ಕೊರೋನಾ ಭೀತಿ: ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ -13 ನಡೆಸಲು ಬಿಸಿಸಿಐ ಚಿಂತನೆ

ಕೊರೋನಾ ಭೀತಿ: ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ -13 ನಡೆಸಲು ಬಿಸಿಸಿಐ ಚಿಂತನೆ

ದಹೆಲಿ: ಕೊರೋನಾ ವೈರಸ್ ಭೀತಿಯಿಂದಾಗಿ ರದ್ದಾಗುವ ಭೀತಿಯಲ್ಲಿರುವ ಐಪಿಎಲ್ 2020 ಟೂರ್ನಿಯನ್ನು ಜುಲೈ-ಸೆಪ್ಟೆಂಬರ್ ತಿಂಗಳಿಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.

ಕೋವಿಡ್-19ನಿಂದಾಗಿ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಈಗಾಗಲೇ ನಡೆಯುವ ಬಗ್ಗೆ ಎಲ್ಲರಲ್ಲಿಯೂ ಅನುಮಾನ ಮೂಡಿದೆ. ಬರುವ ತಿಂಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ದೇಶದಲ್ಲಿ 13ನೇ ಆವೃತ್ತಿ ಐಪಿಎಲ್ ನಡೆಸುವುದರ ಬಗ್ಗೆ ಬಿಸಿಸಿಐ ಸಾಧಕ-ಬಾಧಕಗಳ ಬಗ್ಗೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ. ಇದರ ಭಾಗವಾಗಿ ಜುಲೈ - ಸೆಪ್ಟೆಂಬರ್ ನಲ್ಲಿ ಟೂರ್ನಿ ನಡೆಸುವ ಕುರಿತಂತೆಯೂ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಯೋಚಿಸುತ್ತಿದೆ.

ಮಾರ್ಚ್ 14ರಂದು ಬಿಸಿಸಿಐ ಅಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿ ಗೊಂದಲಕ್ಕೀಡಾಗಿರುವ ಐಪಿಎಲ್ ಆಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಸಿದರಾದರೂ ಯಾವುದೇ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದು ಪ್ಲಾನ್ ಬಿಯಂತೆ ಕಂಡು ಬಂದಿದೆ. ಆದರೆ ಎ ಪ್ಲಾನ್ ನಲ್ಲಿ ಇದನ್ನು ಜಾರಿಗೊಳಿಸಲಾಗದು ಎನ್ನಲಾಗಿದೆ.