ಸಾವೆಂಬುದು ಕಾಡುವ ಬಗೆ ಹೀಗೆ…..

ಒಂದೊಂದು ಸಾವು ಕೂಡ ಮನುಷ್ಯನನ್ನು ಬೆಚ್ಚಿ ಬೀಳಿಸುತ್ತದೆ. ಇನ್ನು ನೋಡಲಾಗದು ಎಂಬ ನೋವು ಕಾಡುತ್ತದೆ. ಬದುಕಿದ್ದರೆ ಬೆನ್ನಾದರೂ ನೋಡಬಹುದು ಎಂದು ಹಿರಿಯರು ಹೇಳುತ್ತಾರೆ. ಸಿಟ್ಟು, ದ್ವೇಷ, ಅಸೂಯೆ  ಬದುಕಿರುವ ನಮ್ಮನ್ನೇ ಕೊಲ್ಲುತ್ತದೆ. 

ಸಾವೆಂಬುದು ಕಾಡುವ ಬಗೆ ಹೀಗೆ…..

ಆಗಿದ್ದಿಷ್ಟು. ನಾಲ್ಕೈದು ವಾರಗಳ ಹಿಂದೆ ವಾಟ್ಸ್ ಆಪ್ ನಲ್ಲಿ ನನಗೊಂದು ಸಂದೇಶ ಬಂದಿತ್ತು. ಚನ್ನಪ್ಪ ಅವರು ಇನ್ನಿಲ್ಲ ಎಂಬುದು ಅದರ ಸಾರಾಂಶ. ಅದನ್ನು ನಂಬುವುದಕ್ಕೆ ನನ್ನ ಮನಸ್ಸು ಸಿದ್ಧವಿರಲಿಲ್ಲ. ಅದಕ್ಕಿಷ್ಟೇ ಕಾರಣ. ಚನ್ನಪ್ಪ ಅವರನ್ನು ನಾನು ಈವರೆಗೆ ಭೇಟಿಯಾಗಿರಲೇ ಇಲ್ಲ. ಫೇಸ್ ಬುಕ್ ಮೂಲಕ ಸ್ನೇಹಿತರಾದವರು. ಒಮ್ಮೆಯೂ ಭೇಟಿಯಾಗದಿದ್ದರೂ ಅಪಾರ ಪ್ರೀತಿ, ಗೌರವದಿಂದ ನನ್ನನ್ನು ಕಂಡವರು. ಅವರು ಸೆಂಟ್ರಲ್ ಕಾಲೇಜಿನಲ್ಲಿ ನಮ್ಮ ಮೇಷ್ಟ್ರ(ಪಿ.ಲಂಕೇಶ್) ವಿದ್ಯಾರ್ಥಿಯಾಗಿದ್ದರೆಂದು ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಚಲನಚಿತ್ರ ನಿರ್ದೇಶಕ ಆಪಾಡಂಡ ಟಿ.ರಘು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರಿಗಿದ್ದ ಆರ್ಥಿಕ ಸಮಸ್ಯೆಯ ಬಗ್ಗೆ ಚಲನಚಿತ್ರ ಪತ್ರಕರ್ತರೊಬ್ಬರು ಫೇಸ್ ಬುಕ್ ನಲ್ಲಿ ಬರೆದಿದ್ದನ್ನೇ ಶೇರ್ ಮಾಡಿಕೊಂಡಿದ್ದೆ. ಅದನ್ನು ನೋಡಿದ ಚನ್ನಪ್ಪ ಅವರು ಆಸ್ಪತ್ರೆಗೆ ಹೋಗಿ ರಘು ಅವರಿಗೆ ತಮ್ಮಿಂದಾದ ನೆರವು ನೀಡಿ ಅವರ ಆರೋಗ್ಯದ ಬಗ್ಗೆ ಆಗಿಂದಾಗ್ಗೆ ವಿಚಾರಿಸುತ್ತಾ ನನಗೂ ಮಾಹಿತಿ ನೀಡುತ್ತಿದ್ದರು.  ನನ್ನ ಪತ್ನಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಪ್ರತಿ ದಿನವೂ ತಮ್ಮ ಕುಟುಂಬದವರಂತೆ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದರು. ಅವರ ಪತ್ನಿ ಡಾ.ಪರಿಮಳಾ ಕೂಡ ತಮಗಿರುವ ಸಂಪರ್ಕ ಮೊದಲಾದ ನೆರವು ಪಡೆದುಕೊಳ್ಳುವಂತೆ ಆಗಿಂದಾಗ್ಗೆ ಸೂಚಿಸುತ್ತಿದ್ದರು. ನನ್ನ ಸಂಕೋಚದ ಸ್ವಭಾವದಿಂದಾಗಿ ಚನ್ನಪ್ಪ ಮತ್ತು ಅವರ ಮನೆಯವರನ್ನು ನನಗೆ ಭೇಟಿಯಾಗುವುದು ಸಾಧ್ಯವೇ ಆಗಲಿಲ್ಲ. ಹಾಗಿದ್ದರೂ ನಮ್ಮ ನಡುವಿನ ಭಾವನಾತ್ಮಕ ಸಂಬಂಧದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ.

