ಸೌರಾಷ್ಟ್ರ ಪರ ಪೂಜಾರ ಅಜೇಯ 162ರನ್: ಸಂಕಷ್ಟದಲ್ಲಿ ಕರ್ನಾಟಕ ರಣಜಿ ತಂಡ

ಸೌರಾಷ್ಟ್ರ ಪರ ಪೂಜಾರ ಅಜೇಯ 162ರನ್: ಸಂಕಷ್ಟದಲ್ಲಿ ಕರ್ನಾಟಕ ರಣಜಿ ತಂಡ

ರಾಜಕೋಟ್: ಕರ್ನಾಟಕ ಮತ್ತು ಸೌರಾಷ್ಟ್ರ ಗಳ ನಡುವೆ ರಾಜಕೋಟ್‌ ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ  ಚೇತೇಶ್ವರ್ ಪೂಜಾರ ಅವರ  ಅಜೇಯ 162 ರನ್ ಬಲದಿಂದ ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿ ಸೌರಾಷ್ಟ್ರ ಕರ್ನಾಟಕವನ್ನು  ಆಟಗಾರರನ್ನು  ದಿನ ಪೂರ್ತಿ ಕಾಡಿದರು.


ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಆರಂಭಿಕ ಆಘಾತ ಅನುಭವಿಸಿ. 33 ರನ್ ಗಳಿಸುವಷ್ಟರಲ್ಲಿ  2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಚೇತೇಶ್ವರ್ ಪೂಜಾರ ಮತ್ತು ಶೆಲ್ಡಾನ್ ಜ್ಯಾಕ್ಸನ್ 3ನೇ ವಿಕೆಟ್​ಗೆ 263 ರನ್​ ಗಳ ಜೊತೆಯಾಟದ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಪೂಜಾರ ಅಜೇಯ 162 ರನ್ ಗಳಿಸಿದರೆ, ಶೆಲ್ಡನ್ ಜ್ಯಾಕ್ಸನ್ ಅಜೇಯ 99 ರನ್ ಭಾರಿಸಿ ಶತಕಕ್ಕೆ ಕೇವಲ 1 ರನ್ ಅಂತರದಲ್ಲಿದ್ದು ಎರಡನೇ ದಿನಕ್ಕೆ ಕ್ರಿಸ್ ಭದ್ರಪಡಿಸಿಕೊಂಡಿದ್ದಾರೆ.