ದೇಶಾದ್ಯಂತ ಲಾಕ್‌ಡೌನ್ :'ಅಗತ್ಯ ವಸ್ತುಗಳ' ಕುರಿತು ಗೃಹ ಸಚಿವ ಅಮಿತ್ ಷಾ ಟ್ವೀಟ್

ದೇಶಾದ್ಯಂತ ಲಾಕ್‌ಡೌನ್ :'ಅಗತ್ಯ ವಸ್ತುಗಳ' ಕುರಿತು ಗೃಹ ಸಚಿವ ಅಮಿತ್ ಷಾ ಟ್ವೀಟ್

ದೆಹಲಿ: ಕರೋನವೈರಸ್ ಬಗ್ಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ  ರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ ಇಡೀ ದೇಶದಲ್ಲಿ ಲಾಕ್‌ಡೌನ್  ಘೋಷಿಸಿದ್ದಾರೆ. ಇದು ಒಂದು ರೀತಿಯಲ್ಲಿ ಕರ್ಫ್ಯೂ ಆಗಿದೆ ಎಂದು ಪ್ರಧಾನಿ ಹೇಳಿದರು. ಇದು ಸಾರ್ವಜನಿಕ ಕರ್ಫ್ಯೂಗಿಂತ ಹೆಚ್ಚು ಕಟ್ಟುನಿಟ್ಟಾಗಿದೆ. ಕರೋನಾ ವಿರುದ್ಧ ಹೋರಾಡಲು ತೆಗೆದುಕೊಂಡ ಈ ಹೆಜ್ಜೆ ಬಹಳ ಅವಶ್ಯಕ. ನಿಮ್ಮ ಜೀವವನ್ನು ಉಳಿಸಲು, ನಿಮ್ಮ ಕುಟುಂಬವನ್ನು ಉಳಿಸುವುದು ಭಾರತ ಸರ್ಕಾರದ, ದೇಶದ ಪ್ರತಿಯೊಂದು ರಾಜ್ಯ ಸರ್ಕಾರದ, ಪ್ರತಿ ಸ್ಥಳೀಯ ಸಂಸ್ಥೆಯ ದೊಡ್ಡ ಆದ್ಯತೆಯಾಗಿದೆ ಎಂದವರು ತಿಳಿಸಿದರು.

ಇದರ ನಂತರ, ಗೃಹ ಸಚಿವ ಅಮಿತ್ ಶಾ  ಅವರು ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗುವುದಿಲ್ಲ ಎಂದು ಇಡೀ ದೇಶವಾಸಿಗಳಿಗೆ ಭರವಸೆ ನೀಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, 'ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗುವುದಿಲ್ಲ ಎಂದು ನಾನು ಎಲ್ಲಾ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳ ಜೊತೆಗೆ ಇದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಯಾರೂ ಭಯಪಡಬೇಕಾಗಿಲ್ಲ, ಈ ಹೋರಾಟದಲ್ಲಿ ಇಡೀ ದೇಶ ಒಟ್ಟಾಗಿದೆ' ಎಂದು ಧೈರ್ಯ ತುಂಬಿದ್ದಾರೆ.

मैं समस्त देशवासियों को आश्वस्त करता हूँ कि लॉकडाउन के समय देश में आवश्यक चीजों की कोई कमी नहीं होगी।

केंद्र सरकार सभी राज्य सरकारों के साथ मिलकर इसके लिए पर्याप्त प्रयास कर रही है।

किसी को भी घबराने की ज़रूरत नहीं है, इस लड़ाई में पूरा देश एक साथ है। https://t.co/4n0JCsTuZb

— Amit Shah (@AmitShah) March 24, 2020