ಹೀಗೆ ಒಮ್ಮಿಂದೊಮ್ಮೆಗೇ ಚನ್ನಪ್ಪ ಇನ್ನಿಲ್ಲ ಎಂದರೆ ನನಗೆ ಹೇಗಾಗಿರಬೇಡ? ಚನ್ನಪ್ಪನವರ ನಂಬರ್ ನಿಂದಲೇ ಬಂದ ಸಂದೇಶ. ಚನ್ನಪ್ಪನವರೇ ನಾನು ಅವರ ಮನೆಗೆ ಬರಬೇಕೆಂದು ಏನಾದರೂ ಇಂಥದ್ದೊಂದು ಸುಳ್ಳು ಮಾಹಿತಿ ನೀಡಿರಬಹುದೇ? ಅವರು ಸತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿಲ್ಲದ ನನ್ನ ಮನಸ್ಸು ಇಂಥೆಲ್ಲ ಪ್ರಶ್ನೆಗಳ ತಾಣವಾಗಿಬಿಟ್ಟಿತ್ತು. ನಮ್ಮ ನಡುವಿನದು ನೇರವಾಗಿ ಭೇಟಿಯಾಗದಿದ್ದರೂ ಅಂತರಂಗದ ಆಳದಲ್ಲಿ ಬೇರುಬಿಟ್ಟಿದ್ದ ಆತ್ಮೀಯ ಸಂಬಂಧ. ಗಂಡ, ಹೆಂಡತಿ ಇಬ್ಬರೂ ಅತ್ಯಾಪ್ತರಾಗುವುದಕ್ಕೆ ಅವರಲ್ಲಿದ್ದ ಮನುಷ್ಯತ್ವವೇ ಕಾರಣವಾಗಿತ್ತು.ಅವರ ನಿಸ್ವಾರ್ಥ ಪ್ರೀತಿಯೇ ಸಂಬಂಧವನ್ನು ನೀರೆರೆದು ಪೋಷಿಸಿತ್ತು. ಆದರೆ ಅವರ ಸಾವು ದಿಟವೇ ಆಗಿದ್ದರೆ ಹಿಂದೆಂದೂ ಭೇಟಿಯಾಗದ ಅವರ ಪತ್ನಿ, ಮಗಳನ್ನು ಎದುರಿಸುವುದು ಹೇಗೆಂಬುದೇ ನನ್ನ ಅತಿ ದೊಡ್ಡ ಸಮಸ್ಯೆಯಾಗಿತ್ತು. ಅವರ ಫೇಸ್ ಬುಕ್ ಪೇಜ್ ನೋಡಿದ ಮೇಲೆ ಅವರು ಸತ್ತಿರುವುದು ಖಾತ್ರಿಯಾಗಿತ್ತು. ಅವರ ಸಂಬಂಧಿಯೊಬ್ಬರು ಮಾಡಿದ್ದ ಪೋಸ್ಟ್ ನಾನು ಸುಳ್ಳಾಗಲಿ ಎಂದು ಬಯಸಿದ್ದು ಸತ್ಯವೆಂದು ಹೇಳಿತ್ತು. ಅಲ್ಲಿಂದ ಇಲ್ಲಿವರೆಗೆ ಅವರ ಮನೆಗೆ ಹೋಗಿ ಪತ್ನಿ, ಮಕ್ಕಳನ್ನು ಮಾತಾಡಿಸಿಕೊಂಡು ಬರಬೇಕೆಂದು ಎಷ್ಟೋ ಸಲ ಅಂದುಕೊಂಡಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಯಾರ್ಯಾರೋ ನಿಧನರಾದಾಗಲೆಲ್ಲ ಹೋಗಿ ನೋಡಿ ಬಂದಿದ್ದೇನೆ. ಆದರೆ ಚನ್ನಪ್ಪನವರನ್ನು ಕಳೆದುಕೊಂಡಾಗ ಅದನ್ನು ಎದುರಿಸುವುದು ನನಗೆ ಯಾಕೆ ಸಾಧ್ಯವಾಗುತ್ತಿಲ್ಲ? ಇದು ಪ್ರಶ್ನೆಯಾಗಿಯೇ ಉಳಿದಿದೆ. ಹಾಗೆ ಕಾಡುತ್ತಿದೆ ನೋವುಅವರನ್ನುಸಹಕಾರಸಹಚಾರಿ ಎಂದು ಕರೆಯುವ ಒಂದು ದೊಡ್ಡ ಬಳಗವೇ ಇದೆ ಎನ್ನುವುದು ನನಗೆ ಗೊತ್ತಾಗಿದ್ದು ಅವರ ನಿಧನದ ನಂತರ ಏರ್ಪಡಿಸಿದ್ದ ರಂಗನಮನ ಎಂಬ ಆಹ್ವಾನಪತ್ರಿಕೆ ನೋಡಿದಾಗಲೇ. ಅಂಥ ವ್ಯಕ್ತಿತ್ವ ನನ್ನೊಳಗೂ ಸಂಬಂಧ ಬೆಸೆದಿತ್ತು. ಅದಕ್ಕಾಗಿ ನಾನು ಕೃತಜ್ಞ.

ಹಾಗೇ ನನ್ನ ಕ್ಲಾಸ್ ಮೇಟ್ ಮ್ಯಾಗಿ ಕೂಡ ನೆನಪಾಗಿಯಷ್ಟೇ ಉಳಿಯುವ ಲೋಕಕ್ಕೆ ತೆರಳಿದ್ದಾಳೆ. ಆಕೆ ಅಪೂರ್ವ ಸುಂದರಿ. ತೆಳ್ಳಗೆ, ಬೆಳ್ಳಗೆ ಎಂದು ಹೆಣ್ಣಿನ ಸೌಂದರ್ಯವನ್ನು ಮೆಚ್ಚಿಕೊಳ್ಳುವ ರೀತಿಯಲ್ಲಿ ಉದಾಹರಣೆಯಂತಿದ್ದವಳು. ಸೇಂಟ್ ಮೈಖೇಲ್ಸ್ ನಲ್ಲಿ ಪ್ರಾಥಮಿಕ ಶಾಲಾ ದಿನಗಳಿಂದಲೂ ನನ್ನ ಸಹಪಾಠಿಯಾಗಿದ್ದವಳು. ನನ್ನೊಂದಿಗೆ ಉಳಿದವರಿಗಿಂತಲೂ ಹೆಚ್ಚಿನ ಒಡನಾಟ ಇದ್ದವಳು. ಅದೇನಾಯಿತೋ ಏನೋ ಹೈಸ್ಕೂಲ್ ನಂತರ ಆಕೆಯ ಭೇಟಿ ಸಾಧ್ಯವಾಗಿರಲೇ ಇಲ್ಲ. ನಮ್ಮ ಮನೆಯ ಹತ್ತಿರವೇ ಇದ್ದ ಬಾಡಿಗೆ ಮನೆಯನ್ನು ಬಿಟ್ಟು ಬೇರೆಲ್ಲಿಗೋ ತೆರಳಿದ್ದರಂತೆ. ಅದೊಂದು ದಿನ ಸೇಂಟ್ ಜೋಸೆಫ್ಸ್ ಕಾನ್ವೆಂಟ್ ನಲ್ಲಿ ಅಧ್ಯಾಪಕಿಯಾಗಿದ್ದಾಳೆಂದು ಯಾರೋ ಹೇಳಿ ಅಲ್ಲಿಗೂ ಹೋದರೂ ಅವಳನ್ನು ನೋಡುವುದು ಸಾಧ್ಯವಾಗಿರಲಿಲ್ಲ. ಅವತ್ತು ರಜೆಯೋ, ಅಲ್ಲಿ ಕೆಲಸ ಬಿಟ್ಟಿದ್ದಾಳೆಂದೋ ಏನೋ ಹೇಳಿದ್ದರು. ಮಡಿಕೇರಿಗೆ ಹೋದಾಗಲೆಲ್ಲ ಮ್ಯಾಗಿಯನ್ನು ನೋಡುವುದಕ್ಕಾಗಿಯೇ ತಪಸ್ಸಿನಂತೆ ಪ್ರಯತ್ನಿಸಿದ್ದೆ. ಸಾಧ್ಯವಾಗಲೇ ಇಲ್ಲ. ನನ್ನ ಬದುಕಿನ ಕೆಲವು ನಿರಾಶೆಯ ಘಟನೆಗಳಲ್ಲಿ ಮ್ಯಾಗಿಯ ಹುಡುಕಾಟವೂ ಒಂದು. ಇತ್ತೀಚೆಗಷ್ಟೇ ಗೊತ್ತಾಯಿತು. ಮ್ಯಾಗಿ ಬ್ರೇನ್ ಹ್ಯಾಮರೇಜ್ ನಿಂದ ತೀರಿಕೊಂಡಳೆಂದು. ಒಂದು ಹನಿ ಕಣ್ಣಂಚಿನಿಂದ ಕೆನ್ನೆಗೆ ಜಾರಿತು.

