ಇಂಡೋ ಕೆನಡಿಯನ್‌ ಸಂಸದೆಗೆ ಕೊರೋನಾ ಸೋಂಕು ಪಾಸಿಟಿವ್‌

ಇಂಡೋ ಕೆನಡಿಯನ್‌ ಸಂಸದೆಗೆ ಕೊರೋನಾ ಸೋಂಕು ಪಾಸಿಟಿವ್‌

ದೆಹಲಿ : ಇಂಡೋ ಕೆನಡಿಯನ್ ರಾಜಕಾರಣಿಯೊಬ್ಬರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಈ ಸೋಂಕು ತಗುಲಿರುವ ಮೊದಲ ಕೆನಡಾ ರಾಜಕಾರಣಿಯಾಗಿದ್ದಾರೆ.

ಸೋಂಕಿತ ಮಹಿಳೆ ಕಮಲ್‌ ಖೆರಾ ಪಶ್ಚಿಮ ಬ್ರಾಂಪ್ಟನ್‌ ಕ್ಷೇತ್ರದ ಸಂಸದೆಯಾಗಿದ್ದು, ಗ್ರೇಟರ್‌ ಟೊರೊಂಟೋ ಏರಿಯಾದಲ್ಲಿರುವ ಪೀಲ್‌ ಮೆಮೋರಿಯಲ್‌ ಹಾಸ್ಪಿಟಲ್‌ ನಿಂದ ಬಂದ ಪರೀಕ್ಷಾ ವರದಿಯಿಂದ ಸೋಂಕು ಇರುವುದು ದೃಢಪಟ್ಟಿದೆ.

ಈ ಕುರಿತು ಟ್ವೀಟ್‌ ಮೂಲಕ ತನಗೆ ಸೋಂಕು ಇರುವುದನ್ನು ಘೋಷಿಸಿಕೊಂಡಿರುವ ಇದಕ್ಕೆ ಪ್ರತಿಕ್ರಯೆ ನೀಡಿರುವ ಪ್ರಧಾನಿ ಜಸ್ಟೀಸ್‌ ಟ್ರಡೆಯೋ ಅದಷ್ಟು ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ರೋಗ ಲಕ್ಷಣಗಳ ಬಗ್ಗೆ ವಿವರಿಸಿರುವ ಖೆರಾ ಶನಿವಾರ ರಾತ್ರಿ ಜ್ಷರ ಕಾಮಿಸಿಕೊಂಡಿತು ತಕ್ಷಣವೇ ಪ್ರತ್ಯೇಕವಾಗಿ ಇರುವುದನ್ನು ಆರಂಭಿಸಿದೆ. ಈಗಲೂ ಅಂತಹದೇ ರೋಗ ಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ ಕೆನಡಾದಲ್ಲಿ ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಾಮಾರಿಯು ಸಾಕಷ್ಟು ಕುಟುಂಬಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಮೂಲತಃ ನರ್ಸ್‌ ಆಗಿರುವ ಖೆರಾ ಕೆನಡಾದಲ್ಲಿ ನರ್ಸ್‌ ಗಳ ಸಮಸ್ಯೆ ಇರುವುದರಿಂಧ ಅವರೇ ನರ್ಸ್‌ ಕೆಲಸವನ್ನು ಮಾಡುತ್ತಿದ್ದರು ಅವರಿಗೆ ಸೋಂಕು ಹೇಗೆ ಹರಡಿತು ಎಂಬುದು ತಿಳಿದು ಬಂದಿಲ್ಲ ಆದರೆ ಅವರು ಲಂಡನ್‌ ಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಖೆರಾ ಮೂಲತಃ ಭಾರತದ ಪಂಜಾಬ್‌ ನವರಾಗಿದ್ದಾರೆ.