ಸೆನ್ಸೆಕ್ಸ್ 700 ಅಂಶ ಜಿಗಿತ, ನಿಫ್ಟಿ ಮತ್ತೆ 8,400ರ ಮೇಲಕ್ಕೆ

ಸೆನ್ಸೆಕ್ಸ್ 700 ಅಂಶ ಜಿಗಿತ, ನಿಫ್ಟಿ ಮತ್ತೆ 8,400ರ ಮೇಲಕ್ಕೆ

ಮುಂಬೈ: ಕರೊನಾ ಸೋಂಕು ವ್ಯಾಪಕಾಗಿ ಹರಡುತ್ತಿರುವ ಕಾರಣ ತಲ್ಲಣಗೊಂಡಿರುವ ಷೇರುಪೇಟೆ ಕುಸಿಯುತ್ತ ಸಾಗಿತ್ತು. ನಿನ್ನೆ ಸ್ವಲ್ಪ ಚೇತರಿಕೆ ತೋರಿದ್ದ ಭಾರತೀಯ ಷೇರುಪೇಟೆ ಇಂದು ಕೂಡ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ.

ಗುರುವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 700ಕ್ಕೂ ಹೆಚ್ಚು ಅಂಶ ಏರಿಕೆ ತೋರಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ನಿಫ್ಟಿ) ಕೂಡ 150ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದೆ.
ಮೂವತ್ತು ಷೇರುಗಳ ಸೆನ್ಸೆಕ್ಸ್​ ಆರಂಭಿಕ ವಹಿವಾಟಿನಲ್ಲಿ 713.76 ಅಂಶ(2.30%) ಏರಿಕೆ ತೋರಿದ್ದು 29,249.54ರಲ್ಲಿ ವಹಿವಾಟು ಶುರುಮಾಡಿಕೊಂಡಿತ್ತು. ಇದೇ ರೀತಿ 50 ಷೇರುಗಳ ನಿಫ್ಟಿ 167.95 ಅಂಶ (2.02%) ಏರಿಕೆ ದಾಖಲಿಸಿ 8,485.80 ಅಂಶದಲ್ಲಿ ವಹಿವಾಟು ಆರಂಭಿಸಿದೆ.