ಹಾಗೆ ಉರುಬನ್ ಮಸ್ಕರೆನಾಸ್ ಸಾವಿನ ಸುದ್ದಿ. ನನ್ನ ಪಕ್ಕದ ಮನೆಯ ಗೆಳೆಯ. ಪದವಿಯಲ್ಲಿ ನನ್ನ ಕ್ಲಾಸ್ ಮೇಟ್. ಈತ ಬಾಲ್ಯದಿಂದಲೂ ಒಳ್ಳೆಯ ಕ್ರೀಡಾಪಟು. ಉರುಬನ್ ಮನೆಯಲ್ಲಿ ಅಥವಾ ಅವರ ಕುಟುಂಬದ ಎಲ್ಲ ಸದಸ್ಯರು ಒಬ್ಬೊಬ್ಬರೂ ಪ್ರತಿಭಾವಂತ ಕ್ರೀಡಾಪಟುಗಳು. ಓಟ, ಫುಟ್ ಬಾಲ್, ಕ್ರಿಕೆಟ್, ಕಬಡ್ಡಿ ಎಲ್ಲದರಲ್ಲೂ ಅವರ್ಯಾರನ್ನೂ ಮೀರಿಸುವವರಿರಲಿಲ್ಲ. ಅವರ ಸಹೋದರರದೇ ಒಂದು ಕ್ರಿಕೆಟ್ ಟೀಂ ಮಾಡಬಹುದಿತ್ತು. ಅಷ್ಟು ಬಲಿಷ್ಠ ತಂಡವಾಗುತ್ತಿತ್ತು. ಎಲ್ಲರಿಗೂ ಅಂಥ ಧೈರ್ಯ. ಶಿಸ್ತುಬದ್ಧ ಅಭ್ಯಾಸ, ಸವಾಲೆಸೆಯುವಂಥ ಕ್ರೀಡಾಪ್ರತಿಭೆಗಳು. ಒಂದೊಂದು ಸಾವು ಕೂಡ ಮನುಷ್ಯನನ್ನು ಬೆಚ್ಚಿ ಬೀಳಿಸುತ್ತದೆ. ಇನ್ನು ನೋಡಲಾಗದು ಎಂಬ ನೋವು ಕಾಡುತ್ತದೆ. ಬದುಕಿದ್ದರೆ ಬೆನ್ನಾದರೂ ನೋಡಬಹುದು ಎಂದು ಹಿರಿಯರು ಹೇಳುತ್ತಾರೆ. ಸಿಟ್ಟು, ದ್ವೇಷ, ಅಸೂಯೆ  ಬದುಕಿರುವ ನಮ್ಮನ್ನೇ ಕೊಲ್ಲುತ್ತದೆಈಗಿನಿಂದ ಯಾವುದೇ ಕ್ಷಣವಾದರೂ ಹೋಗಬಹುದಾದ ಜೀವವನ್ನು ಇತರರು ಭಾವನಾತ್ಮಕವಾಗಿಯೂ ಕಳೆದುಕೊಳ್ಳುವುದು ಸಾಧ್ಯವಿಲ್ಲ. ದ್ವೇಷ ಬೇಕೆ