ದಕ್ಷಿಣ ಕನ್ನಡ : ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಪಾಪಿ ಮಕ್ಕಳು

ದಕ್ಷಿಣ ಕನ್ನಡ : ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಪಾಪಿ ಮಕ್ಕಳು

ದಕ್ಷಿಣ ಕನ್ನಡ : ಕ್ಷುಲ್ಲಕ ಕಾರಣಕ್ಕೆ ಸ್ವಂತ ಮಕ್ಕಳೇ ತಂದೆಯನ್ನು ಮಚ್ಚಿನಿಂದ ಕಡಿದು ಕೊಂದಿರುವ ಪೈಶಾಚಿಕ ಕೃತ್ಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿ ಧರ್ನಪ್ಪ ಪೂಜಾರಿ (65), ಎಂದು ಗುರುತಿಸಲಾಗಿದ್ದು, ಮಕ್ಕಳಾದ ಮೋನಪ್ಪ ಮತ್ತು ನವೀನ ಈ ಇಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ ಇಬ್ಬರನ್ನು ಉಪ್ಪಿನಂಗಡಿ ಪೋಲಿಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಧರ್ನಪ್ಪ ಪೂಜಾರಿಯವರು ಮನೆಯಲ್ಲಿಯೇ ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದರು. ಆಗಾಗ ತಂದೆ ಜೊತೆಗೆ ಜಗಳ ಮಾಡುತ್ತಿದ್ದ ಇಬ್ಬರು ಮಕ್ಕಳು ನಿನ್ನೆ ಮಧ್ಯರಾತ್ರಿಯೂ ಯಾವುದೋ ವಿಚಾರಕ್ಕೆ ತಂದೆ ಮಕ್ಕಳ ಮಧ್ಯೆ ಜಗಳ ನಡೆದಿದೆ ಆದರೆ ಕೊಲೆ ಮಾಡುವಂತಹ ಕಾರಣ ೇನಿತ್ತು ಎಂಬುದು ತನಿಖೆ ನಂತರ ತಿಳಿದು ಬರಲಿದೆ ೆಂದು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.