ಭಾರತದಲ್ಲಿ ಕೊರೊನಾವೈರಸ್‌ ಪ್ರಕರಣಗಳ ಸಂಖ್ಯೆ 562ಕ್ಕೆ ಏರಿಕ್ಕೆ

ಭಾರತದಲ್ಲಿ  ಕೊರೊನಾವೈರಸ್‌ ಪ್ರಕರಣಗಳ ಸಂಖ್ಯೆ    562ಕ್ಕೆ ಏರಿಕ್ಕೆ

ಮಧುರೈ: ತಮಿಳು ನಾಡಿನಲ್ಲಿ ಮೊದಲ ಕೊರೊನಾವೈರಸ್‌ನಿಂದಾಗಿ  ಸಾವು ಸಂಭವಿಸಿದದ್ದು, ಈ ಮೂಲಕ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಲ್ಲದೆ ದೇಶದಲ್ಲಿ ಹೊಸ ಪ್ರಕರಣದ ಸಂಖ್ಯೆ  562 ಕ್ಕೆ ಏರಿದೆ,

ಬೆಳಗ್ಗೆ ಮಧುರೈಯ ಅಣ್ಣಾ ನಗರದಲ್ಲಿ 54 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ತಮಿಳು ನಾಡು ರಾಜ್ಯದಲ್ಲಿ ಇದು ಮೊದಲ ಕೊರೋನಾ ವೈರಸ್ ಸಾವು ಪ್ರಕರಣವಾಗಿದೆ.

ತಮಿಳು ನಾಡು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರು ಕೊರೊನಾವೈರಸ್‌ ರೋಗಿಯ ಸಾವನ್ನು ದೃಢಪಡಿಸಿದ್ದಾರೆ. ಮಧುರೈಯ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ವ್ಯಕ್ತಿಯಲ್ಲಿ ಸುದೀರ್ಘ ಕಾಲದಿಂದ ಕಾಯಿಲೆಯಿತ್ತು ಎಂದು ವೈದ್ಯಕೀಯ ವರದಿ ಹೇಳುತ್ತದೆ.