಗ್ ಒಬ್ಬರು ವಿವಾದಾತ್ಮಕ ಅಧಿಕಾರಿ. ಇವರು ಕಳೆದ ಗುರುವಾರ ವಿದೇಶಾಂಗ ಸಚಿವಾಲಯವು ಕಾಶ್ಮೀರದ ಮಾರ್ಗದರ್ಶಿ ಪ್ರವಾಸಕ್ಕಾಗಿ ರಾಯಭಾರಿಗಳ ಗುಂಪನ್ನು ಕಳಿಸಿದಾಗ ಯುನೈಟೆಡ್ ಸ್ಟೇಟ್ಸ್ ರಾಯಭಾರಿ ಸೇರಿದಂತೆ ವಿದೇಶಿ ಗಣ್ಯರನ್ನು ಭೇಟಿಯಾಗಿರುವ ಸತ್ಯಗಳನ್ನು ಈ ತನಿಖೆಯಲ್ಲಿ ಪರಿಗಣಿಸಲಾಗುತ್ತದೆ. ಹಾಗೆಯೇ ಸಿಂಗ್ ಶ್ರೀನಗರದ ಶಿವಪೊರಾದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮಂಟ್ ಎದುರಿನ ತಮ್ಮ ಮನೆಯಲ್ಲಿ ಇಬ್ಬರು ಭಯೋತ್ಪಾದಕರಿಗೆ ಆತಿಥ್ಯ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಂಗ್ ಒಟ್ಟು ಮೂರು ಆಸ್ತ್ರಗಳನ್ನು ಹೊಂದಿದ್ದಾರೆ. ಪೊಲೀಸರು ಕಳೆದ ವರ್ಷ ಜನವರಿಯಲ್ಲಿ ಎಇಎಸ್‌ಪಿ ಗುಪ್ತಚರ ವಿಭಾಗಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಅವರ ಆಸ್ತಿಯು ಅಸಾಧಾರಣ ಎಂದು ತಿಳಿಸಿತ್ತು.
2001ರ ಸಂಸತ್ತಿನ ದಾಳಿ ತನಿಖೆ ಸಮಯದಲ್ಲಿ ಸಿಂಗ್ ಅವರ ಹೆಸರು ಹೆಚ್ಚಾಗಿ ಕೇಳಿ ಬಂದರೂ ಗುಪ್ತಚರ ವಿಭಾಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇನ್ನು 2013ರಲ್ಲಿ ಗಲ್ಲಿಗೇರಿಸಲಾದ ಅಫ್ಜಲ್‌ ಗುರು ಭಯೋತ್ಪಾದಕರಲ್ಲಿ ಒಬ್ಬರೊಂದಿಗೆ ಅವರನ್ನು ಬಲವಂತವಾಗಿ ಕಳಿಸಲಾಗಿದೆ ಎಂದು ಸಿಂಗ್ ಆರೋಪಿಸಿದ್ದರು.

ಅಫ್ಜಲ್‌ ಗುರು ವಕೀಲ ಸುಶೀಲ್ ಕುಮಾರ್ ತಮ್ಮ ಕೈಯಿಂದ ಗುರು ಬರೆದ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಆ ಪತ್ರದಲ್ಲಿ ದ್ರಾವಿಂದರ್ ಸಿಂಗ್ ಎಂದು ಕರೆಯಲ್ಪಡುವ ದವೀಂದರ್ ಅವರ ವಿವರಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಗುರುವನ್ನು ಪರಿಚಯಿಸುವಲ್ಲಿ ಒಬ್ಬ ವ್ಯಕ್ತಿ ಸಂಸತ್ತಿನ ಮೇಲೆ ದಾಳಿ ನಡೆಸಿದ. 2000 ರಲ್ಲಿ ದವೀಂದರ್ ಸಿಂಗ್ ಅವರನ್ನು ಭೇಟಿಯಾದ ಸಂದರ್ಭವನ್ನು ಮೊದಲು ವಿವರಿಸಿ ನಂತರ ದವೀಂದರ್ ಮತ್ತು ಅವರ ಸಹಾಯಕ ಶಾಂತಿ ಸಿಂಗ್ ಅವರನ್ನು ಎಸ್‌ಟಿಎಫ್ ಶಿಬಿರದಲ್ಲಿ ಹಿಂಸಿಸಿದರು. ನಂತರ ಅವರಿಂದ ಹಣವನ್ನು ಸುಲಿಗೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

 ಒಂದು ದಿನ ಅಲ್ತಾಫ್ ನನ್ನನ್ನು ದವೀಂದರ್ ಸಿಂಗ್ ಬಳಿ ಕರೆದೊಯ್ದರು. ನಾನು ಅವನಿಗಾಗಿ ಒಂದು ಚಿಕ್ಕ ಕೆಲಸವನ್ನು ಮಾಡಬೇಕಿತ್ತು. ನಾನು ದೆಹಲಿಯ ಕುರಿತು ಚೆನ್ನಾಗಿ ತಿಳಿದಿದ್ದರಿಂದ ಒಬ್ಬನನ್ನು ದೆಹಲಿಗೆ ಕರೆದುಕೊಂಡು ಹೋಗಿ ಅವನಿಗೊಂದು ಬಾಡಿಗೆ ಮನೆಯ ವ್ಯವಸ್ಥೆಯನ್ನು ಮಾಡಬೇಕು ಎಂದು ಸಿಂಗ್ ಹೇಳಿದರು. ಅವನು ಯಾರು ಎಂದು ನನಗೆ ತಿಳಿದಿರಲಿಲ್ಲ. ಆದರೆ ಅವನು ಕಾಶ್ಮೀರಿ ಮಾತನಾಡದಿದ್ದದ್ದನ್ನು ಕಂಡು ಕಾಶ್ಮೀರದವನಲ್ಲ ಎಂದು ಗೊತ್ತಾಗಿತ್ತು. ಆದರೆ ಸಿಂಗ್ ಹೇಳಿದ್ದನ್ನು ನಾನು ಮಾಡಲೆಬೇಕಿತ್ತು. ಅವನನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೆ. ಆಗ ಅವರು ಕಾರು ಖರೀದಿಸಲು ಇಚ್ಛಿಸಿದರು. ಹಾಗಾಗಿ ನಾನು ಅವರೊಂದಿಗೆ ಕರೋಲ್ ಬಾಗ್‌ಗೆ ಹೋದೆ. ಕಾರನ್ನು ಖರೀದಿಸಿದ ನಂತ ಅವರು ದೆಹಲಿಯಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದರು. ಹಾಗೂ ಸಿಂಗ್ ಅವರಿಂದ ಹಲವಾರು ಕರೆಗಳು ನನಗೆ ಬಂದವು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಅಧಿಕಾರಿಗಳು ಸಿಂಗ್ ಅವರನ್ನು ತನಿಖೆ ಮಾಡಲಿಲ್ಲ ಹಾಗಾಗಿ ಇದನ್ನು ಅರಿತು ಅಫ್ಜಲ್ ಅಪರಾಧದ ನಂತರ ಆಂತರಿಕ ಭದ್ರತೆಯಲ್ಲಿ ಅವರನ್ನು ದೂರ ಇರಿಸಲಿಲ್ಲ. ಗುಪ್ತಚರದಿಂದಲೂ ಪ್ರತಿತನಿಖೆ ಕೂಡ ನಡೆದಿಲ್ಲ. ನಾನು ಈ ಅಂಶವನ್ನು ತಿಳಿಯಲು ಪ್ರಯತ್ನಿಸಿದಾಗ, ಭದ್ರತಾ ವ್ಯವಸ್ಥೆಯಲ್ಲಿರುವ ಹಿರಿಯ ಅಧಿಕಾರಿಯೊಬ್ಬರು, ಸಿಂಗ್ ರಾಕ್ಷಸನಾಗಿ ಬದಲಾಗುವವರೆಗೂ ದೇಶಕ್ಕೆ ಒಂದು ಆಸ್ತಿಯಂತಿದ್ದರು. ಆದರೆ ಅವರು ರಾಕ್ಷಸರಾಗಿ ಬದಲಾವಣೆಯಾಗಿರುವು ವಿಚಾರಣೆಯ ವಿಷಯವಾಗಬೇಕು. ಆದರೆ ಅನಗತ್ಯ ಅಸ್ಥಿಪಂಜರಗಳು ಕಿರುಕೋಣೆಯಿಂದ ಹೊರಬರುವ ಅಪಾಯ ಯಾವಾಗಲೂ ಇರುತ್ತೆ ಎಂದು ಎರಡು ಅರ್ಥಗಳಲ್ಲಿ ಉತ್ತರವನ್ನು ನೀಡಿದರು ಎಂದು ಹೇಳಲಾಗಿದೆ.

ಭಾರತೀಯ ಜನತಾ ಪಕ್ಷದ ಮುಖಂಡ ಜಸ್ವಂತ್ ಸಿಂಗ್ ಅವರು ಒಮ್ಮೆ ರಹಸ್ಯ ಸೇವಾ ಫಂಡ್ ಹಣವನ್ನು ಬಯಸಿದ್ದರು. ಅದು ಸಾವಿರಾರು ಕೋಟಿ ರೂಪಾಯಿಗಳನ್ನು ಲೆಕ್ಕಪರಿಶೋಧನೆಗೆ ಒಳಪಡುವಂತೆ ಮಾಡಿತು. ಇದಕ್ಕೆ ಸಂಸತ್ತಿನ ಮೇಲ್ವಿಚಾರಣೆಯನ್ನು ಹೊಂದಿರಬೇಕಾದ್ದರಿಂದ ಈ ಯೋಜನೆಯ ಮುಖ್ಯಸ್ಥ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಥಾನದಿಂದ ಇಳಿಸಲಾಯಿತು.

ಸಿಂಗ್ ಅವರ ಪ್ರಕರಣವನ್ನು ಎನ್‌ಐಎಗೆ ವಹಿಸುವುದರಿಂದ ‘ಆಸ್ತಿ ಹೊಡೆದ ಪುಂಡ’ನನ್ನು ರಕ್ಷಿಸಲು ರಾಜ್ಯವು ಎಷ್ಟರ ಮಟ್ಟಿಗೆ ಪ್ರಯತ್ನಿಸುತ್ತಿದೆ ಎಂಬುದು ತಿಳಿದು ಬರುತ್ತದೆ. ಕೇಂದ್ರದಿಂದ ನೇಮಕಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ, ಸಿಂಗ್ ಒಬ್ಬ ಭಯೋತ್ಪಾದಕ ಎಂದು ಪರಿಗಣಿಸಬೇಕು ಎಂದು ಹೇಳಿದ್ದರು ಎಂಬ ಸಂಗತಿಯನ್ನೂ ಪತ್ರದಲ್ಲಿ ವಿವರಿಸಲಾಗಿದೆ.

ಎನ್‌ಐಎ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಏಕೆಂದರೆ ಸಿಂಗ್ ವಿರುದ್ಧ ಇರುವ ಪ್ರಾಥಮಿಕ ಸಾಕ್ಷಿಯು ಅವರನ್ನು ಸದೆಬಡಿಯುವಂತಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉನ್ನತ ಅಧಿಕಾರಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಎನ್‌ಐಎ ದೃಷ್ಟಿಕೋನವನ್ನು ಹೊಂದುವುದಾದರೇ ಅದು ರಾಷ್ಟ್ರೀಯ ಭದ್ರತಾ ಸ್ಥಾಪನೆಯ ವಿಶ್ವಾಸಾರ್ಹತೆಗೆ ಧಕ್ಕೆ ಆಗಲಿದೆ.