ದಿವಾಳಿತನ ನಿಭಾಯಿಸಲೂ ಬಂತು ಕೋರ್ಸ್

ದಿವಾಳಿತನ ನಿಭಾಯಿಸಲೂ ಬಂತು ಕೋರ್ಸ್

ದೆಹಲಿ: ಪಾಪರ್ ಚೀಟಿ ತೆಗೆದುಕೊಳ್ಳುವುದು, ಸೋಡಾ ಚೀಟಿ ತೆಗೆದುಕೊಳ್ಳುವುದು ಎಂಬ ಆಡುಭಾಷೆಯಲ್ಲಿನ ದಿವಾಳಿತನವನ್ನ ಸಾಮಾನ್ಯ ವ್ಯಕ್ತಿಯಿಂದಿಡಿದು ದೊಡ್ಡ ದೊಡ್ಡ ಕಂಪನಿಗಳಲ್ಲೂ ಇರುವಂಥದ್ದು. ನಮ್ಮ ರಾಷ್ಟ್ರದಲ್ಲೂ ವಾರ್ಷಿಕವಾಗಿ ರೋಗಗ್ರಸ್ತವಾಗುತ್ತಿರುವ ಕೈಗಾರಿಕೆಗಳ ಸಂಖ್ಯೆ ಸಾಕಷ್ಟಿವೆ.

  ದಿವಾಳಿತನ ತಡೆಯುವುದಕ್ಕಾಗಿಯೇ ಈಗ ಶಿಕ್ಷಣದಲ್ಲಿ ಒಂದು ಕೋರ್ಸ್‍ನ್ನ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ದೆಹಲಿಯಲ್ಲಿ ಆರಂಭಿಸಲಾಗುತ್ತಿದೆ. ಸನ್ನದು ಲೆಕ್ಕಿಗರು, ವೆಚ್ಚ ನಿರ್ವಹಣಾ ಲೆಕ್ಕಿಗರು, ಕಾನೂನು,ಎಂಬಿಎ, ಇಂಜಿನಿಯರಿಂಗ್, ಅರ್ಥಶಾಸ್ತ್ರ, ವಾಣಿಜ್ಯ, ಹಣಕಾಸು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಇಪ್ಪತ್ತೆಂಟು ವರ್ಷ ವಯೋಮಾನದವರು ವರ್ಷಕ್ಕೆ ಹನ್ನೆರಡೂವರೆ ಲಕ್ಷ ರು.ಶುಲ್ಕ ತೆತ್ತು ಎರಡು ವರ್ಷಗಳ ಈ ಕೋರ್ಸ್‍ಗೆ ಸೇರಬಹುದು.(ಶಿಷ್ಯ ವೇತನ ಮುಖೇನ ಶೇ.40 ರಷ್ಟು ಶುಲ್ಕ ವಿನಾಯ್ತಿ ಸಿಗಬಹುದು)

 ಭಾರತೀಯ ದಿವಾಳಿತನ ಮಂಡಳಿಯು ಮಾನ್ಯತೆ ಕೊಟ್ಟಿರುವ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಪೇರ್ಸ್(ಐಸಿಸಿಎ) ಎರಡು ವರ್ಷದ ಪದವಿ ಕೋರ್ಸ್‍ನಲ್ಲಿ ದಿವಾಳಿತನವನ್ನ ನಿಭಾಯಿಸುವ ಕಲೆಯನ್ನ ಕಲಿಸಲಿದೆ. ಈ ಕೋರ್ಸ್‍ನ್ನು ಮುಗಿಸಿದ ಹತ್ತು ವರ್ಷಗಳ ನಂತರವೂ ಪರೀಕ್ಷೆ ಬರೆದು ಪಾಸಾಗಬಹುದು.

 ಎರಡು ವರ್ಷಕ್ಕೆ 25 ಲಕ್ಷದಷ್ಟು ಶುಲ್ಕವನ್ನೆ ಪಾವತಿಸಿ, ಈ ಕೋರ್ಸ್‍ಗೆ ಸೇರಿ ಪರೀಕ್ಷೆಯಲ್ಲಿ ತೇರ್ಗಡೆಯಾಗದವರೇ ದಿವಾಳಿಯಾಗದಿದ್ದರೆ ಸಾಕು.