ಲಾಕ್ ಡೌನ್ ಅದೇಶ  ಪಾಲಿಸುವಂತೆ ಜನರಲ್ಲಿ 'ಕ್ರಿಕೆಟ್ ತಾರೆ' ಮನವಿ

ಲಾಕ್ ಡೌನ್ ಅದೇಶ  ಪಾಲಿಸುವಂತೆ ಜನರಲ್ಲಿ 'ಕ್ರಿಕೆಟ್ ತಾರೆ' ಮನವಿ

ಜಾಗತಿಕ ಪಿಡುಗಾಗಿರುವ ಕೊರೋನಾ ವೈರಾಣು ಸೋಂಕು ಭಾರತದಲ್ಲೂ ಮರಣ ಮೃದಂಗವಾಡುತ್ತಿದ್ದು ದೇಶದಲ್ಲಿ ಇದೀಗ 15 ಬಲಿ ಪಡೆದುಕೊಂಡಿದ್ದು,ಸರಿಸುಮಾರು 600 ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೊರೊನಾದಿಂದ ಹೊರಬರಲು ಇಡೀ ವಿಶ್ವವೇ ಹೆಣಗಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ  ಈಗಾಗಲೇ  21 ದಿನಗಳ ಕಾಲ ಲಾಕ್​ಡೌನ್​ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ  ಅನೇಕ ಕ್ರೀಡಾ  ದಿಗ್ಗಜರು  ಕೂಡ ಪ್ರಧಾನಿ ಮೋದಿ  ನಿರ್ಧಾರವನ್ನು ಬೆಂಬಲಿಸಿ ಮನೆಯಲ್ಲಿಯೇ ಇರುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಮೂಲಕ ದೇಶದ ಜನರಲ್ಲಿ ಮನವಿ ಮಾಡಿರುವ ಭಾರತದ ಕ್ರಿಕೆಟ್ ತಾರೆ  ಶ್ರೇಯಸ್​ ಅಯ್ಯರ್​ 

"ಮಹಮಾರಿ  ಕೊರೊನಾ ವೈರಸ್​ ವಿರುದ್ಧ ಹೋರಾಟ ಮಾಡಲು ಮನೆಯಲ್ಲಿ ಉಳಿದುಕೊಳ್ಳುವುದು ಅನಿವಾರ್ಯ. ಕೊರೋನಾ ವಿರುದ್ಧ ಇಡೀ ದೇಶವೇ ಸಮರ ಸಾರಿದ್ದು, ನಿಮ್ಮ ಮನೆಯಲ್ಲಿ ಉಳಿದುಕೊಂಡು ಸೋಂಕು ಹೊಡೆದೊಡಿಸಲು ನಿಮ್ಮ ಕೊಡುಗೆ ನೀಡಬೇಕಾದ ಅನಿವಾರ್ಯತೆ ಇದೆ.

ಕೊರೋನಾ ವಿರುದ್ಧ ಹೋರಾಡಲು ಸರ್ಕಾರ, ಪೊಲೀಸ್​, ಆರೋಗ್ಯ ಇಲಾಖೆ, ವೈದ್ಯರು ಸೇರಿದಂತೆ  ಇಲಾಖೆಗಳು ಹಗಲು-ರಾತ್ರಿ ದುಡಿಯುತ್ತಿದ್ದು, ಇದೀಗ ನಾವು ಕೂಡ ಇದರಲ್ಲಿ ಭಾಗಿಯಾಗುವ ಅವಶ್ಯಕತೆ  ಇದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗಡೆ ಹೋಗುವಂತೆ  ಮನವಿ ಮಾಡಿಕೊಂಡಿದ್ದಾರೆ.