ಕುಟುಂಬದ ಹತ್ಯೆ ಮಾಡಲು ಬಂದವನೇ ಕೊಲೆಯಾದ

ಕುಟುಂಬದ ಹತ್ಯೆ ಮಾಡಲು ಬಂದವನೇ ಕೊಲೆಯಾದ

ಜಾರ್ಖಂಡ್ ನ ಗುಮಲಾ ನಗರದಲ್ಲಿ ಪಿಎಲ್‌ಎಫ್‌ಐ ಕಮಾಂಡರ್ ಹತ್ಯೆ ನಡೆದಿದೆ. ಸ್ನೇಹಿತರ ಜೊತೆ ಕಮಾಂಡರ್ ಮಹಿಳೆ ಮನೆಗೆ ಬಂದಿದ್ದ. ಮಹಿಳೆ ಕುಟುಂಬಸ್ಥರ ಮೇಲೆ ಕಮಾಂಡರ್ ಹಲ್ಲೆ ನಡೆಸುವ ಮೊದಲೇ ಮಹಿಳೆ ಧೈರ್ಯಮಾಡಿ ಆತನ ಮೇಲೆ ದಾಳಿ ನಡೆಸಿದ್ದಾಳೆ. ಕಮಾಂಡರ್ ಬಸಂತ್ ಗೋಪಾಲ್ ಗಾಯಗೊಂಡಿದ್ದ. ಆತನನ್ನು ಕರೆದುಕೊಂಡು ಸ್ನೇಹಿತರು ಕಾಡಿಗೆ ಓಡಿದ್ದರು. ಮರುದಿನ ಶವ ಕಾಡಿನಲ್ಲಿ ಸಿಕ್ಕಿದೆ.

ಬಸಂತ್ ಗೋಪಾಲ್ ಕಾರಣಕ್ಕೆ ಮಹಿಳೆ ಕುಟುಂಬಸ್ಥರು ಊರು ಬಿಟ್ಟಿದ್ದರಂತೆ. ಬಸಂತ್, ಆಸ್ತಿ, ಹಣ ನೀಡುವಂತೆ ಪೀಡಿಸುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಮಹಿಳೆ ಕುಟುಂಬಸ್ಥರು ಊರಿಗೆ ಬಂದಿದ್ದರಂತೆ. ಮಂಗಳವಾರ ರಾತ್ರಿ ಸ್ನೇಹಿತರ ಜೊತೆ ಮಹಿಳೆ ಕುಟುಂಬಸ್ಥರ ಹತ್ಯೆಗೆ ಬಸಂತ್ ಬಂದಿದ್ದ ಎನ್ನಲಾಗಿದೆ.

ಬಾಗಿಲು ಒಡೆದು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಬಸಂತ್ ಮೇಲೆ ಮಹಿಳೆ ಹಲ್ಲೆ ನಡೆಸಿದ್ದಾಳೆ. ಬಸಂತ್ